ಹೈದರಾಬಾದ್: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಟೇಬಲ್ ಟೆನ್ನಿಸ್ ಆಟಗಾರ್ತಿ ನೈನಾ ಜೈಸ್ವಾಲ್ ಅವರಿಗೆ ಅಶ್ಲೀಲ ಸಂದೇಶ ಕಳುಹಿಸೋ ಮೂಲಕ ಕಿರುಕುಳ ನೀಡುತ್ತಿದ್ದಾರೆಂದು ಇದೀಗ ನೈನಾ ತಂದೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
BIGG NEWS : ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಅಂದುಕೊಂಡಿದ್ದೆ : ಸಚಿವ ಶ್ರೀರಾಮುಲು ವಾಗ್ದಾಳಿ
ಶ್ರೀಕಾಂತ್ ಹೆಸರಿನ ಯುವಕನೊಬ್ಬ ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ನೈನಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾನೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ರೂ ಕಿಡಿಗೇಡಿ ತನ್ನ ವರ್ತನೆಯನ್ನು ಬದಲಿಸಿಕೊಂಡಿಲ್ಲ. ಪೊಲೀಸರಿಂದ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದೇ ತನ್ನ ದುರ್ಬುದ್ಧಿಯನ್ನು ಮುಂದುವರಿಸಿದ್ದಾನೆ. ಮತ್ತೆ ಜಾಲತಾಣದಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೆ ಬಿಟ್ಟರೆ ಸರಿಹೋಗುವುದಿಲ್ಲ ಎಂದರಿತಿರುವ ನೈನಾ ತಂದೆ ಅಶ್ವಿನ್ ಇದೀಗ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
BIGG NEWS : ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಅಂದುಕೊಂಡಿದ್ದೆ : ಸಚಿವ ಶ್ರೀರಾಮುಲು ವಾಗ್ದಾಳಿ
ಟೇಬಲ್ ಟೆನ್ನಿಸ್ ಆಟಗಾರ್ತಿಯಾಗಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ನೈನಾ, ತಮ್ಮ ಅಗಾಧ ಬುದ್ಧಿಶಕ್ತಿಯಿಂದಲೂ ಖ್ಯಾತಿ ಪಡೆದಿದ್ದಾರೆ. ಏಕೆಂದರೆ, 8ನೇ ವಯಸ್ಸಿಗೆ ಹತ್ತನೇ ತರಗತಿ ಮುಗಿಸಿ, 13ನೇ ವಯಸ್ಸಿನಲ್ಲಿ ಪದವಿ, 15ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ ಮುಗಿಸಿದ ಈಕೆ ಏಷ್ಯಾದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಗೌರವಕ್ಕೆ ಪಾತ್ರಳಾಗಿದ್ದಾರೆ. ಮೋಟಿವೇಶನಲ್ ಸ್ಪೀಕರ್ ಆಗಿ ಮಿಂಚುತ್ತಿರುವ ನೈನಾ ಜೈಶ್ವಾಲ್ ಇತ್ತೀಚೆಗಷ್ಟೇ ತನ್ನ ತಾಯಿ ಭಾಗ್ಯಲಕ್ಷ್ಮಿಯೊಂದಿಗೆ ಎಲ್ಎಲ್ಬಿ ಸೇರಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
BIGG NEWS : ಪ್ರಿಯಾಂಕ್ ಖರ್ಗೆ ಸಂಸ್ಕಾರವಂತ ಅಂದುಕೊಂಡಿದ್ದೆ : ಸಚಿವ ಶ್ರೀರಾಮುಲು ವಾಗ್ದಾಳಿ