ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ, ವಿವಾಹೇತರ ಸಂಬಂಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದರಿಂದ ಅದೆಷ್ಟೋ ಸಂಸಾರಗಳು ಹಾಳಾಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ ಮೂರು ಪ್ರತ್ಯೇಕ ಘಟನೆಗಳು ನಡೆದಿದ್ದು, ಮದುವೆಯಾದ ಮಹಿಳೆಯರು ಗಂಡ ಮಕ್ಕಳನ್ನು ಬಿಟ್ಟು ತಮ್ಮ ಪ್ರಿಯಕರನ ಜೊತೆಗೆ ಪರಾರಿಯಾಗಿರುವ ಘಟನೆಗಳು ವರದಿಯಾಗಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ .
ಹೌದು ಬೆಂಗಳೂರಲ್ಲಿ ಜಿಮ್ ಟ್ರೇನರ್ ಪತ್ನಿ ಸ್ನೇಹಿತನ ಜೊತೆಗೆ ಪರಾರಿಯಾಗಿದ್ದು ಇದೀಗ ಪತಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾನೆ. ನನಗೆ ನ್ಯಾಯ ಕೊಡಿಸುವಂತೆ ಜಿಮ್ ಟ್ರೈನರ್ ನಿತೇಶ್ ಎಂಬಾತ ಇದೀಗ ಆಳಲು ತೋಡಿಕೊಂಡಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಜಯನಗರ ನಿವಾಸಿ ನಿತೇಶ್ ಸ್ನೇಹಿತ ನವೀನ್ ಮನೆಯಲ್ಲಿಯೇ ಬಾಡಿಗೆಗೆ ಇದ್ದರು. ನವೀನ ಜೊತೆಗೆ ನಿತೇಶ್ ಪತ್ನಿ ಸಂಪರ್ಕದಲ್ಲಿ ಇದ್ದಳು. ದಿನಾಲು ಕರೆ ಮಾಡುವುದು ಚಾಟ್ ಮೆಸೇಜ್ ಮಾಡೋದು ಎಲ್ಲವೂ ಆಗುತ್ತಿತ್ತು.
ಈ ವಿಷಯ ತಿಳಿದು ಪತ್ನಿಗೆ ನಿತೇಶ್ ಬುದ್ಧಿ ಹೇಳುತ್ತಾರೆ ನಿತೇಶ್ ಪತ್ನಿ ಹುಡುಗಿ ಹೆಸರಿನಲ್ಲಿ ನವೀನ್ ನಂಬರ್ ಸೇವ್ ಮಾಡಿಕೊಂಡಿದ್ದಳು. ಆಗ ನಿತೀಶ್ ಬಗ್ಗೆ ಪತಿ ಕೇಳಿದಾಗ ಆತ ಅಣ್ಣನ ಸಮಾನ ಅಂತ ಹೇಳಿರುತ್ತಾಳೆ. ಈಗ ಪತ್ನಿ ಸ್ನೇಹಿತ ನವೀನ್ ಜೊತೆಗೆ ಓಡಿ ಹೋಗಿದ್ದಾಳೆ. ಇತ್ತ ಗಂಡ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದು ನನಗೆ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾನೆ. ಮೂರು ದಿನಗಳ ಹಿಂದೆ ಪತ್ನಿ ಬಟ್ಟೆ ಪ್ಯಾಕ್ ಮಾಡಿದ್ದಳು. ನಿನ್ನೆ ಕೆಲಸಕ್ಕೆ ಅಂತ ನಿತೇಶ್ ಪತ್ನಿ ಹೋಗಿದ್ದಾಳೆ.
ಹೊಟ್ಟೆ ನೋವು ಎಂದು ನಿತೀಶ್ ಪತ್ನಿ ರಜೆ ಪಡೆದಿದ್ದಳು . ಸಂಜೆ ಪತ್ನಿಯನ್ನು ಪಿಕ್ ಅಪ್ ಮಾಡಲು ನಿತೇಶ್ ಹೋಗಿದ್ದ ಆಗ ಸ್ನೇಹಿತ ನವೀನ್ ಜೊತೆ ಪತ್ನಿ ಪರಾರಿಯಾಗಿದ್ದಾಳೆ. ಜಯನಗರ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ನಿತೇಶ್ ಪತ್ನಿ ಹಾಗೂ ನವೀನನ್ನು ಇಬ್ಬರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.ಆಗ ಪತ್ನಿ ಗಂಡನ ಜೊತೆಗೆ ಹೋಗಲ್ಲ ಎಂದು ಹಠ ಮಾಡಿದ್ದಾಳೆ. ನಾನು ಪಿಜಿಗೆ ಹೋಗಿ ಸೇರುತ್ತೇನೆ ಅಂತ ಹೇಳಿದ್ದು ಪೊಲೀಸರು ಮನವೊಲಿಕೆ ಕಾರ್ಯ ಮುಂದುವರಿಸಿದ್ದಾರೆ.








