ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ಕನ್ನಡದ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಘೋಷಣೆಗೆ ಮುನ್ನವೇ ಮಾಹಿತಿ ಸೋರಿಕೆಯಾಗಿದೆ. ಸೋರಿಕೆಯಾದಂತ ಮಾಹಿತಿಯಂತೆ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತು ಗೆಲುವು ಸಾಧಿಸಿದ್ದಾರೆ.
ಹೌದು. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಗೆಲುವಿನ ವಿಚಾರ ಘೋಷಣೆಗೆ ಮುನ್ನವೇ ವೈರಲ್ ಆಗಿದೆ. ಇದಕ್ಕಾಗಿ ಕ್ರಿಯೆಟ್ ಆಗಿರುವಂತ ಪೇಜ್ ನಲ್ಲಿ ಮೊದಲ ದಿನದಿಂದ ಹಿಡಿದು, ಇಲ್ಲಿಯವರೆಗೆ ಯಾರು ಎಲಿಮಿನೇಟ್ ಆದರು, ಯಾರೆಲ್ಲ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ರು ಎನ್ನುವ ಮಾಹಿತಿಯನ್ನು ದಾಖಲಿಸಲಾಗಿದೆ.
ಇನ್ನೂ ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಗಳಲ್ಲಿ ವಿನ್ನರ್ ಯಾರು ಅಂತ ಘೋಷಿಸೋ ಕೆಲವೇ ಗಂಟೆಗಳ ಮೊದಲೇ ವಿಕಿಪೀಡಿಯಾದಲ್ಲಿ ವಿನ್ನರ್ ಯಾರು ಎನ್ನುವುದನ್ನು ಅಪ್ ಡೇಟ್ ಮಾಡಲಾಗಿದೆ. ಅದರ ಮಾಹಿತಿ ಅನುಸಾರ ಹನುಮಂತು ಅವರು ಬಿಗ್ ಬಾಸ್ ಕನ್ನಡ 11ರ ವಿನ್ನರ್ ಎನ್ನುವಂತ ಮಾಹಿತಿಯನ್ನು ಬರೆಯಲಾಗಿದೆ. ಜೊತೆಗೆ ಮೋಕ್ಷಿತಾ ರನ್ನರ್ ಅಪ್, ನಾಲ್ಕನೇ ರನ್ನರ್ ಅಪ್ ಮಂಜು ಎಂಬುದಾಗಿ ತಿಳಿಸಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಕೂಡ ನಡೆಯುತ್ತಿದೆ.
Tech Tips: ನೀರಿನಲ್ಲಿ ಬಿದ್ದು ಪೋನ್ ಒದ್ದೆಯಾದಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಹಾಳಾಗೋದು ಗ್ಯಾರೆಂಟಿ!