ಕಲಬುರಗಿ : ಪ್ರಚೋದನಾಕಾರಿ ಭಾಷಣ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡುತ್ತಾರೆಂದು ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕಲ್ಬುರ್ಗಿ ಜಿಲ್ಲೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾ ಆಡಳಿತ ಆದೇಶ ಹೊರಡಿಸಿತು ಇದೀಗ ಈ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಚಕ್ರವರ್ತಿ ಸೂಲಿಬೆಲೆಗೆ ಹೈಕೋರ್ಟ್ ಅವಕಾಶ ನೀಡಿದೆ.
ಚಿತಾಪುರದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಕಲಬುರಗಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಸೂಲಿಬೆಲೆಗೆ ಕಲಬುರಗಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಅದರಂತೆ ಜಿಲ್ಲಾ ಪೊಲೀಸರು ಭಾಲ್ಕಿಯಿಂದ ಕಲಬುರಗಿಗೆ ಆಗಮಿಸುತ್ತಿದ್ದ ಚಕ್ರವರ್ತಿ ಸೂಲಿಬಲೆ ಅವರನ್ನು ಕಮಲಾಪುರ ಬಳಿಯೇ ವಶಕ್ಕೆ ಪಡೆದು ಹಳ್ಳಿಖೇಡ ಊರಲ್ಲಿ ರಾತ್ರಿ ತಂಗುವಂತೆ ಮಾಡಿದ್ದರು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.
ನೀವು ದೇಶ ಪ್ರೇಮಿಗಳಲ್ಲ ‘ದ್ವೇಷದ ಪ್ರೇಮಿಗಳು’ : ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ
ಅದಕ್ಕೆ ಎಸ್ಪಿಯವರ ಪತ್ರ, ಅವರು ನೀಡಿರುವಂತಹ ಶಾಂತಿ ಭಂಗದ ಕಾರಣಗಳನ್ನು ಉಲ್ಲೇಖಿಸಿ ಫೆ. 28 ರಿಂದ ಮಾ.4ರ ವರೆಗೂ ಸೂಲಿಬೆಲೆ ಅವರಿಗೆ ಕಲಬುರಗಿ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಕೋರ್ಟ್ ತೀರ್ಪಿನಿಂದಾಗಿ ಸಂಜೆ ಚಿತ್ತಾಪುರಕ್ಕೆ ಹೋಗಿ ನಮೋ ಬ್ರಿಗೇಡ್ ಆಯೋಜಿಸಿದ್ದ ಸಮಾರಂಭಧಲ್ಲಿ ಸೂಲಿಬೆಲೆ ಪಾಲ್ಗೊಂಡಿದ್ದಾರೆ.
BREAKING : ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ : ಪಾರ್ಟಿ ಕೊಡಿಸುವ ನೆಪದಲ್ಲಿ ಕೊಲೆ