ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ರೂ 4,000 ಫಲಾನುಭವಿಗಳ ಖಾತೆಗೆ DBT ಪೇಮೆಂಟ್ ಹಣ ವರ್ಗಾವಣೆ ಆಗಲಿದೆ.
ಈ ಬಗ್ಗೆ ಜನಾಂದೋಲನಾ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ. ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಯಜಮಾನಿಯರು, ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಹಣವನ್ನು ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ 2 ದಿನದ ಒಳಗೆ ಎರಡು ಕಂತುಗಳ ಹಣ ಅಂದರೆ 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ 4000 ರೂಪಾಯಿ ಬರುವ ಸಾಧ್ಯತೆ ಕೂಡ ಇದೇ ಎನ್ನಲಾಗಿದೆ.
ಗೃಹಲಕ್ಷ್ಮಿ ಹಣ ಸ್ಟೇಟಸ್ ತಿಳಿದುಕೊಳ್ಳುವ ವಿಧಾನ ಹೀಗಿದೆ ನೋಡಿ
ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿಕೊಳ್ಳಿ
ಪ್ಲೇ ಸ್ಟೋರ್ ನಲ್ಲಿ DBT Karnataka ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ಡೌನ್ಲೋಡ್ ಮಾಡಿದ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ
ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ನಂಬರ್ ಹಾಕಿ
ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ನಂಬರ್ ಗೆ ಬಂದು ಇರುವ ಓಟಿಪಿಯನ್ನು ಹಾಕಿ
ನಂತರ ನಾಲ್ಕು ಡಿಜಿಟ್ ಇರುವ ಯಾವುದೇ ಕೋಡನ್ನು ಕ್ರಿಯೇಟ್ ಮಾಡಿ
ನಂತರ ಮುಖಪುಟದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆ ಹಣ ಎಲ್ಲಾ ವಿವರಗಳನ್ನು ನೀವು ತುಂಬಾ ಸುಲಭವಾಗಿ ತಿಳಿದುಕೊಳ್ಳಬಹುದು