ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜನ್ಮಸ್ಥಳವಾಗಿದೆ. ಹೀಗಾಗಿ ಹನುಮನ ಭಕ್ತರು ಗಂಗಾವತಿ ನಗರದಿಂದ ನಡೆಯಲಿರುವ ಸಂಕೀರ್ತನಾ ಯಾತ್ರೆ ನಡೆಯಲಿದೆ.
BIGG NEWS : ರಾಜ್ಯ ಸರ್ಕಾರದಿಂದ ‘ಅಲೆಮಾರಿ’ ಸಮುದಾಯದ ಜನತೆಗೆ ಗುಡ್ ನ್ಯೂಸ್ : ಶೀಘ್ರವೇ 10 ಸಾವಿರ ಮನೆ ಹಂಚಿಕೆ
ನಾಳೆ ಹನುಮನ ಭಕ್ತರು ರಾಜ್ಯದ ಮೂಲೆ ಮೂಲೆ ಮೂಲೆಗಳಿಂದ ಹನುಮ ಮಾಲೆ ವಿರ್ಸಜನೆಗೆ ಬರುತ್ತಿದ್ದಾರೆ.ಇನ್ನು ಮಧ್ಯರಾತ್ತ್ರಿಯಿಂದಲೇ ಹನುಮನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ಕೆಲ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಬಾಗಲಕೋಟೆ, ಧಾರವಾಡ, ವಿಜಯಪುರ, ಬೆಳಗಾವಿ ಭಕ್ತರು ಸಾಗರೋಪದಿಯಲ್ಲಿ ಆಗಮಿಸುತ್ತಿದ್ದಾರೆ. ಜೈಶ್ರೀರಾಮ್, ಜೈ ಹನುಮಾನ್ ಘೋಷಣೆ ಕೇಳಿಬರುತ್ತಿದೆ.
BIGG NEWS : ರಾಜ್ಯ ಸರ್ಕಾರದಿಂದ ‘ಅಲೆಮಾರಿ’ ಸಮುದಾಯದ ಜನತೆಗೆ ಗುಡ್ ನ್ಯೂಸ್ : ಶೀಘ್ರವೇ 10 ಸಾವಿರ ಮನೆ ಹಂಚಿಕೆ
ಇತ್ತ, ಈ ನಡುವೆಯೇ ಗಂಗಾವತಿಯ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹನುಮ ಮಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿಸಿದ್ದಾರೆ. ಇದಕ್ಕೆ ಶ್ರೀರಾಮಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೆಲ್ಲಾ ಚುನಾವಣೆ ಗಿಮಿಕ್ ಅಂತ ಕಿಡಿಕಾರಿದ್ದಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಟ್ಟದ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ