ರಾಮನಗರ : ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಯಾಕೋ ನಿಲ್ಲುವಂತೆ ಕಾಣುತ್ತಿಲ್ಲ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗೌಡಹಳ್ಳಿ ಎಂಬಲ್ಲಿ ಇದೀಗ ಕಾಡಾನೆ ದಾಳಿಗೆ ರಾಜು (48) ಎನ್ನುವ ವ್ಯಕ್ತಿ ಬಲಿಯಾಗಿದ್ದಾರೆ. ಇದುವರೆಗೆ ಕಾಡಾನೆಗಳ ದಾಳಿಗೆ 10 ಜನರು ಬಲಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ರಾಜು ಸೇರಿದಂತೆ ಇನ್ನೂ ಕೆಲವರು ಗೌಡಹಳ್ಳಿ ಸಮೀಪದ ಸಂಗಮಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಮೂರು ಜನ ಪೈಕಿ ರಾಜು ದಾರಿ ತಪ್ಪಿದ್ದಾನೆ. ಎಷ್ಟೇ ಹುಡುಕಿದರೂ ರಾಜು ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಕಾಡಿನಲ್ಲಿ ರಾಜು ಮೃತದೇಹ ಪತ್ತೆಯಾಗಿದೆ.
ಅಭಿಮನ್ಯು ತಂಡದ ಮೇಲೆ ‘ಬೀಟಮ್ಮ’ ಗ್ಯಾಂಗ್ ದಾಳಿ
ಚಿಕ್ಕಮಗಳೂರಿನಲ್ಲಿ ಭೀಮ ಆನೆ ಸೇರಿದಂತೆ 30 ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆ ಸೆರೆ ಕಾರ್ಯಾಚರಣೆ ಸಂಬಂಧ ಅಭಿಮನ್ಯೂ ಮತ್ತು ಆತನ ತಂಡ ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ಕ್ಯಾಂಪ್ ಹಾಕಲಾಗಿದೆ. ಈ ಕ್ಯಾಂಪ್ಗೆ ಬೀಟಮ್ಮ ಗ್ಯಾಂಗ್ ರಾತ್ರೋರಾತ್ರಿ ದಾಳಿ ಮಾಡಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಕುಮ್ಕಿ ಆನೆಗಳ ಕ್ಯಾಂಪ್ ಶಿಫ್ಟ್ ಮಾಡಿದ್ದಾರೆ.
ಬೀಟಮ್ಮ ಗ್ಯಾಂಗ್ ಆಲದಗುಡ್ಡೆ ಗ್ರಾಮದಿಂದ ಮತ್ತಾವರ ಗ್ರಮಾಕ್ಕೆ ಬಂದು ಬಂದು ನೆಲಸಿದೆ.ಮತ್ತಾವರ ಗ್ರಾಮ ಸಮೀಪದ ಅರಣ್ಯದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ. ಕುಮ್ಕಿ ಕ್ಯಾಂಪ್ನಲ್ಲಿ ಅಭಿಮನ್ಯು, ಮಹೇಂದ್ರ, ಭೀಮ ಧನಂಜಯ, ಸುಗ್ರೀವ, ಹರ್ಷ ಅಶ್ವತ್ಥಾಮ ಪ್ರಶಾಂತ ಎಂಬ ಹೆಸರಿನ ಆನೆಗಳಿವೆ. ಅಭಿಮನ್ಯು ಟೀಮ್ ಕಾರ್ಯಚರಣೆಗಾಗಿ ನಾಗರಹೊಳೆಯಿಂದ ಮತ್ತಾವರ ಗ್ರಾಮಕ್ಕೆ ಬಂದಿವೆ.