ಹಾಸನ : ಕಳೆದ ನವೆಂಬರ್ ನಿಂದ ಹಾಸನ ಹಾಗೂ ಚಿಕ್ಕಮಂಗಳೂರು ಭಾಗಗಳಲ್ಲಿ ಪುಂಡಾನೆ ಸೆರೆಗೆ ಸಾಕಾನೆಗಳಿಂದ ಅರಣ್ಯ ಸಿಬ್ಬಂದಿ ಸಾಕಷ್ಟು ಕಾರ್ಯಾಚರಣೆ ನಡೆಸಿದರು ಸಹ ಪುಂಡನೆಯನ್ನು ಸೆರೆ ಹಿಡಿಯಲು ಆಗಿಲ್ಲ ಇತ್ತೀಚಿಗೆ ಹಾಸನದಲ್ಲಿ ಅರ್ಜುನನ ಸಾವಿಗೆ ಕಾರಣನಾದ ಪುಂಡನೆಯನ್ನು ಅಭಿಮನ್ಯು ನೇತೃತ್ವದಲ್ಲಿ ಸೆರೆ ಹಿಡಿಯಲಾಗಿತ್ತು.
ಅಲ್ಲದೆ ಇತ್ತೀಚೆಗೆ ಹಾಸನದಲ್ಲಿ ಜನವರಿ ನಾಲ್ಕರಂದು, ಕಾರ್ಮಿಕ ಒಬ್ಬ ಕಾಡಾನೆ ದಾಳಿಗೆ ಮೃತಪಟ್ಟಿದ್ದ ಇದೀಗ ಆ ಕಾಡಾನೆ ಸರಿ ಹಿಡಿಯಲು ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿತ್ತು. ಹಲವು ಸಾಕನೆಗಳ ಜೊತೆಗೂಡಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಿತ್ತು.
ಹಾಸನ ಜಿಲ್ಲೆಯಲ್ಲಿ ಕಾಡನೆ ಸೆರೆ ಕಾರ್ಯಾಚರಣೆ ದಿಡೀರ ಸ್ಥಗಿತಗೊಳಿಸಲಾಗಿದೆ. ಕೆಲ ಆನೆಗಳಿಗೆ ಮದುವೇರಿದೆ ಎಂಬ ನೆಪ ಹೇಳಿ, ಇದೀಗ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ತಾತ್ಕಾಲಿಕ ಕ್ಯಾಂಪ್ನಲ್ಲಿ 8 ಸಾಕಾಣಿಗಳಿದ್ದವು ಸದ್ಯ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಸಾಕಾಣಿಗಳನ್ನು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.