Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Delhi Blast: ಕೆಂಪುಕೋಟೆ ಬಳಿ ಕಾರು ಸ್ಫೋಟ: ಸುರಕ್ಷತೆಗಾಗಿ ಓಡುತ್ತಿರುವ ಜನ,ಸಿಸಿಟಿವಿಯಲ್ಲಿ ರೆಕಾರ್ಡ್ | Watch video

11/11/2025 11:35 AM

ಫೋನ್ ಕದ್ದಾಲಿಕೆ ಕೇಸ್ ನಲ್ಲಿ IPS ಅಧಿಕಾರಿ ಅಲೋಕ್ ಕುಮಾರ್ ಗೆ ರಿಲೀಫ್ : ‘CAT’ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್​ ನಕಾರ

11/11/2025 11:30 AM

ಗ್ರಾಮೀಣ ಪ್ರದೇಶದ ವಸತಿ ಯೋಜನೆಯ ಮನೆಗಳಿಗೆ ಗ್ರಾ.ಪಂ.ಯಲ್ಲೇ `GPS’ ಅಳವಡಿಕೆಗೆ ವಿಶೇಷ ಅಭಿಯಾನ

11/11/2025 11:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: 5 ವರ್ಷವೂ ‘ಗ್ಯಾರಂಟಿ ಯೋಜನೆ’ ನಿಲ್ಲಲ್ಲ: ಸದನದಲ್ಲೇ ‘ಸಿಎಂ ಸಿದ್ಧರಾಮಯ್ಯ’ ಸ್ಪಷ್ಟನೆ | Guarantee scheme
KARNATAKA

BIG NEWS: 5 ವರ್ಷವೂ ‘ಗ್ಯಾರಂಟಿ ಯೋಜನೆ’ ನಿಲ್ಲಲ್ಲ: ಸದನದಲ್ಲೇ ‘ಸಿಎಂ ಸಿದ್ಧರಾಮಯ್ಯ’ ಸ್ಪಷ್ಟನೆ | Guarantee scheme

By kannadanewsnow0918/03/2025 6:56 PM

ಬೆಂಗಳೂರು: ಅಭಿವೃದ್ಧಿ ಯೋಜನೆಗಳಿಗೂ ಹಣ ಮೀಸಲಿಟ್ಟು, ಗ್ಯಾರಂಟಿಗಳ ಜೊತೆಗೆ ಕರ್ನಾಟಕದ ಪ್ರಗತಿಯನ್ನೂ ಮಾಡಿದ್ದೇವೆ. 1.26 ಕೋಟಿ ಕುಟುಂಬಗಳಿಗೆ ನಮ್ಮ ಗ್ಯಾರಂಟಿ ಯೋಜನೆಗಳು ತಲುಪುತ್ತಿದ್ದು, ಕೊಟ್ಟ ಮಾತಿನಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ ಎಂಬುದಾಗಿ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ‌ ಚರ್ಚೆಗೆ ಸಿಎಂ ಸಿದ್ಧರಾಮಯ್ಯ ಉತ್ತರಿಸಿದರು.

ಭಾರತದ 100 ಕೋಟಿ ಜನರಿಗೆ ಕೊಳ್ಳುವ ಶಕ್ತಿ ಇಲ್ಲದ ಸ್ಥಿತಿ ಬಂದಿದೆ. ನಮ್ಮ ಗ್ಯಾರಂಟಿಗಳಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳು, ವಿಶ್ವದ ಅಧ್ಯಯನ ಸಂಸ್ಥೆಗಳು ನಮ್ಮ ಗ್ಯಾರಂಟಿಗಳನ್ನು ಶ್ಲಾಘಿಸಿರುವುದು, ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಕದ್ದಿರುವುದು ಈ ಕಾರಣಕ್ಕೇ ಎಂಬುದಾಗಿ ಹೇಳಿದರು.

1949 ನವೆಂಬರ್ 25 ನೇ ತಾರೀಖಿನಂದು ಸಂವಿಧಾನ ಜಾರಿ ಸಭೆಯಲ್ಲಿ ಡಾ.ಬಿ.ಆರ್ .ಅಂಬೇಡ್ಕರ್ ರವರು ಮಾಡಿದ ಭಾಷಣವನ್ನು ನೀವು ಓದಬೇಕು. ನಾವು ವೈರುದ್ಯದ ಸಮಾಜಕ್ಕೆ ಪ್ರವೇಶಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಆರ್ಥಿಕ ಸಾಮಾಜಿಕ ಸಮಾನತೆ ಇಲ್ಲ. ದುರ್ಬಲವರ್ಗದವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಿದಲ್ಲವೋ , ಅಲ್ಲಿಯವರೆಗೂ ಸಮಾನತೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತದೆ. ಒಂದು ಅಧ್ಯಯನ ವರದಿಯಂತೆ ನಮ್ಮ ದೇಶದ 100 ಕೋಟಿ ದೇಶದ ಜನರಿಗೆ ಕೊಂಡುಕೊಳ್ಳುವ ಆಯ್ಕೆಯಿಲ್ಲ, ಶಕ್ತಿ ಇಲ್ಲ.

ಮೊದಲ ವರ್ಗದಲ್ಲಿ 14 ಕೋಟಿ ಜನರಿದ್ದು, ಅವರ ಸರಾಸರಿ ವಾರ್ಷಿಕ ಆದಾಯ 15 ಸಾವಿರ ಡಾಲರ್ (13 ಲಕ್ಷ ರೂ.), 7 ಕೋಟಿ ಕುಟುಂಬಗಳ ತಲಾ ಆದಾಯ 3 ಸಾವಿರ ಡಾಲರ್ (2.62 ಲಕ್ಷ) 20.5 ಕೊಟಿ ಕುಟುಂಬಗಳ 100 ಕೋಟಿ ಜನರು ತಲಾ ಆದಾಯ 1 ಸಾವಿರ ಡಾಲರ್ (87 ಸಾವಿರ , ಅಂದರೆ ತಿಂಗಳಗೆ ಸುಮಾರು 7 ಸಾವಿರ), ಈ ವರ್ಗದವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಹಣವಿರುವುದಿಲ್ಲ.

143 ಕೋಟಿ ಜನ ಮುಖ್ಯವಾಹಿನಿಗೆ ತರುವ ವ್ಯವಸ್ಥೆಯೇನು ? ಈ ದಿಸೆಯಲ್ಲಿ ಅಂತಹ ಜನರಿಗೆ ಆರ್ಥಿಕ ಸಾಮಾಜಿಕ ಸಮಾನತೆ ತರಲು ನಮ್ಮ ಸರ್ಕಾರ ಮಾಡಿರುವ ಪ್ರಮಾಣಿಕ ಪ್ರಯತ್ನ ಈ ಗ್ಯಾರಂಟಿಗಳು.

United Nations ನ General Assembly ಅಧ್ಯಕ್ಷರಾದ ಕ್ಯಾಮರೂನ್ ದೇಶದ ಪಿಲೆಮಾನ್ ಯಾಂಗ್ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದಾರೆ.

05-03-2025 ರಂದು ಕೇರಳ ಸರ್ಕಾರದ ಅಧಿಕಾರಿಗಳ ತಂಡ ಹಾಗೂ ಇತರೆ ದಿನಾಂಕಗಳಲ್ಲಿ ಆಂಧ್ರಪ್ರದೇಶದ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿದ್ದರು. ಆ ತಂಡಗಳಿಗೆ ಗ್ಯಾರಂಟಿಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಯಿತು.

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ Indian Institute of Pubic Administration ಸಂಸ್ಥೆಯ ಅಧ್ಯಕ್ಷರು , ಕೇಂದ್ರಸಚಿವರಾಗಿದ್ದಾರೆ. ಉಪರಾಷ್ಟ್ರಪತಿಗಳ ಜಗದೀಪ್ ಧನಕರ್ ಅವರು ಅಧ್ಯಕ್ಷರಾಗಿ , ರಾಜ್ಯದ ಗ್ಯಾರಂಟಿಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ವಿರೋಧಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಸರ್ಕಾರದಲ್ಲಿ ಗ್ಯಾರಂಟಿಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಫೆಬ್ರವರಿ ಅಂತ್ಯದಲ್ಲಿ 76509 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2024-25 ರಲ್ಲಿ 52009 ಕೋಟಿಗಳನ್ನು ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಇಡಲಾಗಿದ್ದು, ಅದರಲ್ಲಿ 41560 ಕೋಟಿ ವೆಚ್ಚ ಮಾಡಲಾಗಿದೆ.

ಅದರಲ್ಲಿ ಗೃಹ ಲಕ್ಷ್ಮಿ 28608 ಕೋಟಿ – ಖರ್ಚು 22611 ಕೋಟಿ , ಗೃಹಜ್ಯೋತಿ – 9657 ಕೋಟಿ –ಖರ್ಚು 8389 ಕೋಟಿ ,ಅನ್ನಭಾಗ್ಯ 8079 ಕೊಟಿ – ಖರ್ಚು 5590 ಕೋಟಿ ಶಕ್ತಿ ಯೋಜನೆಗೆ 5015 ಕೋಟಿಗಳಲ್ಲಿ -4821 ಕೋಟಿ , ಯುವನಿಧಿ 650 ಕೋಟಿ- ವೆಚ್ಚ 240 ಕೋಟಿ , ಒಟ್ಟು 52009 ರಲ್ಲಿ 41650 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರದಲ್ಲಿ ಹಣವಿಲ್ಲದಿದ್ದರೆ 1.26 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಅನ್ನಭಾಗ್ಯದ ಫಲಾನುಭವಿಗಳು , 1.60 ಕೋಟಿ ಕುಟುಂಬದ ಗೃಹಜ್ಯೋತಿಯಿಂದ ಲಾಭ ಪಡೆದಿದ್ದಾರೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ರಾಜ್ಯದಲ್ಲಿ ಹೆಚ್ಚಾದ ಬಿಸಿಲು: ಸಾರ್ವಜನಿಕರು ಏನು ಮಾಡಬೇಕು.? ಏನು ಮಾಡಬಾರದು.? ಇಲ್ಲಿದೆ ಮಾಹಿತಿ

ಬಾಹ್ಯಾಕಾಶದಲ್ಲಿ ಸಿಲುಕಿದ್ದ ‘ಸುನೀತಾ ವಿಲಿಯಮ್ಸ್’ಗೆ ನಾಸಾ ಎಷ್ಟು ಪಾವತಿ ಗೊತ್ತಾ? | Sunita Williams

Share. Facebook Twitter LinkedIn WhatsApp Email

Related Posts

ಫೋನ್ ಕದ್ದಾಲಿಕೆ ಕೇಸ್ ನಲ್ಲಿ IPS ಅಧಿಕಾರಿ ಅಲೋಕ್ ಕುಮಾರ್ ಗೆ ರಿಲೀಫ್ : ‘CAT’ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್​ ನಕಾರ

11/11/2025 11:30 AM1 Min Read

ಗ್ರಾಮೀಣ ಪ್ರದೇಶದ ವಸತಿ ಯೋಜನೆಯ ಮನೆಗಳಿಗೆ ಗ್ರಾ.ಪಂ.ಯಲ್ಲೇ `GPS’ ಅಳವಡಿಕೆಗೆ ವಿಶೇಷ ಅಭಿಯಾನ

11/11/2025 11:29 AM2 Mins Read

ALERT : ಕಿವಿಗೆ ‘ಇಯರ್ ಬಡ್ಸ್’ ಹಾಕಿ ಸ್ವಚ್ಛಗೊಳಿಸುವರೇ ಎಚ್ಚರ : ಈ ಸಣ್ಣ ತಪ್ಪಿನಿಂದ ನೀವು ಕಿವುಡರಾಗಬಹುದು.!

11/11/2025 11:16 AM1 Min Read
Recent News

Delhi Blast: ಕೆಂಪುಕೋಟೆ ಬಳಿ ಕಾರು ಸ್ಫೋಟ: ಸುರಕ್ಷತೆಗಾಗಿ ಓಡುತ್ತಿರುವ ಜನ,ಸಿಸಿಟಿವಿಯಲ್ಲಿ ರೆಕಾರ್ಡ್ | Watch video

11/11/2025 11:35 AM

ಫೋನ್ ಕದ್ದಾಲಿಕೆ ಕೇಸ್ ನಲ್ಲಿ IPS ಅಧಿಕಾರಿ ಅಲೋಕ್ ಕುಮಾರ್ ಗೆ ರಿಲೀಫ್ : ‘CAT’ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್​ ನಕಾರ

11/11/2025 11:30 AM

ಗ್ರಾಮೀಣ ಪ್ರದೇಶದ ವಸತಿ ಯೋಜನೆಯ ಮನೆಗಳಿಗೆ ಗ್ರಾ.ಪಂ.ಯಲ್ಲೇ `GPS’ ಅಳವಡಿಕೆಗೆ ವಿಶೇಷ ಅಭಿಯಾನ

11/11/2025 11:29 AM

ಪ್ರಧಾನಿ ಮೋದಿ ಜೊತೆಗಿನ ಅದ್ಭುತ ಸಂಬಂಧವನ್ನು ಶ್ಲಾಘಿಸಿದ ಟ್ರಂಪ್, ಭಾರತವನ್ನು ಅಮೇರಿಕಾದ ಪ್ರಮುಖ ಪಾಲುದಾರ ಎಂದ US ಅಧ್ಯಕ್ಷ

11/11/2025 11:19 AM
State News
KARNATAKA

ಫೋನ್ ಕದ್ದಾಲಿಕೆ ಕೇಸ್ ನಲ್ಲಿ IPS ಅಧಿಕಾರಿ ಅಲೋಕ್ ಕುಮಾರ್ ಗೆ ರಿಲೀಫ್ : ‘CAT’ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್​ ನಕಾರ

By kannadanewsnow0511/11/2025 11:30 AM KARNATAKA 1 Min Read

ಬೆಂಗಳೂರು : ಟೆಲಿಫೋನ್‌ ಕದ್ದಾಲಿಕೆ ಆರೋಪ ಸಂಬಂಧ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ವಿರುದ್ಧ ಇಲಾಖಾವಾರು ತನಿಖೆ ರದ್ದುಗೊಳಿಸಿದ್ದ…

ಗ್ರಾಮೀಣ ಪ್ರದೇಶದ ವಸತಿ ಯೋಜನೆಯ ಮನೆಗಳಿಗೆ ಗ್ರಾ.ಪಂ.ಯಲ್ಲೇ `GPS’ ಅಳವಡಿಕೆಗೆ ವಿಶೇಷ ಅಭಿಯಾನ

11/11/2025 11:29 AM

ALERT : ಕಿವಿಗೆ ‘ಇಯರ್ ಬಡ್ಸ್’ ಹಾಕಿ ಸ್ವಚ್ಛಗೊಳಿಸುವರೇ ಎಚ್ಚರ : ಈ ಸಣ್ಣ ತಪ್ಪಿನಿಂದ ನೀವು ಕಿವುಡರಾಗಬಹುದು.!

11/11/2025 11:16 AM

ಅಡಿಕೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಸಲು‌ ಕೇಂದ್ರಕ್ಕೆ ಮನವಿ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

11/11/2025 10:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.