ಹಾವೇರಿ : ಹಾನಗಲ್ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಇಂದು ಹಾವೇರಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. ಇಂದು ಮಧ್ಯಾಹ್ನ ಬಿಜೆಪಿ ಕಚೇರಿಯಿಂದ ಎಸ್ಪಿ ಕಚೇರಿಯ ವರೆಗೆ ಪ್ರತಿಭಟನೆ ರ್ಯಾಲಿ ನಡೆಸಲಿದ್ದು, ನಂತರ ಕಛೇರಿ ಮುಂದೆ ಬಿಜೆಪಿ ಪ್ರತಿಭಟನೆಗೆ ನಿರ್ಧರಿಸಿದೆ.
ಬಸವರಾಜ್ ಬೊಮ್ಮಾಯಿ ಆರ್ ಅಶೋಕ್ ಪ್ರತಿಭಟನೆಯ ನೇತೃತ್ವವನ್ನು ವಹಿಸಲಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಬಸವರಾಜ ಬೊಮ್ಮಾಯಿ ಕಳೆದ ಎರಡು ದಿನಗಳ ಹಿಂದೆ ಸುದ್ದಿಗೋಷ್ಟಿಯಲಿ ಮಾತನಾಡಿ, ಕಾನೂನು ಸುವ್ಯವಸ್ಥೆಯಲ್ಲಿ ರಾಜಕಾರಣ ಮಧ್ಯ ಪ್ರವೇಶ ಮಾಡುತ್ತಿದೆ. ಪೋಕ್ಸೋ ಕಾಯ್ದೆ ಉಲ್ಲಂಘನೆ ಮಾಡಿದ್ದಲ್ಲದೆ ಸಂತ್ರಸ್ತೆಗೆ ಆಮಿಷ ಕೂಡ ಒಡ್ಡಲಾಗಿದೆ.ಸ್ಥಳೀಯ ಪೊಲೀಸರು ಮತ್ತು ಹಾಕುವಂತಹ ಎಲ್ಲಾ ಸಾಕ್ಷಿಗಳಿವೆ ಎಸ್ಐಟಿ ತನಿಖೆಗೆ ಸಿಎಂ ನಿರಾಕರಿಸಿ ಪ್ರೋತ್ಸಾಹ ಮಾಡಿದಂತೆ ಮಾಡಿದ್ದಾರೆ.ಹಾಗಾಗಿ ಜ.20 ರಂದು ಹಾವೇರಿ ಎಸ್ ಪಿ ಕಚೇರಿ ಮುಂದೆ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಠಾಣೆಯ ಪೊಲೀಸರು ಇದುವರೆಗೂ 10 ಆರೋಪಿಗಳನ್ನು ಬಂಧಿಸಿದ್ದು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಮಹಿಳೆಯರನ್ನು ಹಾವೇರಿಯ ಮಹಿಳಾ ಶಾಂತನ ಕೇಂದ್ರ ದಲ್ಲಿ ಇರಿಸಲಾಗಿದ್ದು ಸೂಕ್ತವಾದಂತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ ಇತ್ತೀಚಿಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಕೂಡ ಪ್ರಕರಣ ಕುರಿತಂತೆ ವರದಿಯನ್ನು ಸಲ್ಲಿಸಲಾಗಿದೆ.