ಹಾವೇರಿ : ಹಾವೇರಿ ನಗರದಲ್ಲಿ ಜನವರಿ 06, 07, ಮತ್ತು 08 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಭರ್ಜರಿ ಸಿದ್ದತೆ ನಡೆಸಲಾಗಿದೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6,7 ಮತ್ತು 8 ರಂದು ಹಾವೇರಿ ನಗರದ ಶ್ರೀ ಅಜ್ಜಯ್ಯನ ದೇವಸ್ಥಾನದ ಎದುರು ಕನಕ-ಶರೀಫ ಮತ್ತು ಸರ್ವಜ್ಞ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಯಲ್ಲಿ ಜರುಗಲಿದೆ.
ಹಾವೇರಿಯ ಹೊರವಲಯದ ಅಜ್ಜಯ್ಯ ಗುಡಿಯ ಹತ್ತಿರ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಜರ್ಮನ್ ತಂತ್ರಜ್ಞಾನವನ್ನ ಬಳಿಸಿ ಪ್ರಧಾನ ವೇದಿಕೆ ಹಾಗೂ ಪುಸ್ತಕ ಮಳಿಗೆ, ವಸ್ತು ಪ್ರದರ್ಶನ ಮಾಡಲಾಗಿದೆ. ಸಮ್ಮೆಳನಕ್ಕೆ ಬರುವ ಲಕ್ಷಾಂತರ ಜನರಿಗೆ ಊಟ ಹಾಗೂ 70 ಸಾವಿರ ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬ ಬಗೆ ಬಗೆಯಾದ ಊಟ ಸಿದ್ದವಾಗಲಿದೆ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು, ಬೆಲ್ಲದ ಟೀ, , ಬೆಲ್ಲದ ಟೀ ನೀಡಲಾಗುತ್ತದೆ. ಹಾಗೂ 1.5 ಲಕ್ಷ ಜನರಿಗೆ ಮಧ್ಯಾಹ್ನ ಊಟ, ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯಾ, ಚಪಾತಿ, ಅನ್ನ, ಮೊಸರು, ಸಾಂಬಾರ್, ಉಪ್ಪಿನ ಕಾಯಿ, ಶೇಂಗಾ ಚಟ್ನಿ ನೀಡಲಾಗುತ್ತಿದೆ.
ಸಮ್ಮೇಳನದ ಕಾರ್ಯಕ್ರಮದ ಸಂಪೂರ್ಣ ಮಾಹಿತಿ
ಧ್ವಜಾರೋಹಣ: ಜನವರಿ 6 ರಂದು ಬೆಳಿಗ್ಗೆ 7 ರಿಂದ 7-30ರವರೆಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಂಗಯ್ಯ ಹಿರೇಮಠ ಅವರು ನಾಡಧ್ವಜಾರೋಹಣ ನೆವೇರಿಸಲಿದ್ದಾರೆ.
ಮೆರವಣಿಗೆ: ಅಂದು ಬೆಳಿಗ್ಗೆ 7-30ರಿಂದ 10-30ರವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜರುಗಲಿದೆ. ಶ್ರೀ ಪುಸಿದ್ದೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳ ವೇದಿಕೆ ತಲುಪಲಿದೆ. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳೆಗಡ್ಡಿ, ರಾಯಪ್ಪ ಹುಣಸಗಿ, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಪಾಲ್ಗೊಳ್ಳಲಿದ್ದಾರೆ.
BREAKING NEWS : ಬೆಳಗಾವಿ ಭೀಕರ ಅಪಘಾತದಲ್ಲಿ 6 ಮಂದಿ ಸಾವು : ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ : ಸಚಿವ ಕಾರಜೋಳ
ಸಮಾರಂಭ ಉದ್ಘಾಟನೆ: ಬೆಳಿಗ್ಗೆ 10-30ಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಿ ಉದ್ಘಾಟನಾ ನುಡಿಗಳನ್ನಾಡುವರು. ವಿಧಾನ ಪರಿಷತ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಘನ ಉಪಸ್ಥಿತಿಯಲ್ಲಿ ಶಾಸಕರು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ನೆಹರು ಓಲೇಕಾರ ಅವರು ಸ್ವಾಗತಿಸುವರು. ಕಾರ್ಮಿಕ ಖಾತೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಅರಬೈಲ್ ಶಿವರಾಮ ಹೆಬ್ಬಾರ ಅವರಿಂದ ಮೊದಲ ಮಾತು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರಿಂದ ಆಶಯ ನುಡಿ, ಸಮ್ಮೇಳನಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡರಿಂದ ಭಾಷಣ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪರಿಷತ್ತಿನ ಪುಸ್ತಕಗಳ ಬಿಡುಗಡೆ, ಕನ್ನಡ ಮತ್ತು ಸಂಸ್ಕøತಿ ಇಂಧನ ಖಾತೆ ಸಚಿವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಂದ ವೇದಿಕೆ ಉದ್ಘಾಟನೆ, ಸಂಸದ ಶಿವಕುಮಾರ ಉದಾಸಿ ಅವರಿಂದ ಹಾವೇರಿ ಜಿಲ್ಲಾ ಪುಸ್ತಕಗಳ ಬಿಡುಗಡೆ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಚಿತ್ರಕಲಾಪ್ರದರ್ಶನ, ಶಾಸಕರಾದ ಅರುಣಕುಮಾರ ಪೂಜಾರ ಅವರು ವಾಣಿಜ್ಯ ಮಳಿಗೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಪುಸ್ತಕ ಮಳಿಗೆ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಿಧಾನ ಪರಿಷತ್ ಸದಸ್ಯರಾದ ಆರ್.ಶಂಕರ್ ವ\ಸ್ತು ಪ್ರದರ್ಶನ ಹಾಗೂ ಪ್ರದೀಪ ಶೆಟ್ಟರ ಮಾಧ್ಯಮ ಕೇಂದ್ರ ಉದ್ಘಾಟಿಸಲಿದ್ದಾರೆ.
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ, ವಿಧಾನ ಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ, ರುದ್ರಪ್ಪ ಲಮಾಣಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಉಪಸ್ಥಿತರಿರುವರು.
ನಿಮ್ಮ ಮನೆಯಲ್ಲಿರುವ ದರಿದ್ರವೆಲ್ಲ ತೊಲಗಿ, ಮನೆ ನಂದ ಗೋಕುಲ ವಾಗಬೇಕಾದರೆ ಈ ದೈವ ವೃಕ್ಷದಿಂದ ಈ ಸರಳ ಪ್ರಯೋಗ ಮಾಡಿ!
ಸಾಮರಸ್ಯದ ಭಾವ- ಕನ್ನಡದ ಜೀವ: ಮಧ್ಯಾಹ್ನ 2 ರಿಂದ 4ರವರೆಗೆ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಗೋಷ್ಠಿ-1 “ಸಾಮರಸ್ಯದ ಭಾವ-ಕನ್ನಡದ ಜೀವ” ಜರುಗಲಿದ್ದು, ಚಿತ್ರದುರ್ಗ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಶಿಕ್ಷಣ ತಜ್ಞ ಡಾ,ಗುರುರಾಜ ಕರ್ಜಗಿ ಅವರಿಂದ ಆಶಯನುಡಿ, ಕನಕರ ಭಾವೈಕ್ಯತಾ ದೃಷ್ಟಿ ಕುರಿತು ಡಾ.ವೈ.ಎಂ.ಯಾಕೊಳ್ಳಿ, ಶರೀಫರ ಸಾಮರಸ್ಯ ದೃಷ್ಟಿ ಕುರಿತು ಡಾ.ಅಡಿವೆಪ್ಪ ವಾಲಿ ಹಾಗೂ ಸರ್ವಜ್ಞರ ಸಾಮಾಜಿಕ ದೃಷ್ಟಿ ಕುರಿತು ಡಾ.ನಾಗರಾಜ ದ್ಯಾಮನಕೊಪ್ಪ ವಿಷಯ ಮಂಡನೆ ಮಾಡಲಿದ್ದಾರೆ.
ಗೋಷ್ಠಿ 2 ಸಂಜೆ 4 ರಿಂದ 6ರವರೆಗೆ ಜರುಗಲಿದ್ದು, ಹಿರಿಯ ಕವಿ ಸರಜೂ ಕಾಟ್ಕರ್ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಹಿರಿಯ ಕವಯತ್ರಿ ಡಾ.ವಿಜಯಶ್ರೀ ಸಬರದ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಕವಿಗೋಷ್ಠಿಯಲ್ಲಿ 25 ಕವಿಗಳು ಭಾಗವಹಿಸಲಿದ್ದಾರೆ.
ಸಾಧಕರಿಗೆ ಸನ್ಮಾನ: ಸಂಜೆ 6 ರಿಂದ 7 ಗಂಟೆವರೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಚಲನಚಿತ್ರ ಕಲಾವಿದ ರಮೇಶ ಅರವಿಂದ ಆಶಯ ನುಡಿಗಳನ್ನಾಡುವರು. ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸನ್ಮಾನಿಸುವರು.
ಸನ್ಮಾನಿತರು: ನಿವೃತ್ತ ನ್ಯಾಯಾಧೀಶರು ಹಾಗೂ ಹಿರಿಯ ಸಾಹಿತಿ ಜಿನದತ್ತ ದೇಸಾಯಿ, ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಮಗ ನಿವೃತ್ತ ಹಿರಿಯ ಸೇನಾಧಿಕಾರಿ ಏರ್ ಮಾರ್ಷಲ್ ಕೆ.ಸಿ. ಕಾರಿಯಪ್ಪ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್., ಫರ್ಡಿನೆಂಡ್ ಕಿಟ್ವೆಲ್ ಅವರ ಮರಿಮೊಮ್ಮಗ ಯಾರ್ಕ್ಕಟ್ಟೆಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ ಸಿಇಒ ಹರಿಮಾರರ್, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಾಧಿಪತಿ ಮಾಲ್ಡೀವ್ ದೇಶದ ಗೌರವ ಕೌನ್ಸಿಲ್ ಜನರಲ್ ಡಾ.ವಿ.ಜಿ.ಜೋಸೆಫ್, ಚಲನಚಿತ್ರ ಕಲಾವಿದ ರಮೇಶ ಅರವಿಂದ, ಹಿರಿಯ ವೈದ್ಯ ಡಾ.ಶರಣ ಪಾಟೀಲ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಹಿರೇಮಠ, ನವದೆಹಲಿ ಅಂಚೆ ಸೇವಾ ಮಂಡಳಿ ಸದಸ್ಯ ಚಾಲ್ರ್ಸ್ ಲೋಬೋ, ಹಿರಿಯ ಪೊಲೀಸ್ ಅಧಿಕಾರಿ ಅಮರ್ಕುಮಾರ್ ಪಾಂಡೆ, ಹೊರನಾಡ ಕನ್ನಡಿ ಬ್ರಹ್ಮಕುಮಾರ ಮೃತ್ಯುಂಜಯ, ಹಿರಿಯ ಸಾಹಿತಿ ಬ.ಫ.ಯಲಿಗಾರ, ರಂಗಭೂಮಿ ಕಲಾವಿದ ಗೋಪಾಲಕೃಷ್ಣ ನಾಯರಿ, ಜರ್ಮನಿ ನಗರಸಭಾ ಸದಸ್ಯ ವಿದುಷಿ ನಂದಿನಿ ನಾರಾಯಣ್, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ಹಿರಿಯ ಸಾಹಿತಿ ಶ್ರೀಮತಿ ವಿದ್ಯಾವತಿ ಅಂಕಲಗಿ, ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ, ರಂಗಕರ್ಮಿ ಡಿ.ವಿ.ಎಸ್.ಗುಪ್ತ, ಸಹಕಾರ ಕ್ಷೇತ್ರದ ಸಾಧಕ ಶ್ರೀಮತಿ ಶಕುಂತಲಾ ಭಟ್ ಹಳೆಯಂಗಡಿ, ಹಿರಿಯ ಸಾಹಿತಿ ಪ್ರೊ. ಅನ್ನದಾನಿ ಹಿರೇಮಠ, ಸಮಾಜ ಸೇವಕ ಚಂದ್ರಶೇಖರ ಬಾಳೆ, ಕನ್ನಡ ಸೇವಾನಿರತರಾದ ರಾಮಲಿಂಗ ಶೆಟ್ಟಿ, ಹೊರದೇಶದ ಕನ್ನಡಿಗರಾದ ಕನ್ನಡತಿ ಭಾಗೀರಥಿ, ಕನ್ನಡಪರ ಹೋರಾಟಗಾರ ಮಹಾದೇವ ತಳವಾರ, ಸಂಘಟಕ ಟಿ.ಸಿ.ವೆಂಕಟಾಚಲಪತಿ, ಸಾಮಾಜಿಕ ಹೋರಾಟಗಾರ ಫಕೀರಪ್ಪ ಹೊತ್ನಳ್ಳಿ, ಹಿರಿಯ ಪತ್ರಕರ್ತ ರಾಜು ನದಾಫ, ಹಿರಿಯ ಸಂಶೋಧಕ ಡಾ.ಎಸ್.ಡಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಜೆ 7 ರಿಂದ ರಾತ್ರಿ 10ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ವೇದಿಕೆ-2 ಪಾಪು-ಚಂಪಾ ವೇದಿಕೆ ಹೆಳವನಕಟ್ಟೆ ಗಿರಿಯ ಮಹಾಮಂಟ: ಜನವರಿ 6 ರಂದು ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ಹಾವೇರಿ ಜಿಲ್ಲಾ ದರ್ಶನ ಗೋಷ್ಠಿ-1 ಜರುಗಲಿದೆ. ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಜೀವರಾಜ ಛತ್ರದ ಆಶಯ ನುಡಿಗಳನ್ನಾಡಲಿದ್ದಾರೆ. ರಜತ ಸಂಭ್ರಮದಲ್ಲಿ ಹಾವೇರಿ ಜಿಲ್ಲೆಯ ಕುರಿತು ವೈ.ಬಿ.ಆಲದಕಟ್ಟಿ, ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜಿಲ್ಲೆಯ ಕೊಡುಗೆ ಕುರಿತು ಡಾ.ಎಸ್.ಪಿ.ಗೌಡರ್. ಕರ್ನಾಟಕ ಏಕೀಕರಣದಲ್ಲಿ ಹಾವೇರಿ ಜಿಲ್ಲೆಯ ಪಾತ್ರ ಕುರಿತು ಮಾರುತಿ ಶಿಡ್ಲಾಪುರ ಹಾಗೂ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಕುರಿತು ಡಾ.ರಮೇಶ ತೆವರಿ ಅವರು ಮಾತನಾಡಲಿದ್ದಾರೆ.
ಗೋಷ್ಠಿ-2 “ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕರ್ನಾಟಕದ ಕೊಡುಗೆ” ಸಂಜೆ 4 ರಿಂದ 5 ಗಂಟೆವರೆಗೆ ಜರುಗಲಿದೆ. ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೋಡೆ ಪಿ.ಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಕುರಿತು ಪ್ರೊ.ಟಿ.ಜಿ.ಹರೀಶ್ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ಪ್ರತಿಕೋದ್ಯಮದ ಕೊಡುಗಡೆ ಕುರಿತು ವಿಲಾಸ ಮೇಲಗಿರಿ ಅವರು ಮಾತನಾಡಲಿದ್ದಾರೆ.
ಗೋಷ್ಠಿ-3 “ಕನ್ನಡ ದಿಗ್ಗಜರು” ಸಂಜೆ 5 ರಿಂದ 7 ಗಂಟೆವರೆಗೆ ಜರುಗಲಿದೆ.ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ನಾಡೋಜ ಡಾ.ಪಾಟೀಲ ಪುಟ್ಟಪ್ಪ ಕುರಿತು ಡಾ.ಮಲ್ಲಿಕಾರ್ಜುನ ಸಿದ್ದಣ್ಣನವರ, ಪ್ರೊ.ಚಂದ್ರಶೇಖರ ಪಾಟೀಲ ಕುರಿತು ವಿಜಯಕಾಂತ ಪಾಟೀಲ, ಡಾ.ಮಹಾದೇವ ಬಣಕಾರ ಕುರಿತು ಡಾ.ಪ್ರೇಮಾನಂದ ಲಕ್ಕಣ್ಣನವರ ಹಾಗೂ ಡಾ.ಶ್ರೀನಿವಾಸ ಹಾವನೂರ ಕುರಿತು ಸಂಜಯ ಹಾವನೂರ ಅವರು ಮಾತನಾಡಲಿದ್ದಾರೆ. ಸಂಜೆ 7 ರಿಂದ ರಾತ್ರಿ 10-30ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ವೇದಿಕೆ-3 ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ: ಗೋಷ್ಠಿ-1 ಶತಮಾನ-ಪುರುಷರು ಈ ಮಹನೀಯರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಮಧ್ಯಾಹ್ನ 2 ರಿಂದ 3-30ರವರೆಗೆ ಜರುಗಲಿದೆ. ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಬರಹಗಾರ ಬಾಬು ಕೃಷ್ಣಮೂರ್ತಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಜಿ.ನಾರಾಯಣ ಕುರಿತು ಕೆ.ಟಿ.ಶ್ರೀಕಂಠೇಗೌಡ, ಡಾ.ಹಿರೇಮಲ್ಲೂರು ಈಶ್ವರನ್ ಕುರಿತು ಪ್ರೊ.ಶಶಿಧರ ತೋಡ್ಕರ್, ಸು.ರಂ.ಎಕ್ಕುಂಡಿ ಕುರಿತು ಜೆ.ಎಂ.ರಾಜಶೇಖರ, ಶಾಂತವೇರಿ ಗೋಪಾಲಗೌಡ ಕುರಿತು ನೆಂಪೆ ದೇವರಾಜ, ಹಾಸ್ಯ ನಟ ನರಸಿಂಹರಾಜು ಕುರಿತು ಶ್ರೀಮತಿ ಸುಧಾ ನರಸಿಂಹರಾಜು ಅವರು ಮಾತನಾಡಲಿದ್ದಾರೆ.
ಗೋಷ್ಠಿ-2: ಮಧ್ಯಾಹ್ನ 3-30 ರಿಂದ 5-15ರವರೆಗೆ ಸಂಕೀರ್ಣ ಗೋಷ್ಠಿ ಜರುಗಲಿದೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಗಮಕ ಕಲೆ ಅಳಿವು ಉಳಿವು ಕುರಿತು ಡಾ.ಎ.ವಿ.ಪ್ರಸನ್ನ, ಲಿಂಗತ್ವ ಅಲ್ಪಸಂಖ್ಯಾತರ ಭವಿಷ್ಯ ಮತ್ತು ಭರವಸೆಗಳು ಕುರಿತು ಶ್ರೀಮತಿ ಕೆ.ಸಿ.ಅಕ್ಷತಾ, ಮೊಬೈಲ್: ಸಾಧಕ ಮತ್ತು ಬಾಧಕಗಳು ಕುರಿತು ಡಾ.ಶುಭಾ ಮರವಂತೆ, ಪೊಲೀಸ್ ಸಾಹಿತ್ಯ ಕುರಿತು ಡಿ.ಸಿ.ರಾಜಪ್ಪ ಅವರು ಮಾತನಾಡಲಿದ್ದಾರೆ.
ಗೋಷ್ಠಿ-3: ಸಂಜೆ 5 ರಿಂದ 15 ರಿಂದ 7 ಗಂಟೆವರೆಗೆ ಬೆಳ್ಳಿತೆರೆ-ಕಿರುತೆರೆ ಜರುಗಲಿದೆ. ಹಿರಿಯ ಕಲಾವಿದ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ ಕಶ್ಯಪ್ ಆಶಯ ನುಡಿಗಳನ್ನಾಡಲಿದ್ದಾರೆ.
ಚಲನಚಿತ್ರ ಸಾಹಿತ್ಯ ಪರಂಪರೆ ಕುರಿತು ಎನ್.ಎಸ್.ಶ್ರೀಧರಮೂರ್ತಿ, ಸಮಾಜದ ಮೇಲೆ ಧಾರಾವಾಹಿಗಳ ಪರಿಣಾಮ ಕುರಿತು ಶ್ರೀಮತಿ ಕುಸುಮ ಆಯರಹಳ್ಳಿ ಹಾಗೂ ಕನ್ನಡ ಚಲನಚಿತ್ರಗಳಲ್ಲಿ ದೇಶಭಕ್ತಿ ಮತ್ತು ಕನ್ನಡಪರ ಗೀತಗೆಳು ಕುರಿತು ಪ್ರಕಾಶ್ ಮಲ್ಪೆ ಅವರು ಮಾತನಾಡಲಿದ್ದಾರೆ. ಸಂಜೆ 7 ರಿಂದ ರಾತ್ರು 10ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಜನವರಿ 7 ಶನಿವಾರ ವೇದಿಕೆ-1 ಗೋಷ್ಠಿ-3: ಕನ್ನಡದಲ್ಲಿ ಕಾನೂನು ಸಾಹಿತ್ಯ ಬೆಳಿಗ್ಗೆ 9 ರಿಂದ 10 ಗಂಟೆವರೆಗೆ ಜರುಗಲಿದೆ. ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಡಾ.ಸಿ.ಬಸವರಾಜು ಅವರಿಂದ ಆಶಯ ನುಡಿ, ಶ್ರೀ ಸಾಮಾನ್ಯನಿಗೆ ಕನ್ನಡದಲ್ಲಿ ಕಾನೂನಿನ ಅರಿವು ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿದ್ದಪ್ಪ ಕೆಂಪಗೌಡರ ಹಾಗೂ ಕಾನೂನು ವಿಷಯಗಳ ಕುರಿತು ಸಾಹಿತ್ಯ ರಚನೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಿ.ಶಿವಲಿಂಗೇಗೌಡ ವಿಷಯ ಮಂಡನೆ ಮಾಡಲಿದ್ದಾರೆ.
ವಿಶೇಷ ಉಪನ್ಯಾಸ: ಬೆಳಿಗ್ಗೆ 10 ರಿಂದ 11 ಗಂಟವೆರೆಗ ವಿಶೇಷ ಉಪನ್ಯಾಸ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ, ಸರಸ್ವತಿ ಸಮ್ಮಾನ್ ಪುರಸ್ಕøತರ ಕುರಿತ ಗ್ರಂಥಗಳ ಬಿಡುಗಡೆ. ಹಿರಿಯ ಬರಹಗಾರ ಡಾ.ಪ್ರೇಮಶೇಖರ ಪ್ರಸ್ತಾವನೆ, ಸರಸ್ವತಿ ಸಮ್ಮಾನ ಪುರಸ್ಕøತ ಡಾ.ಎಸ್.ಎಲ್. ಭೈರಪ್ಪ ಹಾಗೂ ಹಿರಿಯ ಸಾಹಿತಿ ಡಾ.ಪ್ರಧಾನ ಗುರುದತ್ತ ಅವರು ಉಪನ್ಯಾಸ ನೀಡಲಿದ್ದಾರೆ. ಸರಸ್ವತಿ ಸಮ್ಮಾನ ಪುರಸ್ಕøತ ಎಂ.ವೀರಪ್ಪ ಮೊಯಿಲಿ ಉಪಸ್ಥಿತರಿರುವರು.
ಗೋಷ್ಠಿ-4: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಯುವ ಕರ್ನಾಟಕ ನಾಡು-ನುಡಿ ಚಿಂತನೆ ಜರುಗಲಿದೆ.
ಹಿರಿಯ ಕ್ರಿಕೆಟ್ ಆಟಗಾರ ವೆಂಕಟೇಶ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಮಾಲತಿ ಹೊಳ್ಳ ಅವರು ಆಶಯ ನುಡಿಗಳನ್ನಾಡುವರು. ಯುವ ಕನ್ನಡಿಗರಿಗೆ ಸೈನ್ಯದಲ್ಲಿ ಅವಕಾಶಗಳ ಕುರಿತು ಸ್ಕ್ವಾಡ್ರನ್ ಲೀಡರ್ ವಿನುತಾ ಜಿ.ಆರ್, ಯುವ ಕರ್ನಾಟಕ ಹೊಸ ತಲೆಮಾರಿನ ಮನಸ್ಥಿತಿ ಕುರಿತು ಪ್ರೊ.ಸ್ಮøತಿ ಹರಿತ್ಸ ಹಾಗೂ ಯುವ ಲೇಖಕರು ಮತ್ತು ಪ್ರಸ್ತುತ ಸಾಹಿತ್ಯ ಕುರಿತು ಶ್ರೀಮತಿ ದೀಪಾ ಹಿರೇಗುತ್ತಿ ಮಾತನಾಡಲಿದ್ದಾರೆ.
ಗೋಷ್ಠಿ-5: ಮಧ್ಯಾಹ್ನ 1 ರಿಂದ 3 ಗಂಟೆ ವರೆಗೆ ಮಾಧ್ಯಮ: ಹೊಸತನ ಮತ್ತು ಆವಿಷ್ಕಾರಗಳು ವಿಷಯ ಜರುಗಲಿದೆ. ಬೆಂಗಳೂರು ವಿವಿ ಹಿರಿಯ ಪ್ರಾಧ್ಯಾಪಕ ಡಾ.ಬಿ.ಕೆ.ರವಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಮೋಹನ ಹೆಗಡೆ ಆಶಯ ನುಡಿಗಳನ್ನಾಡಲಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ ಕುರಿತು ಸುದರ್ಶನ್ ಚನ್ನಂಗಿಹಳ್ಳಿ, ಸಾಮಾಜಿಕ ಜಾಲತಾಣಗಳು: ಅರಿವು ಮತ್ತು ಅಪಾಯ ಕುರಿತು ಎಚ್.ಎನ್.ಸುದರ್ಶನ್ ಹಾಗೂ ಡಿಜಿಟಲ್ ಮಾಧ್ಯಮದ ಮುಂದಿನ ಸವಾಲುಗಳು ಕುರಿತು ಡಾ.ಸಿಬಂತಿ ಪದ್ಮನಾಭ ಅವರು ವಿಷಯ ಮಂಡಿಸಲಿದ್ದಾರೆ.
ಗೋಷ್ಠಿ-6: ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ಜರುಗಲಿದೆ. ವಿಶ್ರಾಂತ ಕುಲಪತಿಗಳು ಡಾ.ಎ.ಮುರಿಗೆಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ ಆಶಯ ನುಡಿಗಳನ್ನಾಡಲಿದ್ದಾರೆ. ಕನ್ನಡ ಶಾಲೆಗಳ ವಸ್ತುಸ್ಥಿತಿ ಕುರಿತು ಡಾ.ಎಚ್.ಎನ್.ಮುರಳೀಧರ, ಕನ್ನಡ ಭಾಷೆಯ ಮೇಲೆ ಇಂಗ್ಲಿಷ್ ಮಾಧ್ಯಮ ಬೀರುವ ಪರಿಣಾಮಗಳು ಕುರಿತು ಡಾ.ಹರ್ಷಿತ್ ಜೋಸೆಫ್, ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯ ಮತ್ತು ಬೋಧನೆ ಕುರಿತು ಡಾ.ಧನಂಜಯ್ ಕುಂಬ್ಳೆ ಅವರು ವಿಷಯ ಮಂಡಿಸಲಿದ್ದಾರೆ.
ಸಂಜೆ 5 ರಿಂದ 6 ಗಂಟೆವರೆಗೆ ಸಮ್ಮೇಳನಾಧ್ಯಕ್ಷರ ಜೊತೆ ಮಾತು-ಮಂಥನ ಜರುಗಲಿದ್ದು, ಸಮ್ಮೇಳನಾದ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರು ಪಾಲ್ಗೊಳ್ಳಲಿದ್ದಾರೆ. ಡಾ.ತಲಕಾಡು ಚಿಕ್ಕರಂಗೇಗೌಡ ಪ್ರಧಾನ ನಿರ್ವಹಣೆ ಮಾಡಲಿದ್ದಾರೆ. ಮಾತು ಮಂಥನದಲ್ಲಿ ಮಹಾಬಲಮೂರ್ತಿ ಕೊಡ್ಲೆಕೆರೆ, ಶ್ರೀಮತಿ ಸಂಕಮ್ಮ ಜಿ ಸಂಕಣ್ಣನವರ, ಶ್ರೀಮಾಲತೇಶ ಅಂಗೂರ, ವಿ.ಮನೋಹರ, ಡಾ.ಶೀಲಾದೇವಿ ಎಸ್.ಮರಳಿಮಠ, ಬಾಪು ಪದ್ಮನಾಭ, ಡಾ. ಶಾರದಾ ಮುಳ್ಳೂರು, ಬುಕ್ಕಾಪಟ್ನ ವಾಸು, ರುದ್ರಣ್ಣ ಹರ್ತಿಕೋಟೆ, ಅಂಜನ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.
ಸಾಧಕರಿಗೆ ಸನ್ಮಾನ: ಸಂಜೆ 6 ರಿಂದ 7ಗಂಟೆವರೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಕಾಗಿನೆಲೆ ಶ್ರೀ ಕ್ಷೇತ್ರದ ನಿರಂಜನಾನಂದಪುರಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಜಯದೇವ ಆಸ್ಪತ್ರೆಯ ನಾಡೋಜ ಡಾ.ಸಿ.ಎನ್.ಮಂಜುನಾಥ ಆಶಯ ನುಡಿಗಳನ್ನಾಡಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಸನ್ಮಾನಿಸುವರು.
ಸನ್ಮಾನಿತರು: ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ, ಹಿರಿಯ ವೈದ್ಯ ಡಾ.ಸಿ.ಎನ್.ಮಂಜುನಾಥ, ಕರ್ನಾಟಕ ಸಂಘ ಶಿವಮೊಗ್ಗ ಅಧ್ಯಕ್ಷ ಎಂ.ಎನ್.ಸುಂದರರಾಜ್, ಹೊರದೇಶ ಕನ್ನಡಿಗ ಕತಾರ್ ಸುಬ್ರಮಣ್ಯ ಹೆಬ್ಬಾಗಿಲು, ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್.ವರ್ಮಾ, ಕನ್ನಡಪರ ಹೋರಾಟಗಾರ ವಾಟಾಳ್ ರಮೇಶ, ಯಕ್ಷಗಾನ ಕಲಾವಿದ ಆಯುರ್ವೇದ ತಜ್ಞ ಡಾ.ಶಾಂತಾರಾಮ ಪ್ರಭು, ಸಾಹಿತಿ ವಿ.ರವೀಂದ್ರನಾಥ, ಸಮಾಜ ಸೇವಕ ಮೋಹನ ಮೆಣಸಿನಕಾಯಿ, ರಂಗಭೂಮಿ ಕಲಾವಿದ ಎಂ.ಎಸ್.ಕೊಟ್ರೇಶ, ಹಿರಿಯ ಚಲನಚಿತ್ರ ಕಲಾವಿದ ವೈಜನಾಥ ಬಿರಾದರ, ಸಾಹಿತಿ ಅನಂತರಾಜ್, ಸಾಹಿತಿ ಎ.ಸಿ.ಪಟ್ಟನದ, ಹಿರಿಯ ರಂಗಭೂಮಿ ಕಲಾವಿದ ರಮಾನಂದ ಹಿರೇಜೇವರ್ಗಿ, ಕೈಗಾರಿಕೋದ್ಯಮಿ ಪುಟ್ಟಗಂಗಯ್ಯ, ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿ ಪ್ರತಿನಿಧಿ ಡಾ.ಕೆ.ಪಿ.ಅಶ್ವಿನಿ , ವೈದ್ಯರು ಶಿಕ್ಷಣ ತಜ್ಞ ಡಾ.ಎಚ್.ಎಂ.ವೆಂಕಟಪ್ಪ, ಸಾಹಿತಿ ಶೀಮತಿ ಗಿರಿಜ ಶಂಕರ್, ಪರಿಸರ ಕಾರ್ಯಕರ್ತ ಕಾಳನಹುಂಡಿ ಗುರುಸ್ವಾಮಿ, ರೈತ ಸಂಘಟಕ ರಾಮಣ್ಣ ಕೆಂಚಳ್ಳೇರ, ರಂಗಭೂಮಿ ಕಲಾವಿದ ಡಾ. ಕೆ.ಎಂ.ಕೃಷ್ಣಮೂರ್ತಿ, ಸಂಘಟಕ ವೈ.ಪ್ರಕಾಶ, ಸಾಹಿತಿ ಡಾ.ಆರ್.ಕೆ.ಪಾಟೀಲ, ಶಿಕ್ಷಣ ತಜ್ಞ ಜಿ.ಎಸ್,ಶಿವಲಿಂಗಪ್ಪ , ವಿಶೇಷ ಚೇತನ ಸಾಧಕ ಕೆ.ಎಸ್.ರಾಜಣ್ಣ, ಸಾಹಿತಿ ಶಿಕ್ಷಣ ತಜ್ಞ ಕೆ.ಎ.ದೊಡ್ಡಮನಿ, ಸಾಹಿತಿ ಡಾ.ವಾದಿರಾಜ ದೇಶಪಾಂಡೆ, ಕನ್ನಡಪರ ಹೋರಾಟಗಾರ ಎ.ಅಶ್ವತ್ಥ ರೆಡ್ಡಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ 7 ರಿಂದ ರಾತ್ರಿ 10ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನೆಡೆಯಲಿವೆ.
ವೇದಿಕೆ-2: ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ಗೋಷ್ಠಿ-4 ವಚನ ಪರಂಪರೆ ಜರುಗಲಿದ್ದು, ಹಿರಿಯ ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಡರಗಿ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಅನ್ನದಾನೇಶ್ವರ ಸ್ವಾಮೀಜಿಗಳು ಆಶಯ ನುಡಿಗಳನ್ನಾಡಲಿದ್ದಾರೆ.
ನ್ಯಾಯನಿಷ್ಠುರಿ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹಾಮನೆ ಕುರಿತು ಡಾ.ಕಾಂತೇಶ ಅಂಬಿಗೇರ, ವಚನಗಳಲ್ಲಿ ಅನುಭಾವ ಕುರಿತು ಶ್ರೀಮತಿ ವೀಣಾ ಬನ್ನಂಜೆ ಹಾಗೂ ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಕುರಿತು ಸಂಗಮೇಶ ಪೂಜಾರ ಅವರು ಮಾತನಾಡಲಿದ್ದಾರೆ.
ಗೋಷ್ಠಿ-5: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ “ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ” ಜರುಗಲಿದೆ. ಧಾರವಾಡ ಹಿರಿಯ ವಿದ್ವಾಂಸ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಡಾ.ಕೆ.ಮುರಳಿಧರ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ/ಕಾನೂನು ಚಿಂತನೆ ಕುರಿತು ಅಶೋಕ ಹಾರನಹಳ್ಳಿ, ಹಾವನೂರು ವರದಿಗೆ ಐವತ್ತು ವರ್ಷ ಕುರಿತು ಕೆ.ಜಯ ಪ್ರಕಾಶ್ ಹೆಗ್ಡೆ ಹಾಗೂ ಮಹಾಜನ ವರದಿ ಕುರಿತು ಡಾ.ಓಂಕಾರ ಕಾಕಡೆ ಅವರು ಮಾತನಾಡಲಿದ್ದಾರೆ.
ಗೋಷ್ಠಿ-6: ಮಧ್ಯಾಹ್ನ 1 ರಿಂದ 3ರವರೆಗೆ ಕವಿಗೋಷ್ಠಿ-2 ಜರುಗಲಿದೆ, ಹಿರಿಯ ಕವಯತ್ರಿ ಡಾ.ಎಚ್.ಆರ್.ಸುಜಾತಾ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಅವರು ಆಶಯನುಡಿಗಳನ್ನಾಡಲಿದ್ದಾರೆ. ಡಾ.ಗೋವಿಂದ ಹೆಗಡೆ, ಶ್ರೀಮತಿ ಅರುಣಾ ನರೇಂದ್ರ, ಕೃಷ್ಣ ದೇವಾಂಗಮಠ, ಶ್ರೀಮತಿ ಕೆ.ಗಿರಿಜಾ ರಾಜಶೇಖರ, ಗುರು ಬಸವರಾಜ ಎಸ್., ಡಾ.ಸದಾಶಿವ ದೊಡಮನಿ, ಸಂತೋಷ ನಾಯಿಕ, ಎಸ್.ಎಂ.ತುಕ್ಕಪ್ಪನವರ, ಮೌನೇಶ ಬಡಿಗೇರ, ಶ್ರೀಮತಿ ಕನ್ನಿಕಾ ಎಚ್.ಆರ್., ಬಿ.ಕೆ.ಹೊಂಗಲ, ಶ್ರೀಮತಿ ನೂರ್ಜಹನಾ ಹೊಸಪೇಟೆ, ಶ್ರೀಮತಿ ಸುಮಾ ಸತೀಶ್, ಎಸ್.ನರಸಿಂಹಸ್ವಾಮಿ, ಲಿಂಗರಾಜ ಸೊಟ್ಟಪ್ಪನವರ, ಡಾ.ಸುಮತಿ ಪಿ, ನರೇಶ್ ನಾಯ್ಕ, ಶ್ರೀಮತಿ ಬಿ.ಟಿ.ಅಂಬಿಕಾ, ಡಾ.ಸಿ.ಶಿವಣ್ಣ, ಶ್ರೀಮತಿ ಅನುರಾಧ ಪಿ.ಎಸ್., ಶ್ರೀಧರ ಶೇಟ್, ಮಾಲತೇಶ್ ಚಳಗೇರಿ, ಪ್ರೊ.ಪ್ರಭುಲಿಂಗ ದಂಡಿನ, ಶ್ರೀಮತಿ ಪದ್ಮಾ ವಿಠಲ್, ಶ್ರೀಮತಿ ಗಂಗಮ್ಮಾ ನಾಲವಾರ ಅವರು ಭಾಗವಹಿಸಲಿದ್ದಾರೆ.
ಗೋಷ್ಠಿ -7: ಮಧ್ಯಾಹ್ನ 3 ರಿಂದ 4ರವರೆಗೆ ಕನ್ನಡ ಸಾಹಿತ್ಯದ ಹೊಸ ಒಲವುಗಳು ಜರುಗಲಿದೆ. ಹಿರಿಯ ಬರಹಗಾರರಾದ ಶ್ರೀಮತಿ ಸುನಂದಾ ಪ್ರಕಾಶ ಕಡಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಣ್ಣಕಥೆ ಮತ್ತು ಕವಿತೆ ಕುರಿತು ಡಾ.ವಿ.ಎ.ಲಕ್ಷ್ಮಣ ಹಾಗೂ ಪ್ರಬಂಧ ಮತ್ತು ಲಘು ಬರಹ ಕುರಿತು ಡಾ.ತಮಿಳ್ ಸೆಲ್ವಿ ಅವರು ಮಾತನಾಡಲಿದ್ದಾರೆ.
ಗೋಷ್ಠಿ-8: ಸಂಜೆ 4 ರಿಂದ 6ರವರೆಗೆ ಮಕ್ಕಳ ಸಾಹಿತ್ಯ ಮನೋವಿಕಾಸ ಜರುಗಲಿದೆ. ಹಿರಿಯ ಸಾಹಿತಿ ದುಂಡಿರಾಜ್ ಅಧ್ಯಕ್ಷತೆ ವಹಿಸಲಿದ್ದು, ಮಕ್ಕಳ ಸಾಹಿತಿ ಆನಂದ್ ಪಾಟೀಲ್ ಆಶಯ ನುಡಿಗಳನ್ನಾಡಲಿದ್ದಾರೆ. ಮಕ್ಕಳ ಸಾಹಿತ್ಯದ ಬಲವರ್ಧನೆ ಕುರಿತು ಉತ್ತರ ಕನ್ನಡದ ತಮ್ಮಣ್ಣ ಬೀಗಾರ, ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸ ಕುರಿತು ಹಾಲಯ್ಯ ಹಿರೇಮಟ ಹಾಗೂ ಮಕ್ಕಳ ಸಾಹಿತ್ಯದಲ್ಲಿ ಪ್ರಯೋಗಶೀಲತೆ ಕುರಿತು ಡಾ.ಕೆ.ಎಸ್.ಪವಿತ್ರಾ ಅವರು ಮಾತನಾಡಲಿದ್ದಾರೆ. ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ವೇದಿಕೆ-3: ಗೋಷ್ಠಿ-4 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಬೆಳಿಗ್ಗೆ 9 ರಿಂದ 10-30ರವರೆಗೆ ಜರುಗಲಿದೆ. ಭಾರತ ಸರ್ಕಾರದ ವರಮಾನ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐಚ್ಛಿಕ ಕನ್ನಡ ಕುರಿತು ಶ್ರೀಮತಿ ನಂದಿನಿ, ಶೈಕ್ಷಣಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕುರಿತು ಮಹಮ್ಮದ ರಫಿ ಪಾಶಾ ಹಾಗೂ ಕನ್ನಡದಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ ಕುರಿತು ಡಾ.ಪ್ರಕಾಶ್ ಜೆ.ಪಿ ಅವರು ಮಾತನಾಡಲಿದ್ದಾರೆ.
ಗೋಷ್ಠಿ-5: ಮರೆಯಲಾಗದ ಮಹನೀಯರು ಬೆಳಿಗ್ಗೆ 10-30 ರಿಂದ 1 ಗಂಟೆವರೆಗೆ ಜರುಗಲಿದೆ. ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ವಸ್ತ್ರದ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಆಶಯ ನುಡಿಗಳನ್ನಾಡಲಿದ್ದಾರೆ. ವಚನ ಸಾಹಿತ್ಯ ಸಂರಕ್ಷಕ ಪೂಜ್ಯ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಕುರಿತು ಹಾವೇರಿ ಹುಕ್ಕೇರಿಮಠದ ಸದಾಶಿವಸ್ವಾಮಿಗಳು, ಪುಸ್ತಕ ಸಂಸ್ಕøತಿ ವಿಸ್ತಾರಕ ಕಾದಂಬರಿ ಪಿತಾಮಹ ಗಳಗನಾಥರ ಕುರಿತು ಬಾಗಲಕೋಟೆಯ ಶ್ರೀಮತಿ ಸುರೇಖಾ ದತ್ತಾತ್ರೇಯ, ಕನ್ನಡದ ಸೀಮಾ ಪುರುಷ ಡಾ.ವಿ.ಕೃ.ಗೋಕಾಕ್ ಕುರಿತು ಶ್ರೀಧರ ಹೆಗಡೆ ಭದ್ರನ್, ಚೆಂಬೆಳಕಿನ ಕವಿ ನಾಡೋಜ ಡಾ.ಚನ್ನವೀರ ಕಣವಿ ಬಗ್ಗೆ ಡಾ.ಸಂಗಮನಾಥ ಎಂ.ಲೋಕಾಪುರ(ಬಾಗಲಕೋಟ) ಹಾಗೂ ಅಂದರ ಬಾಳಿನ ಬೆಳಕು ಪಂ.ಪುಟ್ಟರಾಜ ಗವಾಯಿಗಳು ಮತ್ತು ಪಂಚಾಕ್ಷರಿ ಗವಾಯಿಗಳ ಕುರಿತು ಗದಗ ಡಾ.ರಾಜಶೇಖರ ದಾನರಡ್ಡಿ ಅವರು ಮಾತನಾಡಲಿದ್ದಾರೆ.
ಗೋಷ್ಠಿ-6: ಕರ್ನಾಟಕ: ಭಾಷಾ ವೈವಿದ್ಯ ಮಧ್ಯಾಹ್ನ 1 ರಿಂದ 3ರವರೆಗೆ ಜರುಗಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ.ವಿಠ್ಠಲ್ರಾವ್ ಗಾಯಕವಾಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಭಾಷಾ ತಜ್ಞರಾದ ಡಾ.ಪಾರ್ವತಿ ಜಿ.ಐತಾಳ್ ಅವರು ಆಶಯನುಡಿಗಳನ್ನಾಡಲಿದ್ದಾರೆ. ತುಳು ಭಾಷೆ ಕುರಿತು ಡಾ.ಗಣನಾಥ ಎಕ್ಕಾರು, ಸೋಲಿಗ ಬಗ್ಗೆ ಡಾ.ಉಮೇಶ್ ಮೈಸೂರು, ಕೊಂಕಣಿ ಕುರಿತು ಶ್ರೀಮತಿ ಫ್ಲೋರಿನ್ ರೋಚ್, ಅರೆಭಾಷೆ ಕುರಿತು ಶ್ರೀಮತಿ ಸ್ಮಿತಾ ಅಮೃತತಾಜ್ ಹಾಗೂ ಕೊಡವ ಬಗ್ಗೆ ಡಾ.ಕಾವೇರಿ ಎನ್.ವಿ. ಅವರು ಮಾತನಾಡಲಿದ್ದಾರೆ.
ಗೋಷ್ಠಿ-7: ಕಲಾ ಸಂಗಮ ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಜರುಗಲಿದೆ. ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲು ಅವರು ಆಶಯನುಡಿಗಳನ್ನಾಡಲಿದ್ದಾರೆ. ಶಿಲ್ಪಕಲೆ ಕುರಿತು ವೀರಣ್ಣ ಅರ್ಕಸಾಲಿ, ಸಂಗೀತ ಮತ್ತು ನೃತ್ಯ ಕ್ಷೇತ್ರದ ಹೊಸ ಪ್ರಯೋಗಗಳು ಕುರಿತು ಡಾ.ಜಯದೇವಿ ಜಂಗಮಶೆಟ್ಟಿ, ಜನಜಾಗೃತಿಗೆ ಬೀದಿ ನಾಟಕಗಳ ಪ್ರಭಾವ ಕುರಿತು ಗ್ಯಾರಂಟಿ ರಾಮಣ್ಣ ಅವರು ಮಾತನಾಡಲಿದ್ದಾರೆ.
ಗೋಷ್ಠಿ-8: ಪುಸ್ತಕೋದ್ಯಮದ ಸವಾಲುಗಳು ಸಂಜೆ 5 ರಿಂದ 7ರವರೆಗೆ ಜರುಗಲಿದ್ದು, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪ್ರಕಾಶಕ ಎಂ.ಎ.ಸುಬ್ರಹ್ಮಣ್ಯ ಅವರು ಆಶಯನುಡಿಗಳನ್ನಾಡಲಿದ್ದಾರೆ. ಪ್ರಕಾಶಕರು ಹಾಗೂ ಮಾರಾಟ ವ್ಯವಸ್ಥೆ ಕುರಿತು ಬಸವರಾಜ ಕೊನೇಕ, ಕೃತಿ ಹಕ್ಕುಸ್ವಾಮ್ಯದ ಕಾನೂನಿನ ಅರಿವು ಕುರಿತು ಶ್ರೀಧರ ಪ್ರಭು ಹಾಗೂ ಆನ್ಲೈನ್ ಓದುಗುರು ಮತ್ತು ಇ-ಪುಸ್ತಕ ಕುರಿತು ದೇವು ಪತ್ತಾರ ಅವರು ಮಾತನಾಡಲಿದ್ದಾರೆ. ರಾತ್ರಿ 7 ರಿಂದ 10ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಜನೇವರಿ 8 – ಗೋಷ್ಠಿ-7: “ಅನ್ನದಾತರ ಅಳಲು –ಅಪೇಕ್ಷೆಗಳು” ಬೆಳ್ಳಿಗ್ಗೆ-9 ರಿಂದ 11 ಗಂಟೆವರೆಗೆ ಜರುಗಲಿದೆ. ಧಾರವಾಡ ವಿಶ್ರಾಂತ ಕುಲಪತಿ ಧಾರವಾಡ ಶ್ರೀ ಎಸ್.ಎ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕೃಷಿಕ ಎಚ್.ವಿ.ಸಜ್ಜನ ಆಶಯ ನುಡಿಗಳನ್ನಾಡಲಿದ್ದಾರೆ. ಕೃಷಿಕ ಮತ್ತು ಕೃಷಿ ಕಾರ್ಮಿಕರ ಸ್ಥಿತಿಗತಿಗಳ ಕುರಿತು ಈರಯ್ಯ ಕಿಲ್ಲೇದಾರ, ಕೃಷಿ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಕುರಿತು ಶ್ರೀಮತಿ ಕವಿತಾ ಮಿಶ್ರಾ ರಾಯಚೂರು, ಸಾವಯವ ಕೃಷಿ -ಇಂದಿನ ಸ್ಥಿತಿ ಕುರಿತು ಡಾ.ಚನ್ನಪ್ಪ ಅಂಗಡಿ ಹಾಗೂ ಜಲಮೂಲಗಳ ಅಳಿವು ಉಳಿವು ಕುರಿತು ಡಾ.ಎನ್.ಜೆ.ದೇವರಾಜ ರೆಡ್ಡಿ ವಿಷಯ ಮಂಡಿಸಲಿದ್ದಾರೆ.
ಗೋಷ್ಠಿ -8: “ವರ್ತಮಾನದಲ್ಲಿ ಮಹಿಳೆ’ ಬೆಳಿಗ್ಗೆ 11 ರಿಂದ 1ಗಂಟೆವರೆಗೆ ಜರುಗಲಿದೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿ.ವಿ. ಕುಲಪತಿಗಳಾದ ಡಾ.ಬಿ.ಕೆ.ತುಳಸಿಮಾಲಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರಾದ ಶ್ರೀಮತಿ ಕ್ಷಮಾ ನರಗುಂದ ಆಶಯ ನುಡಿಗಳನ್ನಾಡಲಿದ್ದಾರೆ. ಗ್ರಾಮೀಣ ಮಹಿಳೆಯರ ಸಾಧನೆಗಳು ಕುರಿತು ಡಾ.ವೀಣಾ ಈ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳು ಕುರಿತು ಡಾ.ಕವಿತಾ ಕುಸುಗಲ, ಔದ್ಯೋಗಿಕ ಮಹಿಳೆಯರ ಸಾಧನೆಗಳು ಕುರಿತು ಶ್ರೀಮತಿ ಛಾಯಾ ನಂಜಪ್ಪ ವಿಷಯ ಮಂಡಿಸಲಿದ್ದಾರೆ.
ಗೋಷ್ಠಿ-9: ದಮನಿತ ಲೋಕದ ಸಬಲೀಕರಣ ಮಧ್ಯಾಹ್ನ 1 ರಿಂದ 3ಗಂಟೆವರೆಗೆ ಜರುಗಲಿದೆ. ಮಾಜಿ ಶಾಸಕ ಡಿ.ಎಸ್.ವೀರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕರಾದ ಡಾ.ರೋಹಿಣಾಕ್ಷ ಶೀರ್ಲಾಲು ಆಶಯ ನುಡಿಗಳನ್ನಾಡಲಿದ್ದಾರೆ. ದಮನಿತರ ಸಾಂಸ್ಕøತಿಕ ಜೀವನ ದೃಷ್ಟಿ ಜಕುರಿತು ಡಾ.ಬಿ.ಗಂಗಾಧರ, ಕನ್ನಡದಲ್ಲಿ ದಮನಿತರ ಸಾಹಿತ್ಯ ಕುರಿತು ಡಾ.ಹನುಮಂತಪ್ಪ ಸಂಜೀವಣ್ಣನವರ ಹಾಗೂ ಬದಲಾದ ಹೋರಾಟಗಳ ಸ್ವರೂಪ ಮತ್ತು ಯೋಜನೆಗಳ ಬಳಕೆ ಬಗ್ಗೆ ಡಾ.ನಟರಾಜ್ ಮಾತನಾಡಲಿದ್ದಾರೆ.
ಸಾಧಕರಿಗೆ ಸನ್ಮಾನ: ಮಧ್ಯಾಹ್ನ 3ರಿಂದ 4ಗಂಟೆವರೆಗೆ ಸಧಾಕರಿಗೆ ಸನ್ಮಾನ ಜರುಗಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವಾ ಆಶಯ ನುಡಿಗಳನ್ನಾಡಲಿದ್ದಾರೆ. ಬೆಂಗಳೂರು ಇಸ್ರೋ ಹಿರಿಯ ವಿಜ್ಞಾನಿ ಡಾ.ಕಿರಣ್ ಕುಮಾರ್ ಅವರು ಸನ್ಮಾಸಿವರು.
ಸನ್ಮಾನಿತರು: ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ ಗೌಡ, ಶಿಕ್ಷಣ ತಜ್ಞ ಸಾಂಸ್ಕøತಿಕ ರಾಯಭಾರಿ ಡಾ.ಮೋಹನ್ ಆಳ್ವಾ, ಹಿರಿಯ ವೈದ್ಯ ಡಾ.ಅನಿಲ್ಕುಮಾರ, ಸಮಾಜ ಸೇವಕ ಪದ್ಮನಾಭ ಕುಂದಾಪೂರ, ದಾನಿ ಹೊನ್ನಪ್ಪ ಶಂಕ್ರಿಕೊಪ್ಪ, ವಿಶೇಷ ಚೇತನ ಸಾಧಕಿ ಶ್ರೀಮತಿ ರಜನಿ ಗೋಪಾಲಕೃಷ್ಣ, ಸಂಗೀತ ತಜ್ಞ ಶ್ರೀಮತಿ ಚಂಪಾವತಿ ಸೋಮಶೇಖರ ಬಡಿಗೇರ, ಸಮಾಜ ಸೇವಕ ಕೆ.ಎಸ್.ಗುರುವೇಶ, ಹಿರಿಯ ಚಲನಚಿತ್ರ ಕಲಾವಿದ ಬೆಂಗಳೂರು ನಾಗೇಶ್, ಹಾಸ್ಯ ಬರಹಗಾರ ವೈ.ಸತ್ಯನಾರಾಯಣ, ಶೈಕ್ಷಣಿಕ ತಜ್ಞ ರವೀಂದ್ರ ರೆಡ್ಡಿ, ದಾನಿ ಶ್ರೀಮತಿ ಸುಲೋಚನ ಗಂಗಾಧರ ನಂದಿ, ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್.ಉಜಿನಪ್ಪ , ಸಾಹಿತ್ಯ ಸಂಘಟಕ ಟಿ.ಪಿ.ರಮೇಶ್, ಸಂಘಟಕ ನೀಲಕಂಠ ಬಡಿಗೇರ. ಕನ್ನಡಪರ ಹೊರಾಟಗಾರ ಶ್ರೀನಿವಾಸ ತಾಳುಕರ, ಸಾಹಿತಿ ಎಲ್.ವಿ.ಪಾಟೀಲ್, ಪತ್ರಕರ್ತ ಪ್ರಕಾಶ ಕೃಷ್ಣ ಭಟ್ಟ, ಸಮಾಜ ಸೇವಕ ಪುಂಡಲೀಕ ಪ್ರಭು, ಶಿಕ್ಷಣ ತಜ್ಞ ಜಿ.ರಾಮಕೃಷ್ಣ, ನುಡಿ ಸೇವಕ ಎಂ.ವಿ.ಧರಣೇಂದ್ರಯ್ಯ, ಸಹಕಾರ ಕ್ಷೇತ್ರದ ಸಾಧಕ ಎಸ್.ಎಸ್.ಪಾಟೀಲ, ಸಾಹಿತಿ ರಾಮಚಂದ್ರಪ್ಪ ಹೆಚ್, ಸಹಕಾರ ಕ್ಷೇತ್ರದ ಸಾಧಕ ಎಂ.ಪಿ.ಮಂಜುನಾಥ, ರೈತ ಹೋರಾಟಗಾರ ಎಸ್.ಎ. ರವೀಂದ್ರನಾಥ, ಸಮಾಜ ಸೇವಕ ಎಸ್.ಸತೀಶಬಾಬು, ಜಾನಪದ ತಜ್ಞ ಮೇಲಗಿರಯ್ಯ, ಸಮಾಜ ಸೇವಕರ ರಾ.ರಾಮಕೃಷ್ಣ ಅವರನ್ನು ಸನ್ಮಾನಿಸಲಾಗುವುದು.
ಮಧ್ಯಹ್ನಾ 4 ರಿಂದ 5ಗಂಟೆವರೆಗೆ ಬಹಿರಂಗ ಅಧಿವೇಶನ ಜರುಗಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ಪಾಂಡು ನಿರ್ಣಯ ಮಂಡನೆ ಮಾಡಲಿದ್ದಾರೆ.
ಸಮಾರೋಪ: ಸಂಜೆ 5 ರಿಂದ 8-30ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಗೌರವ ಉಪಸ್ಥಿತಿಯಲ್ಲಿ, ಗೌರವ ಅತಿಥಿಗಳಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯಸಭಾ ಸದಸ್ಯ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಎ.ನಾರಾಯಣಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಖಾತೆ ಸಚಿವ ಬಿ.ಸಿ.ನಾಗೇಶ ಅವರು ಭಾಗವಹಿಸಲಿದ್ದಾರೆ.
ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ ಕಟೀಲ್, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕರ್ನಾಟಕ ರಾಜ್ಯ ಜಾತ್ಯತೀತ ಜನತಾದಳ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಂಸದರಾದ ಐ.ಜಿ.ಸನದಿ, ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಯು.ಬಿ.ಬಣಕಾರ, ಶಿವರಾಜ ಸಜ್ಜನ, ಸುರೇಶಗೌಡ ಬ.ಪಾಟೀಲ, ಬಿ.ಎಚ್.ಬನ್ನಿಕೋಡ, ಅಜಿಂಪೀರ ಖಾದ್ರಿ, ಡಿ.ಎಂ.ಸಾಲಿ, ಸೋಮಣ್ಣ ಬೇವಿನಮರದ ಅವರು ಪಾಲ್ಗೊಳ್ಳಲಿದ್ದಾರೆ. ನಂತರ ರಾತ್ರಿ 10ಗಂಟೆ ವರೆಗೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿವೆ.
ವೇದಿಕೆ-2: ಗೋಷ್ಠಿ-09 ವಿದೇಶದಲ್ಲಿ ಕನ್ನಡ ಡಿಂಡಿಮ ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ಜರುಗಲಿದೆ. ಕಸಪಾ ಅಂತಾರಾಷ್ಟ್ರೀಯ ಘಟಕಗಳ ಸಲಹಾ ಸಮಿತಿ ಸದಸ್ಯರಾದ ಡಾ.ಆರತಿ ಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ದುಬೈನ ಸರ್ವೋತ್ತಮ ಶೆಟ್ಟಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ವಿದೇಶದಲ್ಲಿ ಕನ್ನಡ ಸಂಘಗಳ ಕಂಪು ಕುರಿತು ಜರ್ಮನಿಯ ರವೀಂದ್ರ ಕುಲಕರ್ಣಿ, ಕನ್ನಡಕ್ಕೆ ವಿದೇಶಿಯರ ಕೊಡುಗೆ ಬಗ್ಗೆ ಎಸ್.ಎಲ್.ಶ್ರೀನಿವಾಸಮೂರ್ತಿ ಹಾಗೂ ಅಮೆರಿಕದ ಶ್ರೀಮತಿ ಜ್ಯೋತಿ ಮಹಾದೇವ ಅವರು ವಿದೇಶದಲ್ಲಿ ಕನ್ನಡ ಸಾಹಿತಿಗಳು ಕುರಿತು ಮಾತನಾಡಲಿದ್ದಾರೆ.
ಗೋಷ್ಠಿ-10: ಕನ್ನಡ ಸಾಹಿತ್ಯದಲ್ಲಿ ವಿಷಯ ವೈವಿಧ್ಯ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಜರುಗಲಿದೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದು, ಬಾಗಲಕೋಟೆಯ ಹಿರಿಯ ಪ್ರಾಧ್ಯಾಪಕ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಆಶಯ ನುಡಿಗಳನ್ನಾಡಲಿದ್ದಾರೆ. ಯಕ್ಷಗಾನ ಸಾಹಿತ್ಯ ಕುರಿತು ಡಾ.ಆನಂದರಾಮ ಉಪಾಧ್ಯ, ವೈದ್ಯ ಸಾಹಿತ್ಯ ಕುರಿತು ನಾಡೋಜ ಡಾ.ಬಿ.ಟಿ.ರುದ್ರೇಶ್, ಚುಟುಕು ಸಾಹಿತ್ಯ ಕುರಿತು ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ಬಯಲಾಟ ಸಾಹಿತ್ಯ ಕುರಿತು ಡಾ.ಕೆ.ರುದ್ರಪ್ಪ ಅವರು ಮಾತನಾಡಲಿದ್ದಾರೆ.
ಗೋಷ್ಠಿ-11: ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನ ದೊಂದಿಗೆ ಕನ್ನಡ ಮಧ್ಯಾಹ್ನ 1 ರಿಂದ 3ರವರೆಗೆ ಜರುಗಲಿದೆ. ಹಿರಿಯ ಮಾಹಿತಿ ತಂತ್ರಜ್ಞಾನ ಸಲಹೆಗಾರ ಡಾ.ಉದಯಶಂಕರ ಪುರಾಣಿಕ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ವಿಜ್ಞಾನ ಬರಹಗಾರ ಡಾ.ಎಂ.ಆರ್.ನಾಗರಾಜ್ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಅವಿನಾಶ್ ಬಿ., ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಅಳವಡಿಕೆ ಕುರಿತು ಅನಂತ ನಾಗರಾಜ್ ಹಾಗೂ ಕನ್ನಡ ಸಾಹಿತ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಶ್ರೀಮತಿ ಕ್ಷಮಾ ಭಾನುಪ್ರಕಾಶ್ ಮಾತನಾಡಲಿದ್ದಾರೆ.
ಗೋಷ್ಠಿ-12: ಜಾನಪದ ಜಗತ್ತು ಮಧ್ಯಾಹ್ನ 3 ರಿಂದ 5ರವರೆಗೆ ಜರುಗಲಿದೆ. ಗೊಟಗೋಡಿ ಜಾನಪದ ವಿವಿ ಕಲಪತಿಗಳಾದ ಡಾ.ಟಿ.ಎಂ.ಭಾಸ್ಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಜಾನಪದ ತಜ್ಞ ಡಾ.ಶ್ರೀಪಾದ ಶೆಟ್ಟಿ ಆಶಯ ನುಡಿಗಳನ್ನಾಡಲಿದ್ದಾರೆ. ಜನಪದ ಸಾಹಿತ್ಯ ಪ್ರಭೇದಗಳು ಕುರಿತು ಮಂಗಳೂರಿನ ಡಾ.ಕೆ.ಅಭಯಕುಮಾರ್, ಜನಪದ ಕಲೆಗಳ ಪ್ರಕಾರಗಳು ಹಾಗೂ ಆರಾಧನೆಗಳು ಕುರಿತು ವೆಮಗಲ್ ನಾರಾಯಣಸ್ವಾಮಿ ಹಾಗೂ ಜನಪದದ ಪ್ರಸ್ತುತತೆ ಕುರಿತು ಡಾ.ಕೆ.ಸೌಭಾಗ್ಯವತಿ ಅವರು ಮಾತನಾಡಲಿದ್ದಾರೆ. ಸಂಜೆ 7 ರಿಂದ ರಾತ್ರಿ 10ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಸೇರಿ ಅತಿಥಿಗಳಿಗೆ ಭಾಷಣ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಸಮಯ ನಿಗದಿಗೊಳಿಸಿದೆ. ಸಿಎಂ ಬೊಮ್ಮಾಯಿ ಸೇರಿ ಎಲ್ಲಾ ಅತಿಥಿಗಳಿಗೂ ಈ ನಿಯಮ ಅನ್ವಯವಾಗಲಿದೆ. ಉದ್ಘಾಟನಾ ಭಾಷಣ ಮಾಡಲು ಮುಖ್ಯಮಂತ್ರಿಗಳಿಗೆ 30 ನಿಮಿಷ ಸಮಯ ನಿಗದಿ, ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರ ಭಾಷಣಕ್ಕೆ 45 ನಿಮಿಷ ನಿಗದಿ, ಬಿಎಸ್ವೈ, ಹೆಚ್ಡಿಕೆ ಸೇರಿ ಗಣ್ಯರಿಗೆ 10 ನಿಮಿಷ ಸಮಯ ನಿಗದಿ ಮಾಡಲಾಗಿದೆ. ಈ ಸಮಯದೊಳಗೆ ಭಾಷಣ ಮಾಡಿ ಮುಗಿಸಬೇಕೆಂಬ ನಿಯಮವನ್ನು ಕನ್ನಡ ಸಾಹಿತ್ಯ ಪರಿಷತ್ ತಂದಿದೆ.