ಬೆಂಗಳೂರು : ಬೇಡ ಜಂಗಮರ ಜಾತಿ ಪ್ರಮಾಣ ಪತ್ರ ಬಳಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಯತ್ನಿಸುತ್ತಿದ್ದ ಬಿಜೆಪಿಯ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರರಾದ ಎಂ.ಪಿ.ದಾರಕೇಶ್ವರಯ್ಯ ಪ್ರಯತ್ನಕ್ಕೆ ಹೈಕೊರ್ಟ್ ತಡೆವೊಡ್ಡಿತ್ತು. ಅದನ್ನು ಇದೀಗ ಏ.16 ರವರೆಗೆ ವಿಸ್ತರಿಸಿ ನ್ಯಾಯಮೂರ್ತಿ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.
ಈ ಕುರಿತು ದಾಸರಹಳ್ಳಿಯ ಎಂ ಚಂದ್ರ ಬಿನ್ ಮುನಿಯಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಇವರು ಈ ಮೊದಲು ಬೆಂಗಳೂರು ಉತ್ತರ ತಹಶೀಲ್ದಾರ್ ಅವರಿಂದ ಪಡೆದಿದ್ದ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದಾಗಿದ್ದು, ಈಗ ಪುನಃ ಬೆಂಗಳೂರು ದಕ್ಷಿಣ ತಹಶೀಲ್ದಾರ್ಯಿಂದ ಇದೆ ರೀತಿಯ ಜಾತಿ ಪ್ರಮಾಣ ಪತ್ರ ಪಡೆದಿದ್ದರು.
ಈ ಹಿನ್ನಲೆ ಇದು ಸಂಪೂರ್ಣ ಕಾನೂನು ಬಾಹಿರ ಆಗಿದ್ದು, ಮುಂದಿನ ವಿಚಾರಣೆವರೆಗೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಬಳಸದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಅದನ್ನು ಇದೀಗ ಏ.16 ರವರೆಗೆ ವಿಸ್ತರಿಸಿ ನ್ಯಾಯಮೂರ್ತಿ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.