ಹಾವೇರಿ : ಹಾವೇರಿಯಲ್ಲಿ ಘೋರ ದುರಂತ ಸಂಭವಿಸಿದ್ದು ಬೃಹತ್ ಬೇವಿನಮರ ಬಿದ್ದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಹಿರೇಕೆರೂರು-ಮಾಸೂರು ಮಾರ್ಗಮಧ್ಯೆ ನಡೆದಿದೆ.
ಹಿರೇಕೇರೂರು ತಾಲೂಕು ಯತ್ತಿನಹಳ್ಳಿ ಗ್ರಾಮದ ನಿವಾಸಿ ಹನುಮಂತ (28) ಮತ್ತು ಚಿನ್ನಮುಳಗುಂದ ಗ್ರಾಮದ ನಿವಾಸಿ ಮಂಜುನಾಥ್ (29) ಮೃತರು. ಹಿರೇಕೇರೂರು ಪಟ್ಟಣದಿಂದ ಮಾಸೂರು ಕಡೆಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ಹಿರೇಕೆರೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.