ಶಿವಮೊಗ್ಗ : ದೇಶದೆಲ್ಲೆಡೆ ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಇದೀಗ ಹಿಂದೂ ಸಂಘಟನೆಗಳಿಂದ ಇದೀಗ ಮತ್ತೆ ಹಲಾಲ್ ದಂಗಲ್ ಶುರುವಾಗಿದೆ. ದೀಪಾವಳಿ ಹಬ್ಬಕ್ಕೆ ಹಲಾಲ್ ಮುಕ್ತಾ ಆಚರಣೆ ನಡೆಸಲು ಅಭಿಯಾನ ಕೈಗೊಂಡಿದೆ ಈ ವಿಚಾರವಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಹಲಾಲ್ ಕಟ್ಟೋ…ಹಲ್ ಕಟ್ಟೋ ಗೊತ್ತಿಲ್ಲ . ನಾನಂತೂ ಜೀವನದಲ್ಲಿ ಹಲಾಲ್ ಕಟ್ ಮಾಂಸ ತಿಂದಿಲ್ಲ. ಹಲಾಲ್ ಕಟ್ ಮಾಂಸನ ನ್ಯಾವ್ಯಾಕೆ ಎಡೆ ಇಡೋಣ. ಹಲಾಲ್ ಕಟ್ ಹಣವನ್ನ ದೇಶದ್ರೋಹಿ ಚಟುವಟಿಕೆಗೆ ಬಳಸ್ತಿದ್ದಾರೆ.ಈ ಬಗ್ಗೆ ಹಿಂದೂ ಸಮಾಜ ದಿನೇ ದಿನೇ ಜಾಗೃತಿ ಆಗ್ತಿದೆ ಎಂದು ಶಿವಮೊಗ್ಗ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಹಲಾಲ್ ಮುಕ್ತಾ ದೀಪಾವಳಿ ಹಬ್ಬ ಆಚರಣೆ ಹಿಂದೂಗಳು ಮಾಂಸದ ಜತೆ ಬೇರೆ ವಸ್ತುಗಳ ಖರೀದಿಸಲು ಹಿಂದೂಗಳ ಬಳಿಯೇ ತೆರಳಿ ಎಂದು ಶ್ರೀರಾಮಸೇನೆ ಮುಖ್ಯಸ್ಥರ ಪ್ರಮೋದ್ ಮುತಾಲಿಕ್ ಕೂಡ ಒತ್ತಾಯ ಮಾಡಿದ್ದಾರೆ.