ಮೈಸೂರು: ಡಿಸೆಂಬರ್.31ರ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಈ ನಿಯಮಗಳನ್ನು ಪಾಲಿಸೋದು ಕಡ್ಡಾಯವಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಮೈಸೂರು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರು, ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯಿಂದ ಹೊಸ ವರ್ಷಾಚರಣೆಯ ವೇಳೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚಾಮುಂಡಿ ಬೆಟ್ಟಕ್ಕೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದರು.
ಮೈಸೂರಲ್ಲಿ ಹೊಸ ವರ್ಷಾಚರಣೆ ವೇಳೆ ಈ ಮಾರ್ಗಸೂಚಿ, ಈ ನಿಯಮಗಳ ಪಾಲನೆ ಕಡ್ಡಾಯ
-ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವಂತಿಲ್ಲ. ಇದರ ತಡೆಗಾಗಿ ಠಾಣಾವಾರು ವಿಶೇಷ ಕಾರ್ಯಪಡೆ ತಂಡ ರಚನೆ.
-ಮಹಿಳೆಯರ ರಕ್ಷಣೆಗಾಗಿ ಮಹಿಳಾ ಅಧಿಕಾರಿ, ಸಿಬ್ಬಂದಿ ಒಳಗೊಂಡ ಸುರಕ್ಷತಾ ಪಿಂಕ್ ಗರುಡಾ ಅಂದರೆ ಚಾಮುಂಡೆ ಪಡೆ ಗಸ್ತು
-ಯಾವುದೇ ಅಹಿತಕರ ಘಟನೆ ನಡೆದ ಕೂಡಲೇ ತಪಾಸಣೆಗೆ ಶ್ವಾನದಳ, ವಿದ್ವಂಸಕ ಕೃತ್ಯ ತಡೆ ತಂಡದಿಂದ ತಪಾಸಣೆಗೆ ರೆಡಿ
-ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಕ್ಯಾಮರಾ ಕಣ್ಗಾವಲು
-ವೀಲಿಂಗ್, ಡ್ರಾಗ್ ರೇಸ್ ತಡೆಗೆ ಸಂಚಾರ ಪೊಲೀಸರು ಸಜ್ಜು
-ಅತಿ ವೇಗದ ಚಾಲನೆ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್ ತೆರೆಯಲಾಗುತ್ತಿದೆ. 112 ವಾಹನ, ಹೈವೇ ಪೆಟ್ರೋಲ್ ವಾಹನ ನಿಯೋಜನೆ
-ರಾತ್ರಿ 1 ಗಂಟೆವರೆಗೆ ಮಾತ್ರ ರೆಸ್ಟೋರೆಂಟ್, ಹೋಟೆಲ್, ಕ್ಲಬ್ ಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ. ಆನಂತ್ರ ಬಂದ್ ಕಡ್ಡಾಯ
-ಸೋಷಿಯಲ್ ಮೀಡಿಯಾ ಮೇಲೆ ಪೊಲೀಸರ ಹದ್ದಿನ ಕಣ್ಣ, ಅಪಪ್ರಚಾರ ಮಾಡಿದ್ರೇ ಕೇಸ್ ಫಿಕ್ಸ್
ಹೊಸ ವರ್ಷಾಚರಣೆಗೆ ‘ನಂದಿಗಿರಿಧಾಮ’ ಬಂದ್: ‘ಗೆಸ್ಟ್ ಹೌಸ್’ ಬುಕ್ಕಿಂಗ್ ಸಹ ರದ್ದು | Nandihills
GOOD NEWS: ರಾಜ್ಯದಲ್ಲಿ ‘ಹೊಸ PU ಕಾಲೇಜು’ ತೆರೆಯುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅರ್ಜಿ ಆಹ್ವಾನ