ಹಾಸನ : ಮೂರು ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಎಸಗಿದ್ದರ ಹಿನ್ನೆಲೆಯಲ್ಲಿ ಟೈಲರ್ ಶಾಪ್ ಮಹಿಳೆಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಹಾಸನದಲ್ಲಿ ಲೇಡೀಸ್ ಡ್ರೆಸ್ ಮೇಕರ್ ಹೇಮಾವತಿಗೆ ರಸ್ತೆಯಲ್ಲಿಯೇ ಮಹಿಳೆಯರು ಹಲ್ಲೆ ಮಾಡಿದ್ದಾರೆ. ಮಹಿಳೆಯರು ಹೇಮಾವತಿಯನ್ನು ಎಳೆದಾಡಿ ಥಳಿಸಿದ್ದಾರೆ.
ಹೇಮಾವತಿ ವಿರುದ್ಧ ಸುಮಾರು 3 ಕೋಟಿಗು ಅಧಿಕ ಹಣ ಪಡೆದು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಚಿನ್ನಾಭರಣವನ್ನು ಅಡವಿಟ್ಟು ಗ್ರಾಹಕರು ಲಕ್ಷಾಂತರ ರೂಪಾಯಿ ಹಣ ಆಕೆಗೆ ಕೊಟ್ಟಿದ್ದಾರೆ. ಕೊಡಚಾದ್ರಿ ಚಿಟ್ಸ್ ನಲ್ಲಿ ಒಂದು ಕೋಟಿ ರೂಪಾಯಿ ಚೀಟಿ ಹಾಕಿದ್ದೇನೆ ಎಂದು ಎಲ್ಲರಿಗೂ ತೋರಿಸಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ. ಮಹಿಳಾ ಗ್ರಾಹಕರನ್ನೆ ಟಾರ್ಗೆಟ್ ಮಾಡಿ ವಂಚನೆ ಆರೋಪ ಕೇಳಿಬಂದಿಸದೆ.
ಅಲ್ಲದೆ ಮಗಳನ್ನು ವಿದೇಶದಲ್ಲಿ ಇಂಜಿನಿಯರಿಂಗ್ ಓದಿಸುವುದಕ್ಕೆ ಸಾಲ ಮಾಡಿದ್ದಾರೆ ಒಂದು ಕೋಟಿ ಮನೆ ಖರೀದಿಸಿದ್ದೇನೆ ಎಂದು ಸಾಲ ಪಡೆದಿದ್ದ ಹೇಮಾವತಿ ಜ್ಯೋತಿ ಡ್ರೆಸ್ ಮೇಕರ್ಸ್ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದಳು. ಹಾಸನದ ಅರಳಿಪೇಟೆ ರಸ್ತೆಯಲ್ಲಿ ಇರುವ ಡ್ರೆಸ್ ಮೇಕಿಂಗ್ ಶಾಪ್ ಇದೆ. ಹೇಮಾವತಿ ವಂಚನೆಗೆ ಪತಿ ವಿರೂಪಾಕ್ಷಪ್ಪ ಸಹ ನೀಡಿರುವ ಆರೋಪ ಕೇಳಿ ಬಂದಿದೆ. ಓರ್ವ ಮಹಿಳೆಯಿಂದಲೇ 45 ಲಕ್ಷ ಪಡೆದು ವಂಚನೆ ಎಸಗಿದ್ದಾರೆ. ಈ ವಿಚಾರವಾಗಿ ಹಾಸನದ ಪೆನ್ಷನ್ ಮೊಹಲ್ಲಾದಲ್ಲಿ ದೂರು ದಾಖಲಾಗಿದ್ದು ಹಲ್ಲೆಗೆ ಒಳಗಾದ ಹೇಮಾವತಿಯಿಂದಲೂ ಪ್ರತಿ ದೂರು ದಾಖಲಾಗಿದೆ.








