ಹಾವೇರಿ : ಜಿಲ್ಲೆಯ ಹಾನಗಲ್ ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಗೆ ಇಂದು ರಾಜ್ಯ ಬಿಜೆಪಿ ನಿಯೋಗವು ಸಂತ್ರಸ್ತೇಯನ್ನು ಭೇಟಿಯಾಗಲಿದೆ ಎಂದು ತಿಳಿದುಬಂದಿದೆ.
ಹಾವೇರಿ ಜಿಲ್ಹಾ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬಿಜೆಪಿ ನಿಯೋಗವು ಸಂತ್ರಸ್ತೆಯನ್ನು ಭೇಟಿಯಾಗಲಿದೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಕೆ. ಮಂಜುಳಾ, ಭಾರತೀ ಶೆಟ್ಟಿ ಹಾಗೂ ಮಾಳವಿಕಾ ನಿಯೋಗ ಭೇಟಿಯಾಗಲಿದೆ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಸಹ ಈ ವೇಳೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಹಾವೇರಿಯ ಹಾನಗಲ್ ತಾಲೂಕಿನಲ್ಲಿ ಅಲ್ಪಸಂಖ್ಯಾತ ಮಹಿಳೆಯ ಮೇಲೆ ದುಷ್ಕರ್ಮಿಗಳು ಕಾಡಿನಲ್ಲಿ ಎಳೆದೊಯ್ದು ನಿರಂತರ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು 3 ಆರೋಪಿಗಳನ್ನು ಬದಲಿಸಿದ್ದು ಉಳಿದವರಿಗಾಗಿ ಬಲೇ ಬೀಸಿದ್ದಾರೆ.
ಈ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ರಜ ಬಿಜೆಪಿ ನಿಯೋಗವು ಎಂದು ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದೆ. ಇದೆ ಸಂದರ್ಭದಲ್ಲಿ ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಸಂತ್ರಸ್ತತೆಯನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.