ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ನಟ ದರ್ಶ್ ಪರ ವಕೀಲರ ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ನಾಳೆಗೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.
ಇಂದು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಲಾಯಿತು. ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಆರಂಭಿಸಿ ಎ.13 ದೀಪಕ್ ಕುಮಾರ್ ಶೆಡ್ ನಲ್ಲಿ ಇವರು ಕಾರ್ಮಿಕರು. ಇವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಶೆಡ್ ಅನ್ನು ದೀಪಕ್ ಕುಮಾರ್ ಬಳಕೆ ಮಾಡುತ್ತಿದ್ದನು. ಈತನೂ ಹಲ್ಲೆ ಮಾಡಿದವರಲ್ಲಿ ಒಬ್ಬನಾಗಿದ್ದಾನೆ ಎಂದರು.
6 ಜನರನ್ನು ಪ್ರತ್ಯಕ್ಷ ಸಾಕ್ಷಿ ಎಂದು ಪ್ರಾಸಿಕ್ಯೂಷನ್ ಉಲ್ಲೇಖಿಸಿದೆ. ದರ್ಶಿಗಳೆಂದು ಉಲ್ಲೇಖಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿ ಪುನೀತ್ ಎಂಬುದಾಗಿ ಹೆಸರಿಸಲಾಗಿದೆ. ಈತನೇ ಪೋಟೋ ತೆಗೆದಿರುವುದಾಗಿ ಆರೋಪಿಯೊಬ್ಬನ ಹೇಳಿಕೆ ಇದೆ. ಈತನೇ ಪವಿತ್ರಳನ್ನು ಮನೆಗೆ ಕರೆದುಕೊಂಡು ಹೋಗಿದ್ದನು. ಕೃತ್ಯದ ಬಳಿಕ ಈತ ಬೆಂಗಳೂರಿನಲ್ಲೇ ಇದ್ದ ಎಂಬುದಕ್ಕೆ ಆತನ ಹೇಳಿಕೆಯೇ ಸಾಕ್ಷಿ. ಈತನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಲ್ಲದೇ ಸಾಕ್ಷಿಗಳ ಹೇಳಿಕೆ, ಸ್ಥಳ ಮಹಜರ್ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದಿಸಿದರು.
ಈ ವಾದವನ್ನು ಆಲಿಸಿದಂತ ನ್ಯಾಯಪೀಠವು, ಸರ್ಜರಿ ಅಗತ್ಯವಿದೆ ಅಂತ ವರದಿ ನೀಡಿ, ಮಧ್ಯಂತರ ಜಾಮೀನು ಪಡೆಯಲಾಗಿದೆ. ಇನ್ನೂ ಸರ್ಜರಿ ಮಾಡಿಲ್ಲ ಎಂದಾಗ, ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ಹೌದು ಬಿಪಿ ಹೆಚ್ಚು ಕ ಆ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ ಎಂಬುದಾಗಿ ತಿಳಿಸಿದರು.
ವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ನಾಳೆಗೆ ವಿಚಾರಣೆ ಮುಂದೂಡಿಕೆ ಮಾಡಿದೆ.
BREAKING : ದೆಹಲಿಯಲ್ಲಿ ಕರ್ತವ್ಯ ನಿರತ ‘ED’ ಅಧಿಕಾರಿಗಳ ಮೇಲೆ ದಾಳಿ, ‘ನಿರ್ದೇಶಕ’ನಿಗೆ ಗಾಯ
BREAKING: ಕಾಶ್ಮೀರ ಕಣಿವೆಯಲ್ಲಿ ಭೂಕಂಪ | Earthquake In Kashmir Valley