ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧಿಸಿ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ʻ ಕಾರಿಗೆ ಬೆಂಕಿ ಹಚ್ಚಿದ 11 ಮಂದಿಯ ಅರೆಸ್ಟ್ ಮಾಡಲಾಗಿದೆ.
ಯೂತ್ಸ್ ಕಾಂಗ್ರೆಸ್ ನಾಯಕರೇ ತಮ್ಮ ಹಳೆಕಾರನ್ನು ತಂದು ರಸ್ತೆಯಲ್ಲಿ ನಿಲ್ಲಿಸಿ, ಬೆಂಕಿ ಹಚ್ಚಿ ಪ್ರತಿಭಟನೆ ತೀವ್ರಗೊಳಿಸಲು ಈ ಕೃತ್ಯ ಮಾಡಿದ್ದಾರೆ. ಯೂತ್ಸ್ ಕಾಂಗ್ರೆಸ್ ಕಾರು ನಿಲ್ಲಿಸಿದ ಬಳಿಕ ಅವ್ರು ಹೋಂಡಾ ಬೈಕ್ನಲ್ಲಿ ತೆರಳಿರುವುದು ಇದೀಗ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಪ್ರತಾಪ್ ರೆಡ್ಡಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ದುಷ್ಕೃತ್ಯ ವೆಸಗಿದ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾಗ ಯೂತ್ಸ್ ಕಾಂಗ್ರೆಸ್ ನಾಯಕರೇ ಮಾಡಿದ್ದಾರೆಂಬ ಮಾಹಿತಿ ಬೆಳಕಿಗೆ ಬಂದಿದೆ.
ಕಾರಿನ ನಂಬರ್ ತೆಗೆದುಕೊಂಡು ಯಾರ ಯಾರೆಂದು ವಿಚಾರಣೆ ಮಾಡಲಾಗುತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಕಾರಿಗೆ ಬೆಂಕಿ ಬಗ್ಗೆ ಈಗಾಗಲೇ ವಿಲ್ಸನ್ ಗಾರ್ಡ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಲಾಗುತ್ತಿದೆ.