ಹಾಸನ : ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಕ್ಕೆ ರೈತನ ಮೇಲೆ ಹಲ್ಲೆ ನಡೆಸಲಾಗಿದೆ ಅನುದಾನ ದುರ್ಬಳಕೆ ಆರೋಪ ಮಾಡಿದ್ದ ರೈತ ರವಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ವಿರುದ್ಧ ಆರೋಪ ಮಾಡಿದ್ದರು. ರೈತನ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಅರಕಲಗೂಡಿನ ಕಾಳೆನಹಳ್ಳಿ ಗ್ರಾಮದಲ್ಲಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ದುಡ್ಡಿಲ್ಲದೆ ಹಸು ಮಾರಿ ಆರ್‌ಟಿಐಗೆ ಅರ್ಜಿ ಹಾಕಿರುತ್ತಾರೆ ಅರ್ಜಿ ಹಾಕಿ 32,340 ಪಾವತಿಸಿರುತ್ತಾರೆ. ಹಸು ಮಾರಾಟ ಮಾಡಿ ಜೆರಾಕ್ಸ್ ಗೆ ಹಣ ಕಟ್ಟಿರುತ್ತಾರೆ. ಹೀಗಾಗಿ ರೈತನ ನಡೆಯಿಂದ ಸಿಟ್ಟಿಗೆದ್ದು ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ರೈತ ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ ರೈತ ರವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರೈತರ ರವಿ ದುಡ್ಡಿಲ್ಲದೆ ಹಸು ಮಾರಿ ಆರ್‌ಟಿಐಗೆ ಅರ್ಜಿ ಹಾಕಿರುತ್ತಾರೆ ಅರ್ಜಿ ಹಾಕಿ 32,340 ರೂಪಾಯಿ ಪಾವತಿಸುತ್ತಾರೆ. ಅಲ್ಲದೇ 16, 370 ಪುಟದ ದಾಖಲೆಗಳನ್ನು ಕೊಟ್ಟಿದ್ದಕ್ಕೆ ಇದೀಗ ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ರೈತ ರವಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.








