ಗುಜರಾತ್ : ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಬಸ್ನೊಳಗೆ ಪತ್ನಿಯ ಕತ್ತು ಸೀಳಿ ಕೊಲೆಗೈದಿರುವ ಘಟನೆ ಗುಜರಾತಿನ ಚೋಟಾ ಉದೇಪುರ್ನಲ್ಲಿ ನಡೆದಿದೆ.
ಆರೋಪಿಯನ್ನು ಅಮೃತ್ ರಥ್ವಾ ಎಂದು ಗುರುತಿಸಲಾಗಿದ್ದು, ಈತ ಸೂರತ್ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ ಎಂದು ತಿಳಿದು ಬಂದಿದೆ.
ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆ ಸರ್ಕಾರಿ ಜಿಎಸ್ಆರ್ಟಿಸಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಫೋನ್ನಲ್ಲಿ ಪದೇ ಪದೇ ಜಗಳವಾಡಿದ ನಂತರ, ಅಮೃತ್ ತನ್ನ ಹೆಂಡತಿಯನ್ನು ಕೊಲ್ಲಲು ನಿರ್ಧರಿಸಿದನು. ಅವನು ಒಂದು ಯೋಜನೆಯನ್ನು ರೂಪಿಸಿದನು.
ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳಗಳು ನಡೆಯುತ್ತಿದ್ದ, ಹೆಂಡತಿಯನ್ನು ಕೊಲೆ ಮಾಡಲು ಅಮೃತ್ ಯೋಚಿಸಿದ್ದನು. ಅದರಂತೆ ಪತ್ನಿಯನ್ನು ಭಿಖಾಪುರ ಗ್ರಾಮದಿಂದ ಬಸ್ಸಿನಲ್ಲಿ ಕರೆದುಕೊಂಡು ಹೊರಟ್ಟಿದ್ದನು. ಬಸ್ ನಲ್ಲಿ ಕುಳಿತ್ತಿದ್ದ ವೇಳೆ ಚಾಕುವಿನಿಂದ ಪತ್ನಿಯನ್ನು ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಕೊಲೆಯ ನಂತರ ಆರೋಪಿ ಬಂಧಿಸಲು ಪೊಲೀಸರು ಬರುವವರೆಗೂ ಶವದ ಬಳಿ ಬಸ್ ಒಳಗೆ ಕುಳಿತ್ತಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಚಮಸಾಲಿಗೆ ಮೀಸಲಾತಿ ಘೋಷಿಸಿದ್ರೆ ಸಿಎಂಗೆ ಸನ್ಮಾನ, ಇಲ್ಲವಾದಲ್ಲಿ ಹೋರಾಟ : ಬಸವ ಮೃತ್ಯುಂಜಯ ಸ್ವಾಮೀಜಿ
ಮಂಗಳೂರು : ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಮೇಲೆ ಅನ್ಯಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ
ಪಂಚಮಸಾಲಿಗೆ ಮೀಸಲಾತಿ ಘೋಷಿಸಿದ್ರೆ ಸಿಎಂಗೆ ಸನ್ಮಾನ, ಇಲ್ಲವಾದಲ್ಲಿ ಹೋರಾಟ : ಬಸವ ಮೃತ್ಯುಂಜಯ ಸ್ವಾಮೀಜಿ