ಅಹಮದಾಬಾದ್: 2016ರ ಪ್ರಕರಣವೊಂದರಲ್ಲಿ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಶಾಸಕ ಜಿಗ್ನೇಶ್ ಮೇವಾನಿ(Jignesh Mevani) ಮತ್ತು ಇತರ 18 ಮಂದಿಗೆ ಅಹಮದಾಬಾದ್ ಮೆಟ್ರೋ ಪೊಲೀಸ್ ಕೋರ್ಟ್ ಶುಕ್ರವಾರ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಗುಜರಾತ್ ವಿಶ್ವವಿದ್ಯಾನಿಲಯದ ಕಾನೂನು ಕಟ್ಟಡದ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮೇವಾನಿ ಇತರ ದಲಿತ ಹಕ್ಕುಗಳ ಗುಂಪುಗಳೊಂದಿಗೆ 2016 ರಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಕಟ್ಟಡಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡಬೇಕು ಎಂದು ಒತ್ತಾಯಿಸಿದ್ದರು. ಆದರೆ, ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಮೇಲ್ಮನವಿ ಸೆಷನ್ಸ್ ನ್ಯಾಯಾಲಯವು ಅಕ್ಟೋಬರ್ 17 ರವರೆಗೆ ಶಿಕ್ಷೆಯನ್ನು ತಡೆಹಿಡಿದಿದೆ ಮತ್ತು ಆರೋಪಿಗಳಿಗೆ ಜಾಮೀನು ನೀಡಿದೆ. ನ್ಯಾಯಾಲಯ 19 ಮಂದಿಗೆ ಜಾಮೀನು ಮಂಜೂರು ಮಾಡಿದೆ.
ಈ ವರ್ಷದ ಮೇನಲ್ಲಿ, ಗುಜರಾತ್ ನ್ಯಾಯಾಲಯವು 2017 ರ ಪ್ರಕರಣದಲ್ಲಿ ಅನುಮತಿಯಿಲ್ಲದೆ ರ್ಯಾಲಿ ನಡೆಸಿದ್ದಕ್ಕಾಗಿ ಮೇವಾನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.
BREAKING NEWS: SCO ಶೃಂಗಸಭೆ ನಂತ್ರ ಭಾರತಕ್ಕೆ ಆಗಮಿಸಿದ ಪ್ರಧಾನಿ ಮೋದಿ | PM Modi arrives to India