ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಈ ಪ್ರಕರಣವನ್ನು ಪೊಲೀಸರು ಮುಖ್ಯ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯುವತಿಯನ್ನು ಥಳಿಸಿ ಯುವಕರು ಗ್ಯಾಂಗ್ ರೇಪ್ ಮಾಡಿದ್ದಾರೆ. ಪೊಲೀಸರು ಪ್ರಕರಣ ಮುಚ್ಚುಡುವ ಪ್ರಯತ್ನ ಮಾಡುತ್ತಿದ್ದಾರೆ.ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪಿಸಿದರು. ನಾನು ಕರೆ ಮಾಡಿ ಕೇಳಿದರೂ ಕೂಡ ಮೊಂಡುವಾದ ಮಾಡುತ್ತಾರೆ. ನನ್ನ ಜೊತೆಗೆ ಪೊಲೀಸರು ಮೊಂಡುವದ ಮಾಡಿದರು ಎಂದು ಆರೋಪಿಸಿದರು.
ಗ್ಯಾಂಗ್ ರೇಪ್ ಆದರು ಎಫ್ಐಆರ್ ದಾಖಲು ಮಾಡಿಲ್ಲ ಬೇರೆ ಕೋಮಿನವರು ಆಗಿದ್ರೆ ಒಳಗೆ ಹಾಕಿ ವಿಚಾರಣೆ ನಡೆಸುತ್ತಿದ್ದರು.ಮೊದಲು ಒಳಗೆ ಹಾಕಿ ನಂತರ ವಿಚಾರಣೆ ಮಾಡುತ್ತಿದ್ದರು ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆಗಿದೆ ಅಲ್ಪಸಂಖ್ಯಾತರ ರಕ್ಷಕರೆಂದು ಬಿಂಬಿಸುವವರು ರಕ್ಷಿಸಿಲ್ಲ ನಿಮ್ಮ ಕೆಲಸ ಮಾಡುವವರಿಗೆ ಮಾತ್ರ ನಿಮ್ಮ ರಕ್ಷಣೆ ಇದೆಯಾ ಯಾವುದೇ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಹೆಣ್ಣು ಮಕ್ಕಳು ಧೈರ್ಯವಾಗಿ ಓಡಾಡುವ ವಾತಾವರಣ ಇಲ್ಲ ಆದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬೆಂಗಳೂರಿನಲ್ಲಿ ಅಪರಾಧಗಳ ಸಂಖ್ಯೆ ಕೇಸ್ ಜಾಸ್ತಿ ಆಗುತ್ತಿವೆ .ಹಲವು ಕೇಸುಗಳನ್ನು ಮುಚ್ಚಿಹಾಕುವ ಕೆಲಸ ಆಗುತ್ತಿದೆ. ಪುಡಿ ರೌಡಿಗಳು ಮತ್ತೆ ಇಸ್ಪೀಟ್ ಕ್ಲಬ್ ಆರಂಭಿಸಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ ಠಾಣೆಗಳು ಕಲೆಕ್ಷನ್ ಅಡ್ಡ ಆಗಿವೆ ಎಂದು ಸರ್ಕಾರದ ವಿರುದ್ಧ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.