ಚಿತ್ರದುರ್ಗ: ಮಾಜಿ ಸಚಿವ ದಿವಂಗತ ಕೆ.ಹೆಚ್ ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ್(33) ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಕಾಲಿಕವಾಗಿ ನಿಧನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಿಂದ ಆಯ್ಕೆಯಾಗಿ, ಸಚಿವರಾಗಿದ್ದಂತ ದಿ.ಕೆ.ಹೆಚ್ ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ್ ಶುಕ್ರವಾರ ನಿಧನರಾಗಿದ್ದಾರೆ. ಅವರ ತಂದೆ ಕೆಪಿಸಿಸಿ ಸದಸ್ಯ ವಿಜಯ್ ಕುಮಾರ್ ಆಗಿದ್ದಾರೆ.
ಇಂದು ಹರ್ಷವರ್ಧನ್ ಅವರ ಅಂತ್ಯಕ್ರಿಯೆಯನ್ನು ಹಿರಿಯೂರು ತಾಲೂಕಿನ ಹೊಸಯಳನಾಡು ಸಮೀಪದ ಕಸವನಹಳ್ಳಿ ಗ್ರಾಮದಲ್ಲಿರುವ ಕೆ.ಹೆಚ್ ರಂಗನಾಥ್ ಅವರ ಸಮಾಧಿಯ ಬಳಿಯಲ್ಲಿ ನೆರವೇರಿಸಲಾಗುತ್ತದೆ ಎಂಬುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಇನ್ನೂ ಮಾಜಿ ಸಚಿವ ಕೆ.ಹೆಚ್ ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ್ ನಿಧಕ್ಕೆ ಮಾಜಿ ಸಚಿವ ಹೆಚ್.ಆಂಜನೇಯ ತೀವ್ರ ಸಂತಾಪ ಸೂಚಿಸಿದ್ದಾರೆ.