ಬೆಂಗಳೂರು: ಅಪಘಾತಕ್ಕೆ ಈಡಾದ ವಿಮೆ ಇಲ್ಲದ ವಾಹನಗಳನ್ನು ವಾಹನಗಳನ್ನು ಷರತ್ತು ಬದ್ದವಾಗಿ ಬಿಡುಗಡೆ ಮಾಡುವಂತೆಗ ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣವೊಂದರ ಮೇಲ್ನನವಿ ಆಲಿಸಿದ ನ್ಯಾಯಾಪೀಠ ಈ ಆದೇಶವನ್ನು ಹೊರಡಿಸಿದೆ.
ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಚೌಡೇಶ್ವರಿ ನಗರದ ನಿವಾಸಿ ಗಣೇಶ್ ಎಂಬುವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು ಅರ್ಜಿ ವಿಚಾರಣೆ ನಡೆಸಿದ ಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಕೆಳಹಂತ ನ್ಯಾಯಾಲವು ನೀಡಿದ ಆದೇಶವನ್ನು ರದ್ದು ಮಾಡಿ. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ, ಇದಲ್ಲದೇಱ ಶಿಕ್ಷೆಗೆ ಗುರಿಯಾಗಿದ್ದಾರೆ. ಅರ್ಜಿದಾರರ ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂಬ ಕಾರಣ ನೀಡಿ ವಾಹನ ಬಿಡುಗಡೆ ಮಾಡುವುದಕ್ಕೆ ನಿರಾಕರಣೆ ಮಾಡುವಂತಿಲ್ಲ ಅರ್ಜಿದಾರರಿಗೆ ಅಗತ್ಯ ಷರತ್ತುಗಳನ್ನು ವಿಧಿಸಿ ವಾಹನ ಬಿಡುಗಡೆಗೆ ಸೂಚನೆ ನೀಡಿ ಆದೇಶಿಸಿದೆ.