ಹಾಸನ : ವರ್ಷಕ್ಕೆ ಒಮ್ಮೆ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ಮಹೋತ್ಸವದಲ್ಲಿ ಅ.26 ರಂದು ಸಾರ್ವಜನಿಕರ ದರ್ಶನಕ್ಕೆ ಕಡೇ ದಿನವಾಗಿದೆ.
ಹಾಸನಾಂಬೆ ಸಾರ್ವಜನಿಕರ ದರ್ಶನಕ್ಕೆ ಇಂದು 12 ನೇ ದಿನದ ಸಾರ್ವಜನಿಕ ದರ್ಶನ ಹಾಗೂ ದೇವಿಯ ದರ್ಶನದ ಕಡೆಯ ದಿನವಾಗಿರುವುದರಿಂದ ಭಕ್ತರ ಸಾಗರವೇ ಹರಿದು ಬರುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ.
ಈ ಬಾರಿ ಅ.13 ರಿಂದ ಬಾಗಿಲು ಹಾಸನಾಂಬೆ ದೇವಾಲಯದ ಬಾಗಿಲು ತೆರೆದರೂ ಅ. 14 ರಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು, ಅಂದಿನಿಂದ ಇದುವರೆಗೆ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಅ,26 ರಂದು ಬೆಳಗ್ಗೆ 6 ರಿಂದ ಸಂಜೆ 4 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 4:30 ರಿಂದ 11 ರವರೆಗೆ ದೇವಿಗೆ ನೈವೇದ್ಯ ಇರುವುದರಿಂದ ಭಕ್ತರ ದರ್ಶನಕ್ಕೆ ಅವಕಾಶ ಇರುವುದಿಲ್ಲ , ಅದರ ಹೊರತಾಗಿ ರಾತ್ರಿ 11 ರಿಂದ ಬೆಳಗ್ಗೆ 7 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
Online Fraud: ದೀಪಾವಳಿಗೆ ಸ್ವೀಟ್ಸ್ ಆರ್ಡರ್ ಮಾಡುವಾಗ ₹ 2.4 ಲಕ್ಷ ಕಳ್ಕೊಂಡ ಮುಂಬೈ ಮಹಿಳೆ… ಮುಂದೇನಾಯ್ತು ನೋಡಿ
BIGG NEWS : ಕರ್ನಾಟಕದ ಎರಡು ಕಡೆ ‘ಮಲ್ಲಿಕಾರ್ಜುನ ಖರ್ಗೆ ಬೃಹತ್ ಅಭಿನಂದನಾ ಸಮಾವೇಶ’ |Mallikarjuna Kharge
BIGG NEWS : ಸಚಿವ ವಿ. ಸೋಮಣ್ಣ ‘ಕಪಾಳ ಮೋಕ್ಷ’ ವಿವಾದಕ್ಕೆ ಟ್ವಿಸ್ಟ್ : ಸಂಘಟನೆಗಳ ವಿರುದ್ಧವೇ ಮಹಿಳೆ ದೂರು