ನವದೆಹಲಿ : ದೇಶದ ಎಲ್ಲಾ ವಿಶ್ವವಿದ್ಯಾಲಯ, ಪದವಿ ಕಾಲೇಜುಗಳಲ್ಲಿ ಧ್ಯಾನ ನಡೆಸಲು UGC ( University Grant Commission) ಸೂಚನೆ ನೀಡಿದೆ.
ಹೌದು, ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಧ್ಯಾನ ನಡೆಸುವ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ದೇಶದಾದ್ಯಂತ ಧ್ಯಾನ ಮಾಡಿಸುವ ಮಹತ್ವದ ನಿರ್ಧಾರಕ್ಕೆ UGC ಮುಂದಾಗಿದೆ.
ದೇಶದ ಎಲ್ಲಾ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಲ್ಲಿ ಧ್ಯಾನ ನಡೆಸುವಂತೆ ಯುಜಿಸಿ ಎಲ್ಲಾ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು, ವಿದ್ಯಾಸಂಸ್ಥೆಗಳಿಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನೊಂದಿಗೆ “ಹರ್ ಘರ್ ಧ್ಯಾನ್” ಅಭಿಯಾನವನ್ನು ಪ್ರಾರಂಭಿಸಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನೆನಪಿನಲ್ಲಿ ಈ ಮಹತ್ವದ ನಿರ್ಧಾರವನ್ನ ಕೇಂದ್ರ ಸರ್ಕಾರ ಕೈಗೊಂಡಿದೆ. ಯುಜಿಸಿ ಕಾರ್ಯದರ್ಶಿ ಪ್ರೊ. ರಜನೀಶ್ ಜೈನ್ ವಿಶ್ವವಿದ್ಯಾಲಯಗಳು, ಎಲ್ಲಾ ವಿದ್ಯಾಸಂಸ್ಥೆಗಳಿಗೆ ಪತ್ರ ಬರೆಯವ ಮೂಲಕ ಎಲ್ಲಾ ವಿಶ್ವವಿದ್ಯಾಲಯ, ಪದವಿ ಕಾಲೇಜುಗಳಲ್ಲಿ ಧ್ಯಾನ ನಡೆಸಲು ಸೂಚನೆ ನೀಡಿದ್ದಾರೆ.
BIGG NEWS: ಭಾರತ್ ಜೋಡೊ ಯಾತ್ರೆ ವೇಳೆ ಇಂದೋರ್ ನಲ್ಲಿ ಸ್ಫೋಟದ ಬೆದರಿಕೆ ಪತ್ರ ಕಳುಹಿಸಿದ್ದ ವ್ಯಕ್ತಿ ಅರೆಸ್ಟ್