ನವದೆಹಲಿ: ಜಿಎಸ್ ಟಿ ತೆರಿಗೆ ಪಾವತಿಯಲ್ಲಿನ ( GST Taxpayers ) ರಿಟರ್ನ್ ಫೈಲಿಂಗ್ ( Returne Filing ) ಪ್ರಕ್ರಿಯೆಯಲ್ಲಿ ಎರಡು ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಆ ಬಗ್ಗೆ ಏನು ಅಂತ ಮುಂದೆ ಓದಿ.

ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ( Ministery if Finance ) ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಜಿಎಸ್ ಟಿ ರಿಟರ್ನ್ ಫೈಲಿಂಗ್ ( GST Return Filing ) ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಯನ್ನು ಮಾಡಲಾಗಿದೆ. ತೆರಿಗೆದಾರರು ( Taxpayers ) ಹಿಂದಿನ ತೆರಿಗೆ ಅವಧಿಯ ಜಿಎಸ್ ಟಿ ಆರ್-1 ( GSTR-1 ) ಅನ್ನು ಮೊದಲು ಪ್ರಸ್ತುತ ಅವಧಿಯ ಜಿಎಸ್ ಟಿಆರ್-1 ಅನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್

ಇನ್ನೂ ಹೇಳಿದ ತೆರಿಗೆ ಅವಧಿಗೆ ಜಿಎಸ್ ಟಿಆರ್-3ಬಿ ಅನ್ನು ಸಲ್ಲಿಸುವ ಮೊದಲು ಪ್ರಸ್ತುತ ಅವಧಿಗೆ ಜಿಎಸ್ ಟಿಆರ್-1 ಅನ್ನು ಸಲ್ಲಿಸಬೇಕಾಗುತ್ತದೆ ಎಂದು ಜಿಎಸ್ ಟಿ ತೆರಿಗೆ ಪಾವತಿಯಲ್ಲಿನ ಈ ಎರಡು ಬದಲಾವಣೆ ಬಗ್ಗೆ ಮಾಹಿತಿ ನೀಡಿದೆ.

ಜಿಎಸ್ ಟಿಆರ್-1 ನಮೂನೆ ಎಂದರೇನು?

ಜಿಎಸ್ ಟಿಆರ್-1 ನಮೂನೆ ಎಂದರೇ ಹೊರಗಿನ ಸರಬರಾಜುಗಳನ್ನು ಮಾಡಿ ಸಲ್ಲಿಸಿದ ವರದಿಯಾಗಿದೆ. ಕ್ಯೂ ಆರ್ ಎಂಪಿ ತೆರಿಗೆದಾರರಿಂದ ತ್ರೈಮಾಸಿಕ ಆಧಾರದ ಮೇಲೆ ಆಗಿದ್ದರೇ, ಇತರ ತೆರಿಗೆದಾರರಿಂದ ಮಾಸಿಕ ಆಧಾರದ ಮೇಲೆ ಪಾವತಿಸುವಂತ ತೆರಿಗೆಯಾಗಿದೆ.

ರಾಜ್ಯದಲ್ಲಿ ‘ಖಾಸಗಿ ಜಮೀನು’ಗಳಲ್ಲಿ ಮನೆ ಕಟ್ಟಿಕೊಂಡಿರೋರಿಗೆ ಭರ್ಜರಿ ಗುಡ್ ನ್ಯೂಸ್: ‘ಕಂದಾಯ ಗ್ರಾಮ’ವಾಗಿ ಘೋಷಣೆ

ನೀವು ಜಿಎಸ್ ಟಿಆರ್-1 ನಮೂನೆಯನ್ನು ಯಾವಾಗ ಸಲ್ಲಿಸಬೇಕು.?

ಈ ತೆರಿಗೆಯನ್ನು ಎಲ್ಲಾ ತೆರಿಗೆದಾರರು ( ಕ್ಯೂ ಆರ್ ಎಂಪಿ ತೆರಿಗೆದಾರರನ್ನು ಹೊರತುಪಡಿಸಿ), ಮುಂಬರುವ ತಿಂಗಳ 11ನೇ ತಾರೀಖಿನ ಮೊದಲು ಅಥವಾ ಅದಕ್ಕೂ ಮುಂಚಿತವಾಗಿ ಪ್ರತಿ ತಿಂಗಳು ಜಿಎಸ್ ಟಿಆರ್-1 ನಮೂನೆಯನ್ನು ಸಲ್ಲಿಸಬೇಕು.

ಕ್ಯು ಆರ್ ಎಂಪಿ ತೆರಿಗೆದಾರರು ತ್ರೈಮಾಸಿಕ ಜಿಎಸ್ ಟಿಆರ್-1 ನಮೂನೆಯನ್ನು ಸಂಬಂಧಿತ ತ್ರೈಮಾಸಿಕವನ್ನು ಅನುಸರಿಸುವ ತಿಂಗಳ 13ನೇ ತಾರೀಕಿನೊಳಗೆ ಸಲ್ಲಿಸಬೇಕು.

ಸಾರ್ವಜನಿಕರ ಗಮನಕ್ಕೆ: ನಾಳೆ ‘ಕರಡು ಮತದಾರರ ಪಟ್ಟಿ’ ಪ್ರಕಟ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

Share.
Exit mobile version