ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾದ ಸಮಸ್ಯೆಯಾಗಿದೆ. ಹವಮಾನ, ಜೀವನ ಶೈಲಿ, ಒತ್ತಡ ಇದಕ್ಕೆ ಕಾರಣ. ಇನ್ನೂ ಇ ಸಮಸ್ಯೆಯಿಂದ ನಿವಾರಣೆ ಕೆಲ ಜನರು ಸಾಕಷ್ಟು ಹಣವನ್ನು ವ್ಯಯ ಮಾಡುತ್ತಾರೆ. ಆದರೆ ಮನೆಯಲ್ಲಿಯೇ ಸಿಗುವಂತಹ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಇದನ್ನು ನಿವಾರಿಸಬಹುದಾಗಿದೆ.
ಬೀಟ್ರೂಟ್ ಜ್ಯೂಸ್
ಕೂದಲು ಉದುರುವಿಕೆಗೆ ಕಾರಣವಾಗುವ ಪೌಷ್ಟಿಕಾಂಶ ಕೊರತೆ ನಿವಾರಿಸಲು ಬೀಟ್ರೂಟ್ ಜ್ಯೂಸ್ ಸಹಾಯ ಮಾಡುತ್ತದೆ. ಬೀಟ್ರೂಟ್ನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಇದೆ. ಈ ಅಂಶಗಳು ಒಟ್ಟಾಗಿ ಬೇರುಗಳಿಂದ ಕೂದಲು ಸ್ಟ್ರಾಂಗ್ ಮಾಡುತ್ತವೆ. ಇದರ ಜೊತೆ ನೆತ್ತಿಯು ಆರೋಗ್ಯವಾಗಿರುತ್ತದೆ. ಕೂದಲಿನ ಗುಣಮಟ್ಟವು ಸುಧಾರಣೆ ಮಾಡುತ್ತದೆ.
ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈ ಟೀ ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇದು ಕೋಶಕಗಳನ್ನು ಪುನರುಜ್ಜೀವನಗೊಳಿಸುವಾಗ ಗ್ರೀನ್ ಟೀ ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ಪ್ರತಿದಿನ ಒಂದು ಕಪ್ ಗ್ರೀನ್ ಚಹಾವು ಕೂದಲು ಆರೋಗ್ಯಕರ ರೀತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ
ಕೂದಲು ಉದುರುವಿಕೆಗೆ ಪ್ರಮುಖ ಕಾರಣ ವಿಟಮಿನ್ ಸಿ ಕೊರತೆ. ಈ ವಿಟಮಿನ್ ಆಮ್ಲಾದಲ್ಲಿ ಹೇರಳವಾಗಿ ಕಂಡು ಬರುತ್ತದೆ. ಆಮ್ಲಾ ತಿನ್ನುವುದರೊಂದಿಗೆ ಮತ್ತು ಅದರ ರಸವನ್ನು ಕುಡಿಯುವುದು ನೇರವಾಗಿ ನೆತ್ತಿಯ ಮೇಲೆ ಅನ್ವಯಿಸಬಹುದು. ಇದು ಕೂದಲಿಗೆ ಟಾನಿಕ್ಗಿಂತ ಕಡಿಮೆಯಿಲ್ಲ.
ಬೇವಿನ ಎಲೆಗಳು
ಬೇವು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿ. ಕೂದಲು ಉದುರುವುದನ್ನು ತಡೆಯಲು ಇದನ್ನು ಮಾಸ್ಕ್ ಆಗಿ ಬಳಸಬಹುದು. ಬೇವಿನ ಎಲೆಗಳನ್ನು ಕುದಿಸಿ ನಂತರ ಅವುಗಳನ್ನು ಪೇಸ್ಟ್ ಮಾಡಿ. ಶಾಂಪೂ ಮಾಡಿದ ನಂತರ ಪೇಸ್ಟ್ ಅನ್ನು ಅನ್ವಯಿಸಿ. 30 ನಿಮಿಷಗಳ ನಂತರ ಕೂದಲು ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಬಳಸಿ.
ಕ್ಯಾರೆಟ್
ನೀವು ಉದ್ದ ಮತ್ತು ಬಲವಾದ ಕೂದಲಿಗಾಗಿ ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸಿ. ವಿಟಮಿನ್-ಎ ಸಮೃದ್ಧವಾಗಿರುವ ಈ ತರಕಾರಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ವಿಟಮಿನ್ ಕೊರತೆಯು ಕೂದಲು ಉದುರುವಿಕೆ ಹೆಚ್ಚಿಸುತ್ತದೆ. ಇದು ಒಣ ಮತ್ತು ತುರಿಕೆ ನೆತ್ತಿಯ ಸಮಸ್ಯೆ ಹೋಗಲಾಡಿಸಿ ಕೂದಲು ಉದುರುವಿಕೆ ನಿಯಂತ್ರಿಸುತ್ತದೆ.