ಬೆಂಗಳೂರು : ಬೆಂಗಳೂರಲ್ಲಿ ನಿಯಮ ಮೀರಿ ಕಾನೂನು ಉಲ್ಲಂಘನೆ ಮಾಡಿ ಫ್ಲೆಕ್ಸ್ ಹಾಗೂ ಹೋರ್ಡಿಂಗ್ ಗಳ ಅವಳ ಹೆಚ್ಚಾಗಿದ್ದು ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವಾದ್ದರಿಂದ ಹೈಕೋರ್ಟ್ ಬಿಬಿಎಂಪಿ ಆಯುಕ್ತಹಾಗೋ ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದು, ಜುಲೈ 26ರ ಒಳಗಾಗಿ ಕಾರಣ ನೀಡುವಂತೆ ನೋಟಿಸ್ ನೀಡಿದೆ.
ಹೌದು ಬೆಂಗಳೂರಿನಲ್ಲಿ ಅಕ್ರಮ ಫ್ಲೇಕ್ಸ್ ಗಳ ಹಾವಳಿ ಸಂಬಂಧ ಇಂದು ಹೈಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಯಿತು.
ಬೆಂಗಳೂರಿನಲ್ಲಿ ಅಕ್ರಮ ಫ್ಲೆಕ್ಸ್ ಹೋರ್ದಿಂಗ್ಸ್ ಹಾವಳಿ ಹಿನ್ನೆಲೆ ಕ್ರಮ ಕೈಗೊಳ್ಳದ ಬಿಬಿಎಂಪಿ ಪೊಲೀಸ್ ಇಲಾಖೆಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ 6.8 ಲಕ್ಷ ಅಕ್ರಮ ಜಾಹೀರಾತುಗಳಿವೆ ಎಂಬ ವರದಿ ಇದೆ.
ರಸ್ತೆಗಳಲ್ಲಿ ಅಕ್ರಮ ಹೋರ್ಡಿಂಗ್ ಹಾವಳಿ ಮುಂದುವರೆದಿದೆ. ಅಕ್ರಮ ಜಾಹೀರಾತುಗಳಿಂದ ಪಾದಚಾರಿಗಳಿಗೆ ಸಮಸ್ಯೆ ಹಾಗೂ ಸಂಚಾರದ ದಟ್ಟನೆಗೆ ಕಾರಣವಾಗಿದೆ. ಕೋರ್ಟ್ ಆದೇಶಗಳಿದ್ದರೂ ಸಂಬಂಧಪಟ್ಟ ಪ್ರಾಧಿಕಾರಗಳು ಈ ಆದೇಶವನ್ನು ಪಾಲಿಸಿಲ್ಲ. ನ್ಯಾಯಾಂಗ ನಿಂದನೆ ಏಕೆ ದಾಖಲಿಸಬಾರದು ಎಂದು ನೋಟಿಸ್ ನೀಡಲಾಗಿದೆ. ಬಿಬಿಎಂಪಿ ಆಯುಕ್ತ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಜುಲೈ 26ರ ಒಳಗೆ ಉತ್ತರಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಸರ್ಕಾರದ ಅನುಮೋದನೆ ಯೊಂದಿಗೆ ಜಾಹೀರಾತು ನಿಯಮ ರೂಪಿಸಲಾಗಿದೆ.ಬಿಬಿಎಂಪಿ ಜಾಹಿರಾತು ಸಂಬಂಧ ಕರಡು ಬೈಲ ಪ್ರಕಟಿಸಬೇಕಿಲ್ಲ ಎಂದು ಹೈ ಕೋರ್ಟಿಗೆ ಎಎಪಿ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದರು. ಅಕ್ರಮ ಜಾಹೀರಾತು ತಡೆಗೆ ವಿಫಲವಾದರೆ 1 ಲಕ್ಷ ತಂಡ ನೀಡಬೇಕೆಂದು ಆದೇಶವಿದೆ. ಪ್ರತೀ ಅಕ್ರಮ ಜಹಿರಾತು ತಡೆಗೆ ವಿಫಲವಾದರೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಎಂದು ಆದೇಶವಿದೆ. ಆದರೂ ಕೋರ್ಟ್ ಆದೇಶ ಪಾಲಿಸಲು ಬಿಬಿಎಂಪಿ ನಿರ್ಲಕ್ಷ ತೋರಿದೆ. ಫ್ಲೆಕ್ಸ್ ಹಾವಳಿ ತಡೆಯಲು ಸದಾ ಕಾಲವು ಸನ್ನದ್ಧವಾಗಿರಬೇಕು 5ನೇ ಗೇರ್ ನಲ್ಲಿ ಕೆಲಸ ಮಾಡಲು ಬಿಬಿಎಂಪಿಗೆ ಸೂಚನೆ ನೀಡಿದೆ