ಬೆಂಗಳೂರು: ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್. ದ್ವೇಷಕಾರಲು ಹೆಸರಾದವರನ್ನು ರಾಜ್ಯಕ್ಕೆ ಕರೆಸಿ ದ್ವೇಷ ಬಿತ್ತಲಾಗುತ್ತಿದೆ. ಬಾಂಬ್ ಸ್ಪೋಟದ ಆರೋಪಿಯೊಬ್ಬರು ಹೀಗೆ ದ್ವೇಷ ಭಾಷಣ ಮಾಡುವಾಗ ರಾಜ್ಯದ ಬಿಜೆಪಿ ನಾಯಕರು ಚಪ್ಪಾಳೆ ತಟ್ಟಿ ತಮಾಷೆ ನೋಡುತ್ತಾರೆ. ತಮ್ಮ ‘ಮತಬುಟ್ಟಿ’ಯನ್ನು ಭದ್ರಪಡಿಸಿಕೊಳ್ಳುತ್ತಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿ ವಿರುದ್ಧ #BJPHatePoliticsನಲ್ಲಿ ವಾಗ್ಧಾಳಿ ನಡೆಸಿದೆ.
ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್. ದ್ವೇಷಕಾರಲು ಹೆಸರಾದವರನ್ನು ರಾಜ್ಯಕ್ಕೆ ಕರೆಸಿ ದ್ವೇಷ ಬಿತ್ತಲಾಗುತ್ತಿದೆ.
ಬಾಂಬ್ ಸ್ಪೋಟದ ಆರೋಪಿಯೊಬ್ಬರು ಹೀಗೆ ದ್ವೇಷ ಭಾಷಣ ಮಾಡುವಾಗ ರಾಜ್ಯದ ಬಿಜೆಪಿ ನಾಯಕರು ಚಪ್ಪಾಳೆ ತಟ್ಟಿ ತಮಾಷೆ ನೋಡುತ್ತಾರೆ. ತಮ್ಮ 'ಮತಬುಟ್ಟಿ'ಯನ್ನು ಭದ್ರಪಡಿಸಿಕೊಳ್ಳುತ್ತಾರೆ. #BJPHatePolitics pic.twitter.com/x2HFyU4g64
— Karnataka Congress (@INCKarnataka) January 5, 2023
ಈ ಕುರಿತಂತೆ ಸರಣಿ ಟ್ವಿಟ್ ( Twitter ) ಮಾಡಿದ್ದು, ಪಂಪ್ ವೆಲ್ ಮೇಲ್ಸೇತುವೆಯನ್ನು ನಿಗದಿಯಂತೆ ಪೂರ್ಣಗೊಳಿಸಲಾಗದ ನಳೀನ್ ಕುಮಾರ್ ಕಟೀಲ್ ( Nalin Kumar Kateel ) ಅವರು ಸೂರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಕರಾವಳಿಗರ ಕಿವಿ ಮೇಲೆ ಹೂವಿಟ್ಟಂತೆ ಈಗ ಮತ್ತೊಂದು ಲವ್ ಜಿಹಾದ್ ( Love Jihad ) ಹೂವು ಇಡಲು ಹೊರಟಿದ್ದಾರೆ. ಅಭಿವೃದ್ಧಿ ಆದ್ಯತೆಯಲ್ಲ ಎಂದು ಗಂಟಾಘೋಷವಾಗಿ ಹೇಳಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸಿಯಾಗಿದೆ ಎಂದು ಹೇಳಿದೆ.
ಪಂಪ್ ವೆಲ್ ಮೇಲ್ಸೇತುವೆಯನ್ನು ನಿಗದಿಯಂತೆ ಪೂರ್ಣಗೊಳಿಸಲಾಗದ@nalinkateel ಅವರು ಸೂರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಕರಾವಳಿಗರ ಕಿವಿ ಮೇಲೆ ಹೂವಿಟ್ಟಂತೆ ಈಗ ಮತ್ತೊಂದು ಲವ್ ಜಿಹಾದ್ ಹೂವು ಇಡಲು ಹೊರಟಿದ್ದಾರೆ.
ಅಭಿವೃದ್ಧಿ ಆದ್ಯತೆಯಲ್ಲ ಎಂದು ಗಂಟಾಘೋಷವಾಗಿ ಹೇಳಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸಿಯಾಗಿದೆ.#BJPHatePolitics pic.twitter.com/nnIhNQfnTT
— Karnataka Congress (@INCKarnataka) January 5, 2023
ಸಮಾಜದಲ್ಲಿನ ಲೋಪಗಳನ್ನು ಅರಿಯಲಾಗದ, ಅಭಿವೃದ್ಧಿಪರ, ಆಡಳಿತಾತ್ಮಕ ಚಿಂತನೆಗಳು ತಿಳಿಯದ ಬಿಜೆಪಿ ನಾಯಕರಿಗೆ ( BJP Leaders ) ತಿಳಿದಿರುವುದು ದ್ವೇಷ ಬಿತ್ತುವುದೊಂದೇ. ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದಿದ್ದ “ದ್ವೇಷದ ಕ್ವಾರಿಯ ಮಾಲೀಕ” ತೇಜಸ್ವಿ ಸೂರ್ಯಗೆ ತಿಳಿದಿದ್ದು ಎರಡೇ, ದ್ವೇಷ ಹಾಗೂ ದೋಸೆ ಎಂದು ವ್ಯಂಗ್ಯವಾಡಿದೆ.
ಸಮಾಜದಲ್ಲಿನ ಲೋಪಗಳನ್ನು ಅರಿಯಲಾಗದ, ಅಭಿವೃದ್ಧಿಪರ, ಆಡಳಿತಾತ್ಮಕ ಚಿಂತನೆಗಳು ತಿಳಿಯದ @BJP4Karnataka ನಾಯಕರಿಗೆ ತಿಳಿದಿರುವುದು ದ್ವೇಷ ಬಿತ್ತುವುದೊಂದೇ.
ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದಿದ್ದ "ದ್ವೇಷದ ಕ್ವಾರಿಯ ಮಾಲೀಕ" @Tejasvi_Surya ಗೆ ತಿಳಿದಿದ್ದು ಎರಡೇ,
ದ್ವೇಷ ಹಾಗೂ ದೋಸೆ!!#BJPHatePolitics pic.twitter.com/sfyGXtAIFd— Karnataka Congress (@INCKarnataka) January 5, 2023
40% ಗೆ ಒಂದು ತಲೆ ತೆಗೆದ ಕಮಿಷನ್ ಗಿರಾಕಿ ಕೆ.ಎಸ್ ಈಶ್ವರಪ್ಪ ಅವರು ಬಾಯಿ ತೆರೆದರೆ ಉದುರುವುದು ಅಶ್ಲೀಲದ & ದ್ವೇಷದ ನುಡಿಗಳೇ.. ಶಾಂತಿ ಇದ್ದರೆ ಬಿಜೆಪಿ ಬೇಳೆ ಬೇಯುವುದಿಲ್ಲ, ಏಕೆಂದರೆ ಬಿಜೆಪಿಗೆ ದ್ವೇಷ ಬಿಟ್ಟು ಅಭಿವೃದ್ಧಿಪರ ಯೋಚನೆಗಳಿಲ್ಲ. ರಸ್ತೆ ಗುಂಡಿಗಳಿಗೆ ಉರುಳಿದ ತಲೆಗಳು, ಕಮಿಷನ್ ಕಿರುಕುಳಕ್ಕೆ ಹೋದ ಜೀವಗಳ ಇವರಿಗೆ ಲೆಕ್ಕವಿಲ್ಲ ಎಂಬುದಾಗಿ ಗುಡುಗಿದೆ.
40% ಗೆ ಒಂದು ತಲೆ ತೆಗೆದ ಕಮಿಷನ್ ಗಿರಾಕಿ @ikseshwarappa ಅವರು ಬಾಯಿ ತೆರೆದರೆ ಉದುರುವುದು ಅಶ್ಲೀಲದ & ದ್ವೇಷದ ನುಡಿಗಳೇ..
ಶಾಂತಿ ಇದ್ದರೆ ಬಿಜೆಪಿ ಬೇಳೆ ಬೇಯುವುದಿಲ್ಲ, ಏಕೆಂದರೆ ಬಿಜೆಪಿಗೆ ದ್ವೇಷ ಬಿಟ್ಟು ಅಭಿವೃದ್ಧಿಪರ ಯೋಚನೆಗಳಿಲ್ಲ.
ರಸ್ತೆ ಗುಂಡಿಗಳಿಗೆ ಉರುಳಿದ ತಲೆಗಳು, ಕಮಿಷನ್ ಕಿರುಕುಳಕ್ಕೆ ಹೋದ ಜೀವಗಳ ಇವರಿಗೆ ಲೆಕ್ಕವಿಲ್ಲ. pic.twitter.com/Au2qdfLa17
— Karnataka Congress (@INCKarnataka) January 5, 2023
ರಾಜ್ಯದಲ್ಲಿ ಕೋಮುಗಲಭೆಗಳನ್ನು ತಡೆಯುವ ಹೊಣೆಹೊತ್ತ ಮುಖ್ಯಮಂತ್ರಿಗಳು ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಹಜ’ ಎಂದು ಗಲಭೆಗೆ ಕಾರಣರಾದ ಪುಂಡರ ಪರ ಮಾತನಾಡುತ್ತಾರೆ. ಪರಿಣಾಮ ರಾಜ್ಯ ಹೊತ್ತಿ ಉರಿಯುತ್ತದೆ. ರಾಜ್ಯದ ಸೌಹಾರ್ದತೆ ಹಾಳಾದರೇನು? ಬಿಜೆಪಿಯ ‘ಅಜೆಂಡಾ’ ಫಲಿಸುತ್ತದೆ. ಚುನಾವಣೆಯ ಲಾಭ ಖಚಿತವಾಗುತ್ತದೆ ಎಂದು ಹೇಳಿದೆ.
ರಾಜ್ಯದಲ್ಲಿ ಕೋಮುಗಲಭೆಗಳನ್ನು ತಡೆಯುವ ಹೊಣೆಹೊತ್ತ ಮುಖ್ಯಮಂತ್ರಿಗಳು 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಹಜ' ಎಂದು ಗಲಭೆಗೆ ಕಾರಣರಾದ ಪುಂಡರ ಪರ ಮಾತನಾಡುತ್ತಾರೆ. ಪರಿಣಾಮ ರಾಜ್ಯ ಹೊತ್ತಿ ಉರಿಯುತ್ತದೆ.
ರಾಜ್ಯದ ಸೌಹಾರ್ದತೆ ಹಾಳಾದರೇನು? ಬಿಜೆಪಿಯ 'ಅಜೆಂಡಾ' ಫಲಿಸುತ್ತದೆ. ಚುನಾವಣೆಯ ಲಾಭ ಖಚಿತವಾಗುತ್ತದೆ. #BJPHatePolitics pic.twitter.com/jAcWTZtGWF
— Karnataka Congress (@INCKarnataka) January 5, 2023
ಶಾಂತಿ ಸೌಹಾರ್ದತೆಗೆ ಹೆಸರಾದ ಕರ್ನಾಟಕಕ್ಕೆ ಗಲಭೆ ಪೀಡಿತ, ಕಾನೂನು ಸುವ್ಯವಸ್ಥೆಯ ಗಂಧ-ಗಾಳಿಯಿಲ್ಲದ ಮಾಡೆಲ್ ಬೇಕೆಂದು ಬಿಜೆಪಿಗರು ಬಯಸುತ್ತಾರೆ. ತಮ್ಮ ವಿರೋಧಿಗಳ ವಿರುದ್ಧ ಬುಲ್ಡೋಜರ್ ನುಗ್ಗಿಸಿ ವಿಕೃತಿ ಮೆರೆಯುವುದು, ದ್ವೇಷ ಕಾರುವುದು ಬಿಜೆಪಿಗೆ ಬೇಕಿರುವ ಮಾಡೆಲ್. ಕಾನೂನು ಪಾಲಿಸುವುದು ಕರ್ನಾಟಕದ ಮಾಡೆಲ್ ಎಂದು ತಿಳಿಸಿದೆ.
ಶಾಂತಿ ಸೌಹಾರ್ದತೆಗೆ ಹೆಸರಾದ ಕರ್ನಾಟಕಕ್ಕೆ ಗಲಭೆ ಪೀಡಿತ, ಕಾನೂನು ಸುವ್ಯವಸ್ಥೆಯ ಗಂಧ-ಗಾಳಿಯಿಲ್ಲದ ಮಾಡೆಲ್ ಬೇಕೆಂದು ಬಿಜೆಪಿಗರು ಬಯಸುತ್ತಾರೆ.
ತಮ್ಮ ವಿರೋಧಿಗಳ ವಿರುದ್ಧ ಬುಲ್ಡೋಜರ್ ನುಗ್ಗಿಸಿ ವಿಕೃತಿ ಮೆರೆಯುವುದು, ದ್ವೇಷ ಕಾರುವುದು ಬಿಜೆಪಿಗೆ ಬೇಕಿರುವ ಮಾಡೆಲ್. ಕಾನೂನು ಪಾಲಿಸುವುದು ಕರ್ನಾಟಕದ ಮಾಡೆಲ್. #BJPHatePolitics pic.twitter.com/m43uvHRtso
— Karnataka Congress (@INCKarnataka) January 5, 2023