ಕುರುಕ್ಷೇತ್ರ: ಕೆನಡಾಕ್ಕೆ ಹೋಗಲು ವೀಸಾ ವಿಳಂಬದಿಂದ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ನಡೆದಿದೆ.
ಶಹಬಾದ್ ಉಪವಿಭಾಗದ ಗೂರ್ಖಾ ಗ್ರಾಮದ ವಿಕೇಶ್ ಸೈನಿ ಅಲಿಯಾಸ್ ದೀಪಕ್ (23) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ದೀಪಕ್ ವೀಸಾ ಗುರುವಾರ ಬಂದಿತ್ತು. ಆದರೆ, ವೀಸಾ ಕಾಣೆಯಾಗಿರುವುದರಿಂದ ಅವನಿಗೆ ಈ ವಿಷಯವನ್ನು ಕುಟುಂಬದವರು ಯಾರೂ ಹೇಳಲಿಲ್ಲ. ಆದ್ರೆ, ತನ್ನ ಸ್ನೇಹಿತನಿಗೆ ವೀಸಾ ಬಂದಿದೆ. ನನಗೆ ಇನ್ನೂ ಬಂದಿಲ್ಲ ಎಂದು ಅಸಮಾಧಾನಗೊಂಡಿದ್ದ. ಇದಾಗ ಬಳಿಕ ಜನ್ಸಾ ಪಟ್ಟಣದ ಕಾಲುವೆ ಆತನ ಶವ ಶುಕ್ರವಾರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
BIGG NEWS: ಭಾರೀ ಮಳೆಯಿಂದಾಗಿ ಹಲವು ರಾಜ್ಯಗಳಲ್ಲಿ ಪ್ರವಾಹ: ಭೂಕುಸಿತಕ್ಕೆ 31 ಮಂದಿ ಬಲಿ