ಮಂಡ್ಯ: ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯ ಧಾರ್ಮಿಕ ಪವಿತ್ರ ಆಚರಣೆಯ ಯಶಸ್ಸಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದ್ದು, ಈ ವೇಳೆ ಇತರೆ ಧರ್ಮಗಳ ಧಾರ್ಮಿಕ ಭಾವನೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹನುಮಮಾಲಾಧಾರಿಗಳ ಸಂರ್ಕಿತನಾ ಯಾತ್ರೆ ಹಿನ್ನಲೆ ಪೂರ್ವಭಾವಿಯಾಗಿ ಜಿಲ್ಲಾಡಳಿತದ ವತಿಯಿಂದ ಕರೆಯಲಾಗಿದ್ದ ಕೋಮುಸೌರ್ಹದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಧಾರ್ಮಿಕ ಆಚರಣೆಗಳನ್ನು ಶಾಂತಿಯುತವಾಗಿ ಆಚರಿಸಲು ಸಂಪೂರ್ಣ ಅನುಮತಿಯಿದ್ದು, ಸಮಾಜದಲ್ಲಿನ ಶಾಂತಿ-ಸುವ್ಯವಸ್ಥೆ ಧಕ್ಕೆ ತರುವಂತೆ ನಡೆದುಕೊಳ್ಳದಿರಿ. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಎರಡು ಘಟನೆಗಳು ಹೊರತುಪಡಿಸಿ ಇನ್ಯಾವುದು ನಡೆಯದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸಿದ್ದು, ಈ ಆಚರಣೆಯ ವೇಳೆ ಕಾನೂನಿನ ಹಲವು ಕ್ರಮಗಳನ್ನು ಸಮಾಜ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಧಾರ್ಮಿಕ ಆಚರಣೆ ಕಾರ್ಯಕ್ರಮ ಆಯೋಜಕರು ಹಾಗೂ ಆಚರಣೆಯಲ್ಲಿ ಭಾಗಿಯಾಗುವವರು ಕಾನೂನು ಉಲ್ಲಂಘಿಸಿದಂತೆ ಜಾಗೃತಿ ಮೂಡಿಸುವುದು ಹಾಗೂ ವಹಿಸುವುದು ನಿಮ್ಮ ಜವಾಬ್ದಾರಿಯೂ ಒಳಗೊಂಡಿದ್ದು, ಎಲ್ಲರ ಸಹಕಾರ ಜಿಲ್ಲಾಡಳಿತ ಜೊತೆಗೆ ಇರಲಿ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ನೂರಕ್ಕು ಹೆಚ್ಚು ಸಿಸಿ ಟಿವಿಗಳ ಅಳವಡಿಕೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಕಣ್ಗಾವಲು ಇರಿಸಲಾಗುತ್ತದೆ. ಕೋಮುಗಳ ನಡುವೆ ಉದ್ರೇಕಗೊಳಿಸುವಂತಹ ಯಾವುದೇ ಕೃತ್ಯಗಳು ಕಂಡುಬಂದಲ್ಲಿ ಭಿಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಶಾಂತಮಲ್ಲಪ್ಪ,ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಹಿಂದೂ ಮತ್ತು ಮುಸ್ಲೀಂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಹೊಸ ಕಾರ್ಮಿಕ ಕಾನೂನುಗಳು 77 ಲಕ್ಷ ಉದ್ಯೋಗ ಸೃಷ್ಟಿ, ನಿರುದ್ಯೋಗ ಕಡಿಮೆ ಮಾಡಲಿದೆ: ವರದಿ | New Labour laws
ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ನಿಯಂತ್ರಣ








