ಬೆಂಗಳೂರು: ಗಣೇಶ ಹಬ್ಬ ( Ganesha Festival 2022 ) ಸಮೀಪಿಸುತ್ತಿರುವಾಗ, ಬಿಬಿಎಂಪಿಯಿಂದ (BBMP ) ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸೋದಕ್ಕೆ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಕೋರ್ಟ್ ಆದೇಶದಂತೆ ಪಿಓಪಿ ಗಣೇಶ ಮೂರ್ತಿಯನ್ನು ನಿಷೇಧಿಸಲಾಗಿದ್ದೂ, ವಾರ್ಡಿಗೆ ಒಂದೇ ಗಣಪತಿ ಸೇರಿ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.

BREAKING NEWS: ವಿಶ್ವವಿಖ್ಯಾತ ಮೈಸೂರು ದಸರಾ 2022: ಈ ಬಾರಿ ‘ಗೋಲ್ಡ್ ಪಾಸ್’ ರದ್ದು – ಸಚಿವ ಎಸ್ ಟಿ ಸೋಮಶೇಖರ್

ಈ ಕುರಿತಂತೆ ಮಾಹಿತಿ ನೀಡಿದಂತ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ( Tushar Girinath ) ಅವರು, ಈ ಬಾರಿಯೂ ಕಳೆದ ಬಾರಿ ಗಣೇಶ ಹಬ್ಬಕ್ಕೆ ವಿಧಿಸಲಾಗಿರುವಂತ ನಿಯಮಗಳನ್ನೇ ವಿಧಿಸಲಾಗುತ್ತಿದೆ. ಪಿಓಪಿ ಗಣೇಶ ಮೂರ್ತಿಗಳನ್ನು ಕೂರಿಸೋದಕ್ಕೆ ನಿಷೇಧ ಹೇರಲಾಗಿದೆ. ಒಂದು ವಾರ್ಡಿಗೆ ಒಂದೇ ಗಣಪತಿ ಕೂರಿಸಲು ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿದರು.

ಕಾಮನ್‌ವೆಲ್ತ್ ಗೇಮ್ಸ್ 2022 : ಮಹಿಳೆಯರ 10000 ಮೀಟರ್ ರೇಸ್ ವಾಕ್ ಫೈನಲ್ನಲ್ಲಿ ʻಬೆಳ್ಳಿ ಪದಕʼ ಗೆದ್ದ ʼಪ್ರಿಯಾಂಕಾ ಗೋಸ್ವಾಮಿ ʼ | Priyanka Goswami

ಇನ್ನೂ ಪಿಒಪಿ ಗಣಪತಿಗಳನ್ನು ಯಾರೂ ತಯಾರಿಸಬಾರದು. ತಯಾರಿಸಿ ಮಾರಾಟ ಮಾಡಿದ್ರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗೆ ಸೇರಿ ಅಂತಹ ಅಂಗಡಿಗಳ ಮೇಲೆ ರೈಡ್ ಮಾಡಲಾಗುತ್ತದೆ ಎಂದರು.

‘ಪವಿತ್ರ ಗ್ರಂಥ’ ಕಂಠಪಾಠ ಮಾಡಿದ್ರೆ ಜೈಲು ಶಿಕ್ಷೆಯಿಂದ ವಿನಾಯ್ತಿ ; ‘ಪಾಕ್‌ ಪಂಜಾಬ್ ಸರ್ಕಾರ’ದಿಂದ ವಿಶಿಷ್ಟ ಪ್ರಸ್ತಾಪ

ಗಣೇಶ ವಿಸರ್ಜನೆಗೆ ಬಿಬಿಎಂಪಿ ನಿಗದಿ ಪಡಿಸಿರುವಂತ ಜಾಗದಲ್ಲಿಯೇ ವಿಸರ್ಜನೆ ಮಾಡಬೇಕು. ಅದರ ಹೊರತಾಗಿ ಎಲ್ಲಿಯೂ ವಿಸರ್ಜಿಸುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Share.
Exit mobile version