ಹಾಸನ : ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಬೇಲೂರು ಬಿಇಒ ರಾಜೇಗೌಡನನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಈ ಕುರಿತು ಆದೇಶ ಹೊರಡಿಸಿದ್ದಾರೆ. ಹಾಸನ ಜಿಲ್ಲೆಯ ಡಿಡಿಪಿಐ ವರದಿ ಆಧರಿಸಿ ಬಿಇಒ ರಾಜೇಗೌಡನನ್ನು ಅಮಾನತು ಗೊಳಿಸಲಾಗಿದೆ.
ಭ್ರಷ್ಟಾಚಾರ, ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದು ಆರೋಪಗಳು ಸಾಬೀತು ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೇ ಇತ್ತೀಚಿಗೆ ಶಾಸಕ ಎಚ್ ಕೆ ಸುರೇಶ್ ಜೊತೆಗೆ ರಾಜೇಗೌಡ ವಾಗ್ವಾದ ನಡೆಸಿದ್ದ ಇದೀಗ ಬೇಲೂರು ಬಿಇಓ ರಾಜೇಗೌಡನನ್ನ ಅಮಾನತುಗೊಳಿಸಲಾಗಿದೆ.