ಹಾವೇರಿ: ಜಿಲ್ಲೆಯಲ್ಲಿ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಅಕ್ಕಿ ಆಲೂರಿನ ಶ್ರೀ ತುಳಜಾಭವಾನಿ ದೇವಿಯದ್ದು. ನವೆಂಬರ್.3, 2025ರಂದು 26ನೇ ವರ್ಷದ ಜಾತ್ರಾ ಮಹೋತ್ಸವವನ್ನು ನಡೆಸಲು ನಿಗದಿ ಪಡಿಸಲಾಗಿದೆ.
ಈ ಕುರಿತಂತೆ ಶ್ರೀ ತುಳಜಾಭವನಾನಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮದ ಡೊಳ್ಳೇಶ್ವರ ಕ್ರಾಸ್ ಹತ್ತಿರದಲ್ಲಿರುವಂತ ಶ್ರೀ ತುಳಜಾಭವಾನಿ ದೇವಿಯ 26ನೇ ಜಾತ್ರಾ ಮಹೋತ್ಸವವನ್ನು ನವೆಂಬರ್.3ರಂದು ನಡೆಸಲಾಗುತ್ತಿದೆ ಎಂಬುದಾಗಿ ತಿಳಿಸಿದೆ.
ನವೆಂಬರ್.3ರ ಸೋಮವಾರದಂದು ಬೆಳಗ್ಗೆ 5 ಗಂಟೆಗೆ ಶ್ರೀ ತುಳಜಾಭವಾನಿ ದೇವಿಗೆ ಸಕಲ ಮಂಗಲ ದ್ರವ್ಯಗಳ ಅಭಿಷೇಕದೊಂದಿಗೆ ಪೂಜೆ ಪ್ರಾರಂಭವಾಗಲಿದೆ. ಬೆಳಗ್ಗೆ 6 ಗಂಟೆಗೆ ಕುಂಭಗಳೊಂದಿಗೆ ದೇವಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಸಕಲ ವಾದ್ಯ ವೃಂದಗಳೊಂದಿಗೆ ಅಕ್ಕಿ ಆಲೂರು ನಗರ ಪ್ರದಕ್ಷಿಣೆ ಬಳಿಕ ದೇವಸ್ಥಾನಕ್ಕೆ ಆಗಮಿಸಲಿದೆ ಎಂದಿದೆ.
ಇನ್ನೂ ಮಧ್ಯಾಹ್ನ 1 ಗಂಟೆಗೆ ಶ್ರೀ ತುಳಜಾಭವಾನಿ ದೇವಿಯ ಮಹಾಮಂಗಳಾರತಿಯು ಜರುಗಲಿದೆ. ಹಾನಗಲ್ ತಾಲ್ಲೂಕಿನ ಅಕ್ಕಿ-ಆಲೂರು ಡೊಳ್ಳೇಶ್ವರ ಕ್ರಾಸ್ ಹತ್ತಿರ ಪ್ರತಿಷ್ಠಾಪಿಸಿರುವಂತ ಶ್ರೀ ತುಳಜಾಭವಾನಿ ದೇವಿಯ 26ನೇ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಭಕ್ತಾಧಿಗಳಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಧರ್ಮದರ್ಶಿಗಳು, ಅಕ್ಕಿ-ಆಲೂರಿನ ಗ್ರಾಮಸ್ಥರು ಹಾಗೂ ಗಂಗಮ್ಮ ಬಾಬಜಿ ಚಾರಿಟೇಬಲ್ ಟ್ರಸ್ಟ್ ಮನವಿ ಮಾಡಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ನೀವು ‘CM ಸಿದ್ಧರಾಮಯ್ಯ’ಗೆ ದೂರು ನೀಡಬೇಕೇ? ಜಸ್ಟ್ ಹೀಗೆ ಮಾಡಿ ಸಾಕು, ನಿಮ್ಮ ‘ಸಮಸ್ಯೆ ಕ್ಲಿಯರ್’
ಬೆಳಗಾವಿ ಕರ್ನಾಟಕದ ಒಂದು ಭಾಗ, ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸೇರಲು ಬಿಡುವುದಿಲ್ಲ: ಸಿಎಂ ಸಿದ್ಧರಾಮಯ್ಯ








