ಹಾಸನ : ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆಯಾದ ಹಾಸನಾಂಬೆಯ ದರ್ಶನದ ಅವಧಿಯನ್ನು ಜಿಲ್ಲಾಡಳಿತ ವಿಸ್ತರಣೆ ಮಾಡಿದೆ
ಅದರಂತೆ ಭಕ್ತರು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ದೇವಿಯ ದರ್ಶನವನ್ನು ಪಡೆಯಬಹುದಾಗಿದೆ ಎಂದು ಹಾಸನ ಜಿಲ್ಲಾಡಳಿತ ಘೋಷಣೆ ಮಾಡಿದೆ. ಆಕ್ಟೋಬರ್ 27 ರ ವರೆಗೆ ಹಾಸನಾಂಬೆ ದೇವಿಯ ಜಾತ್ರೆ ನಡೆಯಲಿದ್ದು ಅಲ್ಲಿಯವರೆಗೆ ಭಕ್ತರಿಗೆ ದೇವಿ ದರ್ಶನ ಪಡೆಯಲು ಅವಕಾಶವಿದೆ.