Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವಾಗಲೂ ಸುಸ್ತಾಗುತ್ತಿದೆಯೇ? ‘ಸದಾ ಆಯಾಸ’ಕ್ಕೆ ಈ 7 ಪ್ರಮುಖ ಕಾರಣಗಳಿರಬಹುದು; ನಿರ್ಲಕ್ಷಿಸಬೇಡಿ!

06/04/2026 8:10 PM

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

06/04/2026 8:10 PM

ಮೆಟಾ ಸಂಸ್ಥೆಯಲ್ಲಿ ಮತ್ತೆ ಉದ್ಯೋಗ ಕಡಿತ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 200 ನೌಕರರ ವಜಾ | Mata Layoff

06/04/2026 8:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ
KARNATAKA

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

By kannadanewsnow0906/04/2026 8:10 PM

ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ ಅವರು ಹೊಸ ಸಮಿತಿಯ ಅಧ್ಯಕ್ಷರಾದಂತ ಪವಿತ್ರಾ ನಾಗರಾಜ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದೆ.

ಇಂದು ಸಾಗರದ ಮಾರಿಕಾಂಬ ದೇವಸ್ಥಾನದಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರದ ಕಾರ್ಯಕ್ರಮ ನಡೆಯಿತು. ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ್ ಜೊತೆಗೂಡಿ ನೂತನ ಸಮಿತಿಯ ಅಧ್ಯಕ್ಷ ಪವಿತ್ರಾ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್ ಅವರಿಗೆ ಸಮಿತಿಯ ಲೆಕ್ಕದ ಪುಸ್ತಕಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ನೂತನ ಸಮಿತಿಯ ಅಧ್ಯಕ್ಷರಿಗೆ ಮಾಜಿ ಪ್ರಧಾನ ಕಾರ್ಯದರ್ಶಿ ಗಿರಿಧರ ಭಟ್ ಅವರು ಲೆಕ್ಕ ಪತ್ರ, ಮಾರಿಕಾಂಬೆಗೆ ಬಂದಂತ ಬಂಗಾರ, ಬೆಳ್ಳಿಯ ವಸ್ತುಗಳು ಸೇರಿದಂತೆ ಹಣಕಾಸಿನ ಮಾಹಿತಿಯನ್ನು ಸಭೆಯಲ್ಲಿಯೇ ಸಮಿತಿಯ ಎಲ್ಲರ ಮುಂದೆ ಮಾಹಿತಿ ನೀಡಿದರು. ಜೊತೆಗೆ ಮಾರಿಕಾಂಬ ದೇವಿಯ ಲೆಕ್ಕ ಪತ್ರವನ್ನು ಆಡಿಟ್ ಮಾಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಮೇ, ಜೂನ್ ಒಳಗಾಗಿ ಮಾರಿಕಾಂಬ ಸಮಿತಿಯ ಲೆಕ್ಕ ಪತ್ರದ ಆಡಿಟ್ ವಿವರವನ್ನು ನೀಡಲಾಗುತ್ತದೆ. ಜೂನ್ ನಲ್ಲಿ ಜನರಲ್ ಬಾಡಿ ಮೀಟಿಂಗ್ ಕರೆದು ದೇವಸ್ಥಾನದ ಇತರೆ ವಿಚಾರವನ್ನು ಚರ್ಚಿಸಬಹುದಾಗಿ ಎನ್ನುವ ತೀರ್ಮಾನಕ್ಕೆ ಬರಲಾಯಿತು.

ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಲ್ಲಿ ಸೇವೆ ಸಲ್ಲಿಸಿದ ಹಿಂದಿನ ಆಡಳಿತ ಮಂಡಳಿ ಸದಸ್ಯರಿಗೆ ಬೀಳ್ಕೊಡುಗೆ ವಿಚಾರವಾಗಿ ಸುಂದರ್ ಸಿಂಗ್ ಅವರು ಆಕ್ಷೇಪ ವ್ಯಕ್ತ ಪಡಿಸಿದರು. ಅಲ್ಲದೇ ಮಾರಿ ತಾಯಿಯ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಬೀಳ್ಕೊಡುಗೆ ಎಂಬುದು ಸರಿಯಲ್ಲ. ಅವರಿಗೆ ಗೌರವಯುತ ಧನ್ಯವಾದ ಸಲ್ಲಿಸುವಂತೆ ಕೋರಿದರು. ಈ ವೇಳೆ ಅಧ್ಯಕ್ಷ ಎಂ.ನಾಗರಾಜ ಅವರು ಅದನ್ನು ತಿದ್ದಿಕೊಳ್ಳುವುದಾಗಿ ಸ್ಪಷ್ಟ ಪಡಿಸಿದಿರು.

ನೂತನ ಅಧ್ಯಕ್ಷರಾದಂತ ಪವಿತ್ರಾ ನಾಗರಾಜ್ ಮಾತನಾಡಿ, ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಗೆ ಒಟ್ಟಾಗಿ ಜೊತೆಗೂಡಿ ಮುನ್ನಡೆಯೋಣ. ಹೊಸ ಸಮಿತಿಗೆ ಹಳೆಯ ಸಮಿತಿಯಿಂದ ಸಹಕಾರ ಸದಾ ಇರಲಿ. ಇಲ್ಲಿ ಹೊಸ ಸಮಿತಿ, ಹಳೆ ಸಮಿತಿ ಎನ್ನುವುದಕ್ಕಿಂತ ಅನುಭವ ಮುಖ್ಯವಾಗಿದೆ. ಎಲ್ಲ ಸದಸ್ಯರ ಸಹಕಾರದೊಂದಿಗೆ ಮುನ್ನಡೆಯೋಣ ಎಂದರು.

ಇಂದಿನ ಅಧಿಕಾರ ಹಸ್ತಾಂತರದ ಸಭೆಯಲ್ಲಿ ಹಲವರು ಹಲವು ರೀತಿಯ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅನ್ನ ಸಂತರ್ಪಣೆ, ದೇವರ ಪೂಜಾ ವಿಧಿ ವಿಧಾನಗಳಲ್ಲಿ ಬದಲಾವಣೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಭಕ್ತಾಧಿಗಳ ಸಹಕಾರದೊಂದಿಗೆ ಅನ್ನ ಸಂತರ್ಪಣೆ ಆರಂಭದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ಸಭೆಯಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕುಮಟ, ಹಿರಿಯ ಮುಖಂಡ ಪಾಂಡುರಂಗ ಟಿ.ವಿ, ಖಜಾಂಚಿ ವಿ.ಶಂಕರ್, ಉಪಾಧ್ಯಕ್ಷ ಶ್ರೀನಿವಾಸ ಮೇಸ್ತ್ರಿ, ಸಹ ಕಾರ್ಯದರ್ಶಿಗಳಾದಂತ ಪರುಷೋತ್ತಮ(ಪುಚ್ಚಿ), ಡಿಶ್ ಗುರು, ಲಲಿತಮ್ಮ ಸೇರಿದಂತೆ ಇತರರೆ ಸದಸ್ಯರು ಹಾಜರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದಲ್ಲಿ PUCವರೆಗೆ ಗಂಡು ಮಕ್ಕಳಿಗೆ ಉಚಿತ ಪ್ರಯಾಣದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ: KSRTC ಸ್ಪಷ್ಟನೆ

06/04/2026 7:49 PM1 Min Read

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

06/04/2026 7:23 PM2 Mins Read

BIG BREAKING: ವಾಹನ ಸವಾರರಿಗೆ ಶಾಕ್: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಳ

06/04/2026 7:15 PM1 Min Read
Recent News

ಯಾವಾಗಲೂ ಸುಸ್ತಾಗುತ್ತಿದೆಯೇ? ‘ಸದಾ ಆಯಾಸ’ಕ್ಕೆ ಈ 7 ಪ್ರಮುಖ ಕಾರಣಗಳಿರಬಹುದು; ನಿರ್ಲಕ್ಷಿಸಬೇಡಿ!

06/04/2026 8:10 PM

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

06/04/2026 8:10 PM

ಮೆಟಾ ಸಂಸ್ಥೆಯಲ್ಲಿ ಮತ್ತೆ ಉದ್ಯೋಗ ಕಡಿತ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 200 ನೌಕರರ ವಜಾ | Mata Layoff

06/04/2026 8:00 PM

ಪಶ್ಚಿಮ ಏಷ್ಯಾ ಸಂಘರ್ಷ: ಅಪಾಯಕಾರಿ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎರಡು ಎಲ್‌ಪಿಜಿ ನೌಕೆಗಳು ಸುರಕ್ಷಿತ!

06/04/2026 7:50 PM
State News
KARNATAKA

ಸಾಗರದ ಮಾರಿಗುಡಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ: ಅಧ್ಯಕ್ಷ ನಾಗರಾಜ್, ಪ್ರಧಾನಕಾರ್ಯದರ್ಶಿ ಆನಂದ್ ಸ್ವೀಕಾರ

By kannadanewsnow0906/04/2026 8:10 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್…

BIG NEWS: ರಾಜ್ಯದಲ್ಲಿ PUCವರೆಗೆ ಗಂಡು ಮಕ್ಕಳಿಗೆ ಉಚಿತ ಪ್ರಯಾಣದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ: KSRTC ಸ್ಪಷ್ಟನೆ

06/04/2026 7:49 PM

ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

06/04/2026 7:23 PM

BIG BREAKING: ವಾಹನ ಸವಾರರಿಗೆ ಶಾಕ್: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಳ

06/04/2026 7:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.