ಶಿವಮೊಗ್ಗ : ಶಿವಮೊಗ್ಗದಲ್ಲಿ ಅವೈಜ್ಞಾನಿಕ ಹಂಪ್ಗೆ ಯುವಕ ಸಾವನಪ್ಪಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಯುವಕ ಮಹಮ್ಮದ್ ಇದೀಗ ಸಾವನಪ್ಪಿದ್ದಾನೆ. ಸ್ಪೀಡ್ ಬ್ರೇಕರ್ ಗಮನಿಸದೆ ಬೈಕ್ ಸವಾರ ಮಹಮ್ಮದ್ ವೇಗವಾಗಿ ಬಂದಿದ್ದ.
ಬೈಕ್ ಸ್ಕಿಡ್ ಆಗಿ ಯುವಕ ಮೊಹಮ್ಮದ್ ಗಂಭೀರವಾಗಿ ಗಾಯಗೊಂಡಿದ್ದ. ಸವಳಂಗ ರಸ್ತೆ ಎಲ್‌ಬಿಎಸ್ ನಗರ ಬಳಿ ಈ ಒಂದು ಘಟನೆ ನಡೆದಿತ್ತು. ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು ಫೆಬ್ರವರಿ 13 ರಂದು ಈ ಒಂದು ಘಟನೆ ನಡೆದಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮಹಮ್ಮದ್ ಸಾವನ್ನಪ್ಪಿದ್ದಾನೆ.








