ಹಾವೇರಿ: ಜಿಲ್ಲೆಯ ಕಳ್ಳಿಹಾಳದ ಎಸ್ಸಿ, ಎಸ್ಟಿ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಡಾ.ಆನಂದ ಭೈರಾಪುರ ಅವರಿಗೆ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿ ನೀಡಿ ಸರ್ಕಾರ ಆದೇಶಿಸಿದೆ.
ಹಾವೇರಿ ಜಿಲ್ಲೆಯ ಕಳ್ಳಿಹಾಳದ SC/ST ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಷಯದ ಸಹ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಆನಂದ ಭೈರಾಪುರ ಅವರಿಗೆ ಸಹ ಪ್ರಾದ್ಯಾಪಕ ಹುದ್ದೆಯಿಂದ ಪ್ರಾದ್ಯಾಪಕ (Associate Professor to Professor) ಹುದ್ದೆಗೆ ಪದೋನ್ನತಿ (Promotion) ನೀಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಮೂಲತಃ ಇವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸನಾಳು ಗ್ರಾಮದ ದಿ.ಭೈರಾಪುರದ ಬಸಪ್ಪ ದಿ.ಸೋಮಮ್ಮ- ಪಕ್ಕಿರಮ್ಮ ಇವರ ಪುತ್ರರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, High School, PUC ಶಿಕ್ಷಣವನ್ನು ಧಾರವಾಡದಲ್ಲಿ BA, MA, M.Phill, ಹಾಗೂ Ph.D ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ, B.Ed ಪದವಿಯನ್ನು ಚಿತ್ರದುರ್ಗದಲ್ಲಿ ಹಾಗೂ M.Ed ಪದವಿಯನ್ನು ಮೈಸೂರಿನಲ್ಲಿ ಪೂರೈಸಿದ್ದಾರೆ.
ಡಾ.ವಾರಿಜಾ ಆರ್ ಬೋಳಾರ್ ಇವರ ಮಾರ್ಗದರ್ಶನದಲ್ಲಿ ಹರಪನಹಳ್ಳಿ ತಾಲೂಕಿನ ಪ್ರಾಚೀನ ಕಾಲದ ದೇವಾಲಯಗಳು ಎಂಬ ವಿಷಯ ಕುರಿತು ಸಂಶೋಧನೆ ಮಾಡಿ M.Phil ಪದವಿ ಪಡೆದಿದ್ದಾರೆ. ಡಾ.ಈರಣ್ಣ ಕೆ ಪತ್ತಾರ ಇವರ ಮಾರ್ಗದರ್ಶನದಲ್ಲಿ ರಾಯಲಸೀಮೆಯ ವಿಜಯನಗರ ದೇವಾಲಯಗಳ ಕಲೆ ಮತ್ತು ವಾಸ್ತುಶಿಲ್ಪ ಎಂಬ ವಿಷಯ ಕುರಿತು ಸಂಶೋಧನೆ ಮಾಡಿ Ph.D ಪದವಿ ಪಡೆದಿದ್ದಾರೆ.
ಪ್ರಾದ್ಯಾಪಕ ಹುದ್ದೆಗೆ ಪದೋನ್ನತಿ (Promotion) ಹೊಂದಿದ ಡಾ.ಆನಂದ ಬೈರಾಪುರ ಅವರಿಗೆ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
BREAKING: ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯ ಮಾವ
ಪ್ರತಿದಿನ ಬಾದಾಮಿ ತಿನ್ನಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ | Almond Benefits