ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ ಅಂತ ಹೇಳಿದ್ದರು. 25 ವರ್ಷಗಳ ಹಿಂದೆ ದ್ವಾರಕಾನಾಥ್ ಗುರೂಜಿ ಹೇಳಿದ್ದರು. ನಿಮ್ ಬಾಸ್, ನಿಮ್ಮ ಗುರು ಜೈಲಿಗೆ ಹೋಗ್ತಾರೆ ಅಂತ ಹೇಳಿದ್ರು.ಜೈಲಿಗೆ ಹೋಗಿ ಬಂದ ಮೇಲೆ ಡಿಕೆ ಸಿಎಂ ಆಗ್ತಾರೆ ಎಂದಿದ್ದರು ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು, ಡಿಕೆ ಹಣೆಬರದಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ. ಡಿಕೆ ಶಿವಕುಮಾರ್ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರೇ ಲಾಸ್ಟ್ ಅಂತ ಬರೆದಿದ್ದರೆ ಅದೇ ಕೊನೆ. ಡಿಕೆ ಶಿವಕುಮಾರ್ ಸಿಎಂ ಆಗುವ ಕುರಿತು ಅವರ ಹೈಕಮಾಂಡ್ ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ ಯಾರು ಸಿಎಂ ಆಗಬೇಕು ಅಂತ ತೀರ್ಮಾನ ಮಾಡುತ್ತಾರೆ ಎಂದರು.
ಡಿಕೆ ಶಿವಕುಮಾರ್ ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ತಾಳ್ಮೆಯಿಂದ ಮುಂದೆ ಹೋಗುತ್ತಿರುವುದನ್ನು ಇತ್ತೀಚಿಗೆ ಅವರನ್ನು ನೋಡುತ್ತಿದ್ದೇವೆ. ಅವರು ಎಂಟು ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಯಾರು ಏನೇ ಮಾಡಿದರು ಡಿಕೆ ಶಿವಕುಮಾರ್ ಅವರಿಗೆ ಟೆನ್ಶನ್ ಆಗುವ ಪ್ರಮೇಯೇ ಇಲ್ಲ. ಡಿಕೆ ಶಿವಕುಮಾರ್ ಅವರು ಯಾವ ಕಾರಣಕ್ಕು ನೆಗೆಟಿವ್ ಥಿಂಕ್ ಮಾಡುವಂಥವರು ಅಲ್ಲ. ಕರ್ನಾಟಕದಲ್ಲಿ ಜನ 136 ಸ್ಥಾನ ಕೊಟ್ಟಿದ್ದಾರೆ ಕರ್ನಾಟಕದ ಸೇವೆ ಮಾಡುತ್ತಾ ಬಂದಿದ್ದಾರೆ ಎಂದರು.