ಮೈಸೂರು: ದಸರಾ ಮಹೋತ್ಸವ ( Mysuru Dasara Mahotsav 2022 ) ಸಂಬಂಧ ಬಿಡುಗಡೆ ಮಾಡಲಾಗುತ್ತಿದ್ದಂತ ಪಾಸ್ ಗೋಲ್ಮಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮವನ್ನು ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿದೆ ಗೋಲ್ಡ್ ಪಾಸ್ ( Gold Pass ) ರದ್ದು ಮಾಡಲಾಗಿದೆ. ಇನ್ನುಳಿದ ಪಾಸ್ ಗಳನ್ನು ಸಹಿತ ರದ್ದು ಮಾಡಲು ಚಿಂತನೆ ನಡೆಸಲಾಗಿದೆ ಎಂಬುದಾಗಿ ಸಚಿವ ಎಸ್ ಟಿ ಸೋಮಶೇಖರ್ ( Minister ST Somashekhar ) ಘೋಷಣೆ ಮಾಡಿದ್ದಾರೆ.

BREAKING NEWS: ನೆಲಮಂಗಲ ಬಳಿಯಲ್ಲಿ ಕಾರು ಪಲ್ಟಿ: ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಈ ಕುರಿತಂತೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ವಿಶ್ವವಿಖ್ಯಾತ ಮೈಸೂರು ದಸರಾ 2022 ಮಹೋತ್ಸವದ ನೀಡಲಾಗುತ್ತಿದ್ದಂತ ಗೋಲ್ಡ್ ಪಾಸ್ ಅನ್ನು ಈ ಬಾರಿ ರದ್ದು ಪಡಿಸಲಾಗಿದೆ. ಗಣ್ಯರು, ವಿದೇಶಿಗರಿಗೆ ಹೆಚ್ಚಾಗಿ ಅವಲಂಬಿತವಾದ ಗೋಲ್ಡ್ ಪಾಸ್ ನೀಡಲಾಗುತ್ತಿಲ್ಲ. ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ ಎಂದರು.

ಕಾಮನ್‌ವೆಲ್ತ್ ಗೇಮ್ಸ್ 2022 : ಮಹಿಳೆಯರ 10000 ಮೀಟರ್ ರೇಸ್ ವಾಕ್ ಫೈನಲ್ನಲ್ಲಿ ʻಬೆಳ್ಳಿ ಪದಕʼ ಗೆದ್ದ ʼಪ್ರಿಯಾಂಕಾ ಗೋಸ್ವಾಮಿ ʼ | Priyanka Goswami

ಇನ್ನೂ ವಿವಿಐಪಿ ಪಾಸ್ ಹಾಗೂ ಕರ್ತವ್ಯನಿರತ ಪಾಸ್ ಹೊರತುಪಡಿಸಿ ಉಳಿದ ಪಾಸ್‌ಗಳನ್ನು ರದ್ದು ಮಾಡಲು ಚಿಂತನೆ ನಡೆಸಲಾಗುತ್ತಿದೆ. ಪಾಸ್‌ಗಳ ವಿಚಾರವಾಗಿ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತೇವೆ. ಪಾಸ್‌ಗಳಿಂದ ಗೋಲ್‌ಮಾಲ್ ಉಂಟಾಗುವ ಆರೋಪ ಹಿನ್ನಲೆಯಲ್ಲಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ. ಈ ಬಾರಿ ಅಂತಹ ಯಾವುದೇ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಹೇಳಿದರು.

BIGG NEWS : ಆ.23ರಿಂದ CBSE 10ನೇ ತರಗತಿ ‘ಕಂಪಾರ್ಟ್ಮೆಂಟ್ ಎಕ್ಸಾಂ’ ಆರಂಭ ; ವಿದ್ಯಾರ್ಥಿಗಳಿಗೆ ’15 ನಿಮಿಷ ಹೆಚ್ಚುವರಿ ಸಮಯಾವಕಾಶ’

ಮೈಸೂರು ದಸರಾ 2022ಕ್ಕೆ, ನಾಳೆ ದಸರಾ ಗಜಪಯಣ ಆರಂಭವಾಗಲಿದೆ. ಆನೆಗಳನ್ನು ವೀರನ ಹೊಸಹಳ್ಳಿಯಿಂದ ಕರೆ ತರಲಾಗುತ್ತದೆ. ಈ ಬಾರಿ 14 ಆನೆಗಳನ್ನು ಆಯ್ಕೆ ಮಾಡಲಾಗಿದೆ 3 ಆನೆ ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಳ್ಳುತ್ತವೆ. ಈ ಬಾರಿ ಚಾಮರಾಜನಗರ ದಸರಾದಲ್ಲೂ ಆನೆ ಪಾಲ್ಗೊಳ್ಳುತ್ತದೆ. ದಸರಾ ಉದ್ಘಾಟಕರ ತೀರ್ಮಾನ ಸಿಎಂ‌ಗೆ ವಹಿಸಲಾಗಿದೆ ಎಂದರು.

‘ಪವಿತ್ರ ಗ್ರಂಥ’ ಕಂಠಪಾಠ ಮಾಡಿದ್ರೆ ಜೈಲು ಶಿಕ್ಷೆಯಿಂದ ವಿನಾಯ್ತಿ ; ‘ಪಾಕ್‌ ಪಂಜಾಬ್ ಸರ್ಕಾರ’ದಿಂದ ವಿಶಿಷ್ಟ ಪ್ರಸ್ತಾಪ

16 ಕಮಿಟಿಗಳನ್ನು ರಚಿಸಿ, ಐಎಎಸ್ ಅಧಿಕಾರಿ ಒಳಹೊಂಡಂತೆ ಸದಸ್ಯರನ್ನು ಸೇರಿಸಲಾಗುತ್ತೆ. ವಿಶ್ವ ಮಟ್ಟದಲ್ಲಿ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಗುತ್ತೆ. ಪ್ರವಾಸೋದ್ಯಮ ಉತ್ತೇಜನ ನೀಡುವ ದೃಷ್ಟಿಯಲ್ಲಿ ಅದ್ಧೂರಿ ದಸರಾ ಆಚರಣೆ ಇರಲಿದೆ. ಶ್ರೀರಂಗಪಟ್ಟಣ ದಸರಾ ಚಾಮರಾಜನಗರ ದಸರಾಗೆ ತಲಾ 1 ಕೋಟಿ ಅನುದಾನ ನೀಡಲಾಗಿದೆ ಎಂಬುದಾಗಿ ಸಚಿವ ಎಸ್‌ಟಿ.ಸೋಮಶೇಖರ್ ತಿಳಿಸಿದರು.

Share.
Exit mobile version