ಹಾವೇರಿ : ಜಮೀನು ವಿಚಾರವಾಗಿ ಸಂಬಂಧಪಟ್ಟಂತೆ ಗಲಾಟೆ ನಡೆದಿದ್ದು, ಈ ವೇಳೆ ಪಾಪಿ ಮಗನೋಬ್ಬ ನನ್ನ ಚಿಕ್ಕಪ್ಪನ ಮೇಲೆನೇ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹೌದು ಚಿಕ್ಕಪ್ಪನನ್ನೆ ಹತ್ಯೆಗೈಯಲು ಪಾಪಿ ಪುತ್ರನೊಬ್ಬ ಮುಂದಾಗಿದ್ದಾನೆ. ಹಾವೇರಿಯ ಅಕ್ಕಿಪೇಟೆ ಬಳಿ ಎಂಬಿ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ಉಳಿವೆಪ್ಪ ಅಕ್ಕಿ (64) ಎನ್ನುವವರ ಮೇಲೆ ಬಸವರಾಜ ಎಂಬಾತನಿಂದ ಹಲ್ಲೆ ನಡೆದಿದೆ.ಮಚ್ಚಿನಿಂದ ಮಾರಣಾಂತಿಕವಾಗಿ ಬಸವರಾಜ್ ತನ್ನ ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ.
ಬಸವರಾಜ ಹಲ್ಲೆ ಮಾಡು ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಘಟನೆ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.