ಮೊರ್ಬಿ : ಗುಜರಾತ್’ನಲ್ಲಿ ಘೋರ ದುರಂತ ನಡೆದಿದ್ದು, ಮೊರ್ಬಿ ಪ್ರದೇಶದಲ್ಲಿ ಮಚು ನದಿಗೆ ನಿರ್ಮಿಸಲಾದ ಕೇಬಲ್ ಸೇತುವೆ ಭಾನುವಾರ ಕುಸಿದಿದೆ. ಇದರಿಂದ ಸೇತುವೆ ದಾಟುತ್ತಿದ್ದ ಪ್ರವಾಸಿಗರು ನದಿಗೆ ಬಿದ್ದಿದ್ದಾರೆ. ಈ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುಮಾರು 400ಕ್ಕೂ ಹೆಚ್ಚು ಮಂದಿ ನದಿಯಲ್ಲಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದಾರೆ.
ಘಟನೆ ತಿಳಿದ ತಕ್ಷಣ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಕುಟುಂಬ ಸದಸ್ಯರ ಕೂಗು ಕೇಳಿಬರುತ್ತಿದೆ.
ಅಂದ್ಹಾಗೆ, ಈಗಾಗಲೇ ಹಾಳಾಗಿದ್ದ ಕೇಬಲ್ ಸೇತುವೆಯನ್ನ ದುರಸ್ತಿಗೊಳಿಸಿ ಐದು ದಿನಗಳ ಹಿಂದೆ ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಸ್ಥಳಾಂತರಿಸಲು ಹೆಚ್ಚಿನ ಸಂಖ್ಯೆಯ ಆಂಬ್ಯುಲೆನ್ಸ್ಗಳನ್ನ ನಿಯೋಜಿಸಲಾಗಿದೆ. ಸ್ಥಳೀಯರ ನೆರವಿನಿಂದ ನಾಪತ್ತೆಯಾದವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
#WATCH | Several people feared to be injured after a cable bridge collapsed in the Machchhu river in Gujarat's Morbi area today
PM Modi has sought urgent mobilisation of teams for rescue ops, while Gujarat CM Patel has given instructions to arrange immediate treatment of injured pic.twitter.com/VO8cvJk9TI
— ANI (@ANI) October 30, 2022
ಬಿಜೆಪಿ ಸರ್ಕಾರ ದುಡ್ಡನ್ನು ಕೈಯಲ್ಲಿ ಅಲ್ಲ, ‘JCB’ ಯಲ್ಲಿ ಬಾಚುತ್ತಿದೆ : H.D ಕುಮಾರಸ್ವಾಮಿ ವಾಗ್ಧಾಳಿ