ಬೆಂಗಳೂರು: ಕೇಂದ್ರ ಪ್ರವಾಸೋದ್ಯಮ ಸಚಿವಲಾಯದ ಸ್ವದೇಶ್ ದರ್ಶನ್ 2.0 ಯೋಜನೆಯ ಅಡಿಯಲ್ಲಿ ಅಭಿವೃದ್ಧಿಗೊಳಿಸೋದಕ್ಕೆ ಕರ್ನಾಟಕ ಹಂಪಿ ಮತ್ತು ಮೈಸೂರು ಆಯ್ಕೆಯಾಗಿದೆ. ಈ ಮೂಲಕ ಕೇಂದ್ರ ಯೋಜನೆಯ ಅಡಿಯಲ್ಲಿ, ಈ ಎರಡು ಸ್ಥಳಗಳನ್ನು ಮತ್ತಷ್ಟು ಪ್ರವಾಸೋದ್ಯಮ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.
ಈ ಬಗ್ಗೆ ಟ್ವಿಟ್ ನಲ್ಲಿ ಮಾಹಿತಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಂಚಿಕೊಂಡಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2014-15ರಲ್ಲಿ ಆರಂಭಿಸಿರುವ ಸ್ವದೇಶ್ ದರ್ಶನ್ 2.0 ಯೋಜನೆಗೆ ಹಂಪಿ ಮತ್ತು ಮೈಸೂರು ಆಯ್ಕೆಯಾಗಿರೋದಾಗಿ ತಿಳಿಸಿದ್ದಾರೆ.
ರಾಜ್ಯದ ಈ ಸ್ಥಳಗಳಲ್ಲಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಉತ್ತೇಜಿಸಲು, ಅಭಿವೃದ್ಧಿಪಡಿಸೋದು, ವಿಷಯಾಧಾರಿತ ಪ್ರವಾಸಿ ಸರ್ಕ್ಯೂಟ್ ಗಳ ಸಮಗ್ರ ಅಭಿವೃದ್ಧಿಯನ್ನು ಕೇಂದ್ರ ವಲಯದ ಯೋಜನೆಯಾದ ಸ್ವದೇಶ್ ದರ್ಶನ್ 2.0 ಕೈಗೊಳ್ಳಲಾಗುತ್ತದೆ. ಹೀಗೆ ಸೇರ್ಪಡೆಗೊಂಡಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ.
A moment of pride for Karnataka as Hampi & Mysuru are enlisted in the Swadesh Darshan 2.0 Scheme,a Central Sector scheme launched in 2014-15 by Ministry of Tourism & Culture to promote,develop & harness potential of tourism &integrated development of theme-based tourist circuits. pic.twitter.com/OriFKsBaeE
— Basavaraj S Bommai (@BSBommai) January 5, 2023
BIGG NEWS: ‘ಅನಿಶ್ಚಿತ ಆರ್ಥಿಕತೆ’ : 18 ಸಾವಿರಕ್ಕೂ ಹೆಚ್ಚು ಉದ್ಯೋಗ ಕಡಿತಕ್ಕೆ ಅಮೆಜಾನ್ ನಿರ್ಧಾರ | Amazon Layoff
Good News : ದೇಶದ ರೈತರಿಗೆ ಭರ್ಜರಿ ನ್ಯೂಸ್ ; ‘Pm Kisan’ ಹಣ ದ್ವಿಗುಣ, ಅನ್ನದಾತರ ಆದಾಯ ದುಪ್ಪಟ್ಟು
ಸಿಎಂ ಬೊಮ್ಮಾಯಿಯವರೇ ವಿಧಾನಸೌಧದಲ್ಲಿ ಸಿಕ್ಕ ಹಣ ಯಾವುದು? ಉತ್ತರಿಸಿ: ಟ್ವಿಟ್ ನಲ್ಲಿ ಕಾಂಗ್ರೆಸ್ ಪ್ರಶ್ನೆ