ವಾರಣಾಸಿ : ಜ್ಞಾನವಾಪಿ ಮಸೀದಿ ಆವರಣವನ್ನ ಭಗವಾನ್ ವಿಶ್ವೇಶ್ವರ ವಿರಾಜ್ಮನ್ (ಸ್ವಯಂಭು) ಅವರಿಗೆ ಹಸ್ತಾಂತರಿಸುವ ದಾವೆಯ ನಿರ್ವಹಣೆಯನ್ನ ಪ್ರಶ್ನಿಸಿ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನ (ಆದೇಶ 7 ನಿಯಮ 11 ಸಿಪಿಸಿ ಅಡಿಯಲ್ಲಿ ಸಲ್ಲಿಸಲಾಗಿದೆ) ವಾರಣಾಸಿ ನ್ಯಾಯಾಲಯ ಇಂದು ವಜಾಗೊಳಿಸಿದೆ.
ಜ್ಞಾನ್ವಾಪಿ ಪ್ರಕರಣದಲ್ಲಿ ಗುರುವಾರ ಮುಸ್ಲಿಂ ಸಮಿತಿ ಹಿನ್ನಡೆ ಅನುಭವಿಸಿದ್ದಾರೆ. ಜ್ಞಾನ್ವಾಪಿ ಸಂಕೀರ್ಣವನ್ನ ಹಿಂದೂಗಳಿಗೆ ಹಸ್ತಾಂತರಿಸಿ, ಅವರಿಗೆ ಪೂಜೆ ಮಾಡುವ ಹಕ್ಕನ್ನ ನೀಡಬೇಕು ಮತ್ತು ಮುಸ್ಲಿಂ ಕಡೆಯವರು ಪ್ರವೇಶಿಸುವುದನ್ನ ತಡೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ನ್ಯಾಯಾಲಯ ಮಾನ್ಯ ಮಾಡಿದೆ.
ವಿಶ್ವ ವೇದ ಸನಾತನ ಸಂಘದ ಕಾರ್ಯಾಧ್ಯಕ್ಷ ಕಿರಣ್ ಸಿಂಗ್ ಅವರು ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ತ್ವರಿತಗತಿ ನ್ಯಾಯಾಲಯದ ಮಹೇಂದ್ರ ಕುಮಾರ್ ಪಾಂಡೆ ಪೀಠ ಈ ಅರ್ಜಿ ವಿಚಾರಣೆ ನಡೆಸಿತು. ಮುಸ್ಲಿಮ್ ಸಮಿತಿ ಈ ದಾವೆಗೆ ಆಕ್ಷೇಪಣೆಯನ್ನ ಸಲ್ಲಿಸಿತ್ತು. ಆದ್ರೆ, ಈಗ ನ್ಯಾಯಾಲಯ ಆ ಅರ್ಜಿಯನ್ನ ವಜಾಗೊಳಿಸಿ, ವಿಷಯವನ್ನ ನಿರ್ವಹಿಸಲು ಸಾಧ್ಯವಿಲ್ಲ ಎಂದಿದೆ. ಇನ್ನು ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 2ರಂದು ನಡೆಯಲಿದೆ.
ಹಿಂದೂ ಪಕ್ಷದ ವಕೀಲರಾದ ವಿಷ್ಣು ಜೈನ್ ಅವರ ಪ್ರಕಾರ, ಇದು ದೊಡ್ಡ ಯಶಸ್ಸಾಗಿದೆ. ನಮ್ಮ ಪ್ರಕರಣವು ಈಗಾಗಲೇ ತುಂಬಾ ಪ್ರಬಲವಾಗಿದ್ದು, ಇಲ್ಲಿಯೂ ಸಹ, 1991ರ ಕಾನೂನು ಅನ್ವಯಿಸುವುದಿಲ್ಲ. ಡಿಸೆಂಬರ್ 2ರಂದು ಹಿಂದೂ ಸಮಿತಿ ಜ್ಞಾನ್ವಾಪಿಯಲ್ಲಿ ಕಂಡುಬರುವ ಶಿವಲಿಂಗವನ್ನ ಪೂಜಿಸುವ ಹಕ್ಕು ಮತ್ತು ಆವರಣದ ಮತ್ತೊಂದು ಸಮೀಕ್ಷೆಯನ್ನ ಒತ್ತಾಯಿಸುತ್ತಾರೆ ಎನ್ನಲಾಗ್ತಿದೆ.
ಇದಕ್ಕೂ ಮುನ್ನ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ಮುಸ್ಲಿಂ ಕಡೆಯವರ ಅರ್ಜಿಯನ್ನ ವಜಾಗೊಳಿಸಿ, ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣದ ವಿಚಾರಣೆಗೆ ದಾರಿ ಮಾಡಿಕೊಟ್ಟಿತ್ತು. ಇಂದಿನ ನಿರ್ಧಾರದ ವಿರುದ್ಧ ಮುಸ್ಲಿಂ ಸಮಿತಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಮೆಟ್ಟಿಲೇರುವ ಸಾಧ್ಯತೆ ಇದೆ.
BIGG NEWS : ‘ಎಲ್ಲರ ಮೇಲೂ ಮಾನನಷ್ಟ ಕೇಸ್ ಹಾಕುತ್ತೇನೆ’ : ‘ಕೈ’ ನಾಯಕರ ವಿರುದ್ಧ ಸಚಿವ ಅಶ್ವಥ್ ನಾರಾಯಣ್ ಕಿಡಿ