ಬೆಂಗಳೂರು: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಂತ ವಿಚಾರವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದಂತ ರಿಟ್ ಅರ್ಜಿಯ ವಿಚಾರಣೆ ನಡೆಯಿತು. ಅಡ್ಪೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ವಿಚಾರಣೆಯನ್ನು ಸೆಪ್ಟೆಂಬರ್.12ಕ್ಕೆ ಮುಂದೂಡಿದೆ.
ಇಂದು ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡಂತ ಏಕಸದಸ್ಯ ನ್ಯಾಯಪೀಠದಲ್ಲಿ ಸಿಎಂ ಸಿದ್ಧರಾಮಯ್ಯ ತಮ್ಮ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದಂತ ರಿಟ್ ಅರ್ಜಿಯ ವಿಚಾರಣೆ ನಡೆಸಲಾಯಿತು. ಹೈಕೋರ್ಟ್ ನ್ಯಾಯಪೀಠದ ಮುಂದೆ ಎಜಿ ಶಶಿಕಿರಣ್ ಶೆಟ್ಟಿ ಅವರು ವಾದಿಸಿದರು.
ಸಿಎಂ ಸಿದ್ಧರಾಮಯ್ಯ ಕೈಗೊಂಡ ನಿರ್ಧಾರ, ಶಿಫಾರಸ್ಸಿನಲ್ಲಿ ಅಪರಾಧದ ಅಂಶವಿರಬೇಕು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಢಿನೋಟಿಫಿಕೇಷನ್ ಕೇಸನ್ನು ಉಲ್ಲೇಖಿಸಿದಂತ ಅವರು, ಆ ಪ್ರಕರಣದಲ್ಲಿ ಅವರು ತೀರ್ಮಾನ ಕೈಗೊಂಡಿದ್ದರು. ಆದರೇ ಈ ಕೇಸಲ್ಲಿ ಸಿದ್ಧರಾಮಯ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಿಎಂ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ ಎಂದರು.
ಸಿದ್ಧರಾಮಯ್ಯ ಮುಡಾ ಪ್ರಕರಣದಲ್ಲಿ ಭಾಗಿಯಾಗಿ, ಆರೋಪಿಸಿದಂತೆ ಅವಕಾಶವನ್ನು ಕೊಟ್ಟಿದ್ದರೇ, ನಿತ್ಯ ಹಲವು ಖಾಸಗಿ ದೂರುಗಳು ದಾಖಲಾಗಬಹುದು. ಸಕ್ಷಮ ಪ್ರಾಧಿಕಾರಿಯೇ ಇದನ್ನು ವಿಚಾರಣೆ ನಡೆಸಬೇಕು. ಪೊಲೀಸ್ ಅಧಿಕಾರಿಗಳ ಮೂಲಕ 17ಎ ಅಡಿ ಅನುಮತಿ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಢಿನೋಟಿಫಿಕೇಷನ್, ನಾರಾ ಚಂದ್ರಬಾಬು ನಾಯ್ಡು ವರ್ಸಸ್ ಆಂಧ್ರಪ್ರದೇಶ ಸರ್ಕಾರದ ವಾದಗಳನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್ ನ್ಯಾಯಾಪೀಠದ ಮುಂದೆ ಉಲ್ಲೇಖಿಸಿ, ಅದರಲ್ಲಿನ ಅಂಶಗಳನ್ನು ವಿವರಿಸಿ ನ್ಯಾಯಪೀಠದ ಗಮನಕ್ಕೆ ತಂದರು.
17ಎ ಅಡಿಯಲ್ಲಿ ರಾಜ್ಯಪಾಲರೇ ತನಿಖೆಯನ್ನು ನಡೆಸುವಂತಿಲ್ಲ. ಸಕ್ಷಮ ಪ್ರಾಧಿಕಾರದ ಮೂಲಕ ನಡೆಸಬೇಕು. 17 ಎ ಅಡಿಯಲ್ಲಿ ಪೊಲೀಸರು ಅನುಮತಿ ಕೇಳಿರಬೇಕು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ವಾದಿಸಿದಂತ ಎಜಿ ಲಲಿತಾ ಕುಮಾರಿ ಪ್ರಕರಣ ಉಲ್ಲೇಖಿಸಿದರು. ಅದರಂತೆ ಎಫ್ಐಆರ್ ದಾಖಲಾಗಬೇಕು ಎಂದರು.
ಸ್ನೇಹಮಯಿ ಕೃಷ್ಣ ಅವರು ಮನವಿಯಲ್ಲಿ ಸಿಬಿಐ ತನಿಖೆಯನ್ನು ಕೋರಿದ್ದಾರೆ. ರಾಜ್ಯಪಾಲರ ಆದೇಶ 17ಎ ಅಡಿಯಲ್ಲಿ ಆದೇಶಿಸಬೇಕೇ ಹೊರತು, ಫೈಲ್ ನೋಟಿಂಗ್ ಗಳಲ್ಲಿ ಅಲ್ಲ ಎಂಬುದಾಗಿ ಅಡ್ಪೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿದರು.
ಕೇಂದ್ರ ಸರ್ಕಾರದಿಂದ 17ಎ ಕುರಿತಂತೆ ಮಾರ್ಗಸೂಚಿಯನ್ನೇ ಹೊರಡಿಸಿದೆ. ಆ ಮಾರ್ಗಸೂಚಿಯಂತೆ ನಡೆಯಬೇಕಿದೆ. ಆದರೇ ಹಾಗೆ ಆಗಿಲ್ಲ ಎಂಬುದಾಗಿ ಹೇಳುವ ಮೂಲಕ ಎಜಿ ಶಶಿಕಿರಣ್ ಶೆಟ್ಟಿ ತಮ್ಮ ವಾದ ಅಂತ್ಯಗೊಳಿಸಿದರು.
ಈ ಬಳಿಕ ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಆರಂಭಿಸಿ ದೂರುದಾರರು ಕೆಸರೆ ಗ್ರಾಮವೇ ಇಲ್ಲ ಎಂದು ಆರೋಪಿಸಿದ್ದಾರೆ. ಅವರು ಗ್ರಾಮವನ್ನೇ ನುಂಗಿಬಿಟ್ಟಿದ್ದಾರೆ. ಗ್ರಾಮ ಎಲ್ಲಿಗೆ ಹಾಗೂ ಸರ್ವೆ ನಂಬರ್ ಎಲ್ಲಿದೆ ನಾನು ತೋರಿಸುತ್ತೇನೆ ಎಂದರು.
ಇದಾದ ನಂತ್ರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತಾನು ಸಿಎಂ ಪರವಾಗಿ ಸೆಪ್ಟೆಂಬರ್.12ಕ್ಕೆ ವಾದಿಸುವುದಾಗಿ ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠದ ಮುಂದೆ ಮಾಡಿಕೊಂಡರು. ಈ ಮನವಿ ಪುರಸ್ಕರಿಸಿದಂತ ನ್ಯಾಯಮೂರ್ತಿಗಳು ವಿಚಾರಣೆಯನ್ನು ಸೆಪ್ಟೆಂಬರ್.12ಕ್ಕೆ ಮುಂದೂಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಶಿವಮೊಗ್ಗ: ಸೆ.11ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ನಿನ್ನೆ ಒಂದೇ ದಿನ ಬೆಂಗಳೂರಲ್ಲಿ 83,404 ಗಣೇಶ ಮೂರ್ತಿ ವಿಸರ್ಜನೆ: ಬಿಬಿಎಂಪಿ ಮಾಹಿತಿ