ಮೈಸೂರು : ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿ ಮುಡಾ ಕಚೇರಿ ಎದುರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ದೊಡ್ಡ ಹೈಡ್ರಾಮವೇ ನಡೆಯಿತು.
ಹೌದು ಮುಡಾ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಬಿಜೆಪಿ ಪ್ರತಿಭಟನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಪ್ರತಿಭಟನೆ ನಡೆಸಿದ್ದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲಿಲ್ಲ. ಈ ಹಿನ್ನಲೆ ನಮ್ಮನ್ನೂ ಬಂಧಿಸಿ ಎಂದು ಕೈ ಕಾರ್ಯಕರ್ತರು ಹೈಡ್ರಾಮ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುತ್ತಿಗೆ ಹಾಕಲು ಬಿಡದಿದ್ದಾಗ ತಮ್ಮನ್ನೂ ಅರೆಸ್ಟ್ ಮಾಡುವಂತೆ ಪಟ್ಟು ಹಿಡಿದಿದ್ದರು. ಇದೇ ವೇಳೆ ಮೈಸೂರು ಕಮಿಷನರೇಟ್ ಪೊಲೀಸರ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕಿ, ನಮ್ಮನ್ನೂ ಬಂಧಿಸಿ, ನಮ್ಮನ್ನು ಅರೆಸ್ಟ್ ಮಾಡದೆ ನೀವು ಅವಮಾನ ಮಾಡಿದ್ದೀರಿ, ನಿಮ್ಮ ಕಮಿಷನರ್ ಎಲ್ಲಿ ಎಂದು ಡಿಸಿಪಿ ಜಾಹ್ನವಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆವಾಜ್ ಹಾಕಿದ್ದಾರೆ. ಆದರೂ ಪೊಲೀಸರು ಬಂಧಿಸಲು ಮುಂದಾಗಿಲ್ಲ.