ಕಲಬುರ್ಗಿ : ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಒಂದು ಕೋಟಿಗೂ ಹೆಚ್ಚು ಲೂಟಿ ಹೊಡೆಯಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಹಣಕಾಸು ವಿಭಾಗದ ಅಕೌಂಟೆಂಟ್ ನಿಂದ ಹಣ ಲೂಟಿಯಾಗಿದೆ. ತುರ್ತು ಭತ್ಯೆ ಹೆಸರಲ್ಲಿ ಸರ್ಕಾರದ ಬೊಕ್ಕಸಕ್ಕೆ ವಂಚನೆ ಎಸಗಿದ್ದಾನೆ.
ವಿಶ್ವವಿದ್ಯಾಲಯದ ಅಕೌಂಟೆಂಟ್ ಶರಣು ಹೂಗಾರ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ. ಸಿಬ್ಬಂದಿಗೆ ಸಂಬಳದ ಜೊತೆಗೆ ಹೆಚ್ಚುವರಿ ತುರ್ತು ಭತ್ಯೆ ಹಾಕುತ್ತಿದ್ದ ತಪ್ಪಾಗಿ ಬಂದಿದೆ ಅಂತ ತನ್ನ ಖಾತೆಗೆ ವಾಪಸ್ ಹಾಕಿಸಿಕೊಳ್ಳುತ್ತಿದ್ದ. ಈ ರೀತಿ ಪ್ಲಾನ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ಒಂದು ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿ ವಂಚನೆ ಎಸಗಿದ್ದಾನೆ.
ಹೊರಗುತ್ತಿಗೆ ಆಧಾರದಲ್ಲಿ ಟೆಕ್ನಿಷಿಯನ್ ಆಗಿ ಈತ ಕೆಲಸಕ್ಕೆ ಸೇರಿದ್ದ.10 ವರ್ಷಗಳಿಂದ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹಣ ಲೂಟಿ ಬೆಳಕಿಗೆ ಬರಿತ್ತೀದ್ದ ಹಾಗೆ ವಿಶ್ವವಿದ್ಯಾಲಯದಿಂದ ಈತನನ್ನು ಕಿಕ್ ಔಟ್ ಮಾಡಲಾಗಿದೆ. ವಿಶ್ವವಿದ್ಯಾಲಯ ಆಡಳಿತ ಮಂಡಳಿ ಹೊರಹಾಕಿದೆ.