ಹಾವೇರಿ : ಹಾನಗಲ್ ತಾಲೂಕಿನಲ್ಲಿ ಮಹಿಳೆ ಮೇಲೆ ನಡೆದ ಕೃತ್ಯ ಖಂಡನೀಯವಾಗಿದ್ದು, ನಾನೂ ತೀವ್ರವಾಗಿ ಖಂಡಿಸುತ್ತೇನೆ. ಪ್ರಕರಣ ದಲ್ಲಿ ಭಾಗಿಯಾದ ಐವರು ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳ ಪತ್ತೆ ಮುಂದುವರಿದಿದೆ. ಪ್ರಕರಣದಲ್ಲಿ ಯಾವುದೇ ಆರೋಪಿ ಪಾರಾಗಲು ಅವಕಾಶ ನೀಡುವುದಿಲ್ಲ, ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಘಟನೆ ನಡೆದ ದಿನವೇ ದೂರು ದಾಖಲಾಗಿದ್ದರೆ ಆರೋಪಿಗಳನ್ನು ಇನ್ನೂ ಬೇಗ ಬಂಧಿಸಲು ಸಾಧ್ಯವಿತ್ತು. ಕೆಲವರು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿ ರಲಿಲ್ಲ. ಸಂಪೂರ್ಣ ಮಾಹಿತಿ ಪಡೆಯಲಾಗಿದ್ದು, ಸೂಕ್ತ ತನಿಖೆಗೆ ನಿರ್ದೇಶನ ನೀಡಿದ್ದೇನೆ. ಜ.11ರಂದು ಹಾನಗಲ್ ತಾಲೂಕು ಅಕ್ಕಿಆಲೂರಿನ ಅಪ್ತಾಬ್ (24), ಮದರಸಾಬ್ (23) ಮತ್ತು ಹಾನಗಲ್ ತಾಲೂಕು ಹೀರೂರು ಗ್ರಾಮದ ಆಟೊ ಚಾಲಕ ಅಬ್ದುಲ್ ಖಾದರ್ (28) ಅವರನ್ನು ಬಂಧಿಸಲಾಗಿದೆ.
ಮತ್ತೊಬ್ಬ ಆರೋಪಿ ಅಕ್ಕಿಆಲೂರಿನ ಮಹ್ಮದ್ ಸೈಫ್ ಸಾವಿಕೇರಿ ಜ.9ರಂದು ಸ್ವಯಂ ಅಪಘಾತದಲ್ಲಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿ ಯಾಗಿ ದಾಖಲಾಗಿದ್ದು, ಚಿಕಿತ್ಸೆಮುಗಿದ ನಂತರ ಬಂಧಿಸಲಾಗು £. 3.140 d (19), ಇಮ್ರಾನ್ (23) ಎಂಬ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ, ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದಾಖಲು ಮಾಡಿರುವ ದೂರು ಹಾಗೂ ಜ.11 ರಂದು ನ್ಯಾಯಾಧೀಶರ ಎದುರು ನೀಡಿರುವ ಹೇಳಿಕೆ ಬಗ್ಗೆ ನಿಷ್ಪಕ್ಷಪಾತ ಹಾಗೂ ಕೂಲಂಕಷ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಘಟನೆ ಬಗ್ಗೆ ಕೆಲವು ಮುಖಂಡರು ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ. ವಿಷಯ ಸೂಕ್ಷ್ಮವಾಗಿರುವುದರಿಂದ ಹಾಗೂ ಮಾನವೀಯ ದೃಷ್ಟಿಯಿಂದ ಈ ಪ್ರಕರಣದಲ್ಲಿ ರಾಜಕೀಯ ಬೆರೆಸಬಾರದು. ಸಂತ್ರಸ್ತೆಗೆ ನ್ಯಾಯ ಕೊಡಿಸಲು ಬದ್ಧವಾಗಿದ್ದು, ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದೇನೆ,ಎಂದು ತಿಳಿಸಿದ್ದಾರೆ.